ನವದೆಹಲಿ: ರೈತರ ಪ್ರತಿಭಟನೆ ಈಗ ದೆಹಲಿಯ ಹೊರಭಾಗದಲ್ಲಿ 21 ನೇ ದಿನಕ್ಕೆ ಕಾಲಿರಿಸಿದೆ,ಆದರೆ ಇದುವರೆಗೂ ರೈತರ ಬೇಡಿಕೆಗೆ ಕೇಂದ್ರ ಸರ್ಕಾರವು ಸ್ಪಂದಿಸದಿರುದಕ್ಕೆ ಬೇಸತ್ತು ಹರಿಯಾಣದ ಗುರುದ್ವಾರದ ಸಿಖ್ ಗುರು ಬಾಬಾ ರಾಮ್ ಸಿಂಗ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

65 ರ ಹರೆಯದ ಬಾಬಾ ರಾಮ್ ಸಿಂಗ್ ಕುಂಡ್ಲಿಯ ದೆಹಲಿ-ಸೋನಿಪತ್ ಗಡಿಯಲ್ಲಿದ್ದರು,ಈ ಪ್ರದೇಶವು ರೈತರ ಪ್ರತಿಭಟನೆಯ ಕೇಂದ್ರ ಬಿಂದುವಾಗಿರುವ ಸಿಂಗು ಗಡಿಯಿಂದ 2 ಕಿ.ಮೀ ದೂರದಲ್ಲಿದೆ.ತಮ್ಮ ಆತ್ಮಹತ್ಯೆಯ ಟಿಪ್ಪಣಿಯಲ್ಲಿ, ಸರ್ಕಾರದ ಅನ್ಯಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲು ಅವರು ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.


Farmers Protest: ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು


'ರೈತರು ತಮ್ಮ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಹೋರಾಡುತ್ತಿರುವ ನೋವನ್ನು ನಾನು ಅನುಭವಿಸುತ್ತಿದ್ದೇನೆ...ಸರ್ಕಾರವು ಅವರಿಗೆ ನ್ಯಾಯ ಒದಗಿಸದ ಕಾರಣ ನಾನು ಅವರ ನೋವನ್ನು ಹಂಚಿಕೊಳ್ಳುತ್ತೇನೆ.ಅನ್ಯಾಯವನ್ನು ಮಾಡುವುದು ಪಾಪ, ಆದರೆ ಅನ್ಯಾಯವನ್ನು ಸಹಿಸುವುದು ಸಹ ಪಾಪವಾಗಿದೆ. ರೈತರನ್ನು ಬೆಂಬಲಿಸಲು, ಕೆಲವರು ತಮ್ಮ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.ನಾನು ತ್ಯಾಗ ಮಾಡಲು ನಿರ್ಧರಿಸಿದ್ದೇನೆ "ಎಂದು ಅವರು ತಮ್ಮ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ.


'ಅವರನ್ನು ಪಾಣಿಪತ್‌ನ ಪಾರ್ಕ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಆಗ ವೈದ್ಯರು ಅವರು ಮೃತಪಟ್ಟಿರುವುದನ್ನು ಧೃಡಪಡಿಸಿದರು ಎಂದು ಸೋನಿಪತ್‌ನ ಉಪ ಪೊಲೀಸ್ ಆಯುಕ್ತ ಶ್ಯಾಮ್ ಲಾಲ್ ಪೂನಿಯಾ ಹೇಳಿದ್ದಾರೆ. ಅವರ ದೇಹವನ್ನು ಈಗ ಅವರು ವಾಸಿಸುತ್ತಿದ್ದ ಕರ್ನಾಲ್ಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದರು.


ರೈತರ ಜೊತೆ ಕುಳಿತು ಮಾತನಾಡಿ: ಪ್ರಧಾನಿ ಮೋದಿಗೆ ಪ್ರಕಾಶ್ ರೈ ಸಲಹೆ


ನವೆಂಬರ್ ಅಂತ್ಯದಿಂದ, ಪಂಜಾಬ್ ಮತ್ತು ಹರಿಯಾಣದಿಂದ ದೆಹಲಿಯ ಗಡಿಯಲ್ಲಿ ರೈತರು ಜಮಾಯಿಸಿ ಸೆಪ್ಟೆಂಬರ್ನಲ್ಲಿ ಸರ್ಕಾರ ಅಂಗೀಕರಿಸಿದ ಮೂರು ಕೃಷಿ ಕ್ಷೇತ್ರದ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.ಪ್ರತಿಭಟನೆ ಪ್ರಾರಂಭವಾದಾಗಿನಿಂದ ಪ್ರತಿದಿನ ಸರಾಸರಿ ಒಬ್ಬ ರೈತ ಸಾವನ್ನಪ್ಪಿದ್ದಾನೆ ಎಂದು ಮಹಾರಾಷ್ಟ್ರದ ರೈತ ಮುಖಂಡ ರಿಷಿಪಾಲ್ ಹೇಳಿದ್ದಾರೆ.


'ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ ಮತ್ತು ಹುತಾತ್ಮರಾದ ಎಲ್ಲಾ ರೈತರಿಗೆ ಗೌರವ ದಿನ (ಶ್ರದ್ಧಾಂಜಲಿ ದಿವಾಸ್) ಡಿಸೆಂಬರ್ 20 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಹಳ್ಳಿಗಳಲ್ಲಿ ಮತ್ತು ತಹಸಿಲ್ ಪ್ರಧಾನ ಕಚೇರಿಯಲ್ಲಿ ದೇಶಾದ್ಯಂತ ಆಯೋಜಿಸಲಾಗುವುದು" ಎಂದು ಅವರು ಹೇಳಿದರು.