Operation Ganga: ಉಕ್ರೇನ್ನಿಂದ ತವರಿಗೆ ಬಂದಿಳಿದ 240 ಭಾರತೀಯರ ಹೊತ್ತ ಮೂರನೇ ವಿಮಾನ
Operation Ganga: 240 ಭಾರತೀಯರನ್ನು ಹೊತ್ತ ಮೂರನೇ ವಿಮಾನವು ಭಾನುವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಬಂದಿಳಿದಿದೆ.
ನವದೆಹಲಿ: ಬುಡಾಪೆಸ್ಟ್‌ನಿಂದ 240 ಭಾರತೀಯರನ್ನು ಹೊತ್ತ ಮೂರನೇ ವಿಮಾನವು ಭಾನುವಾರ (ಫೆಬ್ರವರಿ 27, 2022) ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಬಂದಿಳಿದಿದೆ.
ಇದನ್ನೂ ಓದಿ: Russia Ukraine War: ಎಲ್ಲಾ ದಿಕ್ಕುಗಳಿಂದಲೂ ಉಕ್ರೇನ್ ನ್ನು ಆಕ್ರಮಿಸಿದ ರಷ್ಯಾ ಸೈನ್ಯ...!
ಇದಕ್ಕೂ ಮೊದಲು, ಉಕ್ರೇನ್‌ನಲ್ಲಿ ಸಿಲುಕಿದ್ದ 250 ಭಾರತೀಯ ಪ್ರಜೆಗಳನ್ನು ಹೊತ್ತ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಎರಡನೇ ವಿಮಾನವು ಭಾನುವಾರ ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ರಷ್ಯಾ ಸೇನಾ ದಾಳಿ (Russia Ukraine War)ಯ ನಡುವೆ ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯವನ್ನು ಭಾರತ ಶನಿವಾರವಷ್ಟೇ ಆರಂಭಿಸಿತು.
ಮೊದಲ ಪಾರುಗಾಣಿಕಾ ವಿಮಾನ AI1944 ಶನಿವಾರ ಸಂಜೆ ಬುಕಾರೆಸ್ಟ್‌ನಿಂದ 219 ಜನರನ್ನು ವಾಣಿಜ್ಯ ನಗರಿ ಮುಂಬೈಗೆ ಕರೆತಂದಿತು.
ಸುಮಾರು 250 ಭಾರತೀಯರಿದ್ದ AI1942 ಎಂಬ 2ನೇ ವಿಮಾನವು ದೆಹಲಿ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ಬಂದಿಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ 16 ಸಾವಿರ ಭಾರತೀಯರು:
ಫೆ.24ರಂದು ಮಾತನಾಡಿದ್ದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ವಿದ್ಯಾರ್ಥಿಗಳು ಸೇರಿದಂತೆ ಸುಮಾರು 16 ಸಾವಿರ ಭಾರತೀಯರು ಉಕ್ರೇನ್ (Ukraine)ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: Ukraine Russia War: ವಿಶ್ವಸಂಸ್ಥೆಯಲ್ಲಿ ಭಾರತದ ನಡೆಯನ್ನು ಶ್ಲಾಘಿಸಿದ ರಷ್ಯಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.