ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿನಿತ್ಯ 7 ಸಾವಿರಕ್ಕೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗುತ್ತಿವೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಮತ್ತೊಮ್ಮೆ ಭೀತಿ ಸೃಷ್ಟಿಯಾಗಿದೆ. ಅದೇ ಸಮಯದಲ್ಲಿ ಹೆಚ್ಚುತ್ತಿರುವ ಕರೋನ ಪ್ರಕರಣಗಳ ದೃಷ್ಟಿಯಿಂದ ಅನೇಕ ರೀತಿಯ ಪ್ರಶ್ನೆಗಳು ಸಹ ಉದ್ಭವಿಸುತ್ತಿವೆ. ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಬಹುದೇ? ಮಾರುಕಟ್ಟೆಗಳನ್ನು ಬಂದ್ ಮಾಡಲಾಗುವುದೇ? ಎಂಬಿತ್ಯಾದಿ ಪ್ರಶ್ನೆಗಳು ಮೂಡುತ್ತಿವೆ. ಏತನ್ಮಧ್ಯೆ ದೆಹಲಿ ಆರೋಗ್ಯ ಸಚಿವ ಸತೇಂದ್ರ ಜೈನ್ (Satyendar Jain) ಮಹತ್ವದ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್  ವಿಧಿಸುವ ಸಾಧ್ಯತೆ ಬಗ್ಗೆ ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ  ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ರಾಷ್ಟ್ರ ರಾಜಧಾನಿಯಲ್ಲಿ ಕರೋನವೈರಸ್ (Coronavirus) ಸೋಂಕು ಉತ್ತುಂಗಕ್ಕೇರಿದೆ. ಆದರೆ ದೆಹಲಿಯಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಲಾಕ್‌ಡೌನ್ (Lockdown) ಜಾರಿಗೊಳಿಸುವ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕೋವಿಡ್ -19 ಹರಡುವುದನ್ನು ತಡೆಗಟ್ಟುವಲ್ಲಿ ಮಾಸ್ಕ್ ಧರಿಸುವ ಪ್ರಾಮುಖ್ಯತೆಯನ್ನು ಅವರು ಪುನರುಚ್ಚರಿಸಿದರು.


ಶಿರಡಿ ಸಾಯಿಬಾಬಾ ಭಕ್ತರಿಗೆ ಗುಡ್ ನ್ಯೂಸ್


ದೆಹಲಿಯಲ್ಲಿ ಕೋವಿಡ್ -19 (Covid 19) ರ ಮೂರನೇ ತರಂಗ ಉತ್ತುಂಗಕ್ಕೇರಿದೆ. ಆದರೆ ಕಾರೋನಾವೈರಸ್ ತಡೆಗಟ್ಟಲು ಲಾಕ್‌ಡೌನ್ ಜಾರಿಗೊಳಿಸುವುದೇ ಪರಿಹಾರ ಅಥವಾ ಅದೊಂದೇ ಪರಿಣಾಮಕಾರಿ ಹೆಜ್ಜೆ ಎಂದು ನಾನೂ ಭಾವಿಸುವುದಿಲ್ಲ. ಅದಕ್ಕಿಂತ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಜೈನ್ ಹೇಳಿದರು.


ಕೊವಿಡ್ 19 ಮಕ್ಕಳ ಮೇಲೆ ಯಾಕೆ ಪ್ರಭಾವ ಬೀರಲ್ಲ, ರಹಸ್ಯ ಭೇದಿಸಿದ ವಿಜ್ಞಾನಿಗಳು


ಇದಕ್ಕೂ ರಾಷ್ಟ್ರ ರಾಜಧಾನಿ ಸೋಂಕಿನ ಹಿಡಿತದಲ್ಲಿರುವುದರ ಹಿನ್ನೆಲೆಯಲ್ಲಿ ಭಾನುವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ದೆಹಲಿಯ ಕೋವಿಡ್ -19 ರೋಗಿಗಳಿಗಾಗಿ ಹೆಚ್ಚಾಗಿ ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳನ್ನು ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೆ ಕರೋನಾ ಪರೀಕ್ಷೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ.