ನವದೆಹಲಿ : ಎಲ್ಲೋ ದೂರದಲ್ಲಿ ಹಾವು ಕಂಡರೂ ಕೈ ಕಾಲು ನಡುಗಲು ಆರಂಭವಾಗುತ್ತದೆ. ಇನ್ನು ಕಣ್ಣ ಮುಂದೆಯೇ ರಾಶಿ ರಾಶಿ ಹಾವುಗಳಿದ್ದರೆ (Snake video) ಸ್ಥಿತಿ ಏನಾದೀತು? ಆದರೆ ಇಲ್ಲೊಬ್ಬ ವ್ಯಕ್ತಿ ಗೋಣಿ ಚೀಲ ತುಂಬಾ ಹಾವನ್ನು ಹಿಡಿದುಕೊಂಡು ಸಾಗುತ್ತಾನೆ (Snake viral video). ಇಷ್ಟೊಂದು  ಸಂಖ್ಯೆಯ ಹಾವನ್ನು ಹಿಡಿದು ಕೊಂದು ಹೋಗುವ ವ್ಯಕ್ತಿ ಮಾಡುವುದಾದರೂ ಏನು ಎನ್ನುವುದು ಕುತೂಹಲ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ( Viral video)ಹರಿದಾಡುತ್ತಿದೆ. ಈ ವಿಡಿಯೋ ವೀಕ್ಷಕರ ಹುಬ್ಬೇರುವಂತೆ ಮಾಡಿದೆ. 


COMMERCIAL BREAK
SCROLL TO CONTINUE READING

ವ್ಯಕ್ತಿಯೊಬ್ಬ ಸುಮಾರು 300 ಹಾವುಗಳನ್ನು ಗೋಣಿಚೀಲದಲ್ಲಿ ತಂದು ಕಾಡಿಗೆ ಬಿಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು  (Snake viral video). ಇಷ್ಟು ಹಾವುಗಳನ್ನು ಒಟ್ಟಿಗೆ ನೋಡುವುದೆಂದರೆ ಮೈ ಜುಮ್ಮೆನ್ನುತ್ತದೆ. 


ಇದನ್ನೂ ಓದಿ : Viral Video: ತನ್ನ ಮರಿಯ ಪ್ರಾಣ ರಕ್ಷಣೆಗಾಗಿ ಹಾವಿನ ಜೊತೆ ಸೆಣೆಸಾಡಿ ಗೆದ್ದ ಇಲಿ


ಗೋಣಿ ಚೀಲದಲ್ಲಿತ್ತು 300 ಹಾವು : 
ಸಾಮಾಜಿಕ ಜಾಲತಾಣದಲ್ಲಿ (Social media) ಹೆಚ್ಚು ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ (Viral video), ವ್ಯಕ್ತಿಯೊಬ್ಬ ಹಸಿರು ಗೋಣಿಚೀಲ ಹಿಡಿದು ಕಾಡಿಗೆ ಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ. ಆ ಗೋಣಿ ಚೀಲದಲ್ಲಿ ಹಲವು ಪ್ರಕಾರದ ಹಾವುಗಳನ್ನು ಕಾಣಬಹುದು. ವ್ಯಕ್ತಿಯು ಚೀಲದಲ್ಲಿರುವ ಹಾವನ್ನು ನೆಲಕ್ಕೆ ಬಿಡುತ್ತಾನೆ. ಅಷ್ಟೇ ಅಲ್ಲ ಹಾವುಗಳ ಗೊಂಚಲುಗಳನ್ನು ತನ್ನ ಕೈಯಿಂದಲೇ ಬಿಡಿಸಿ ಬಹಳ ಸುಲಭವಾಗಿ ಹಾವುಗಳನ್ನು ಕಾಡಿನಲ್ಲಿ ಹರಿಯಲು ಸಹಾಯ ಮಾಡುತ್ತಾನೆ (Snake video). 


 

 

 

 



 

 

 

 

 

 

 

 

 

 

 

A post shared by Meme wala (@memewalanews)


 


ಈ ವೀಡಿಯೊವನ್ನು (Viral video) ನೋಡಿದ ನಂತರ ರೋಮಾಂಚನ ವಾಗುವುದಂತೂ ಸಹಜ. ಮೆಮೆವಾಲನ್ಯೂಸ್ ಹೆಸರಿನ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ.  ವಿಡಿಯೋ ವೀಕ್ಷಿಸಿದವರು ಇದರ ಬಗ್ಗೆ ಭಾರೀ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 


ಇದನ್ನೂ ಓದಿ : WATCH:ಸ್ನೇಹಿತನನ್ನು ರಕ್ಷಿಸಲು ಸಿಂಹಿಣಿಯೊಂದಿಗೆ ಕದನಕ್ಕಿಳಿದ ಎಮ್ಮೆ.. ಮೈನವಿರೇಳಿಸುವ ದೃಶ್ಯ ವೈರಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.