Viral Chicken Video: ಈ ಕೋಳಿ ಮರಿಗೆ ಎರಡಲ್ಲ, ನಾಲ್ಕು ಕಾಲುಗಳು: ವಿಡಿಯೋ ನೋಡಿಲ್ಲ ಅಂದ್ರೆ ಅಪರೂಪದ ದೃಶ್ಯ ಮಿಸ್ ಆಗುತ್ತೆ
Viral Chicken Video: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಕ್ಯಾಮೆರಾದ ಮುಂದೆ ಒಟ್ಟು ನಾಲ್ಕು ಕಾಲುಗಳನ್ನು ಹೊಂದಿರುವ ಕೋಳಿ ಮರಿಯನ್ನು ತೋರಿಸಿರುವುದನ್ನು ನೀವು ಸ್ಪಷ್ಟವಾಗಿ ನೋಡಬಹುದು. ವೀಡಿಯೋದಲ್ಲಿ, `ಇಲ್ಲಿ ನಾಲ್ಕು ಕಾಲುಗಳಿರುವ ಕೋಳಿ ಮರಿ ಜನಿಸಿದ್ದು, ಈ ಮರಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದು ಸಂಪೂರ್ಣವಾಗಿ ಆರೋಗ್ಯಕರವಾಗಿದೆ` ಎಂದು ವ್ಯಕ್ತಿ ಹೇಳುತ್ತಿರುವುದು ಕೇಳಿಬಂದಿದೆ. ಆ ಕೋಳಿ ಮರಿಯ ತಾಯಿ ಕೋಳಿ ಸೇರಿದಂತೆ ಇತರ ಕೋಳಿಗಳನ್ನೂ ಸಹ ವಿಡಿಯೋದಲ್ಲಿ ವ್ಯಕ್ತಿ ತೋರಿಸಿದ್ದಾನೆ.
Viral Chicken Video: ಎಲ್ಲಾ ರೀತಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಆದರೆ ಕೆಲವು ವೀಡಿಯೊಗಳನ್ನು ನೋಡಿದ್ರೆ ನಂಬಲು ಸಾಧ್ಯವಿಲ್ಲ. ಇಲ್ಲಿಯವರೆಗೆ ನೀವು ಕೇವಲ 2 ಕಾಲಿನ ಕೋಳಿಗಳನ್ನು ಮಾತ್ರ ನೋಡಿರಬೇಕು. ಆದರೆ ಒಂದು ವಿಸ್ಮಯವು ಜಗತ್ತಿನಲ್ಲಿ ನಡೆದಿದೆ. ಅದು ಸುಲಭವಾಗಿ ನಂಬಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಜನಿಸಿದ ಕೋಳಿ ಮರಿಗೆ ನಾಲ್ಕು ಕಾಲುಗಳಿವೆ ಎಂದು ವ್ಯಕ್ತಿಯೊಬ್ಬ ತನ್ನ ಮೊಬೈಲ್ ಕ್ಯಾಮರಾದಲ್ಲಿ ಆಘಾತಕಾರಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಇದನ್ನೂ ಓದಿ: PM Modi mother Heeraben Modi passed away : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಕ್ಯಾಮೆರಾದ ಮುಂದೆ ಒಟ್ಟು ನಾಲ್ಕು ಕಾಲುಗಳನ್ನು ಹೊಂದಿರುವ ಕೋಳಿ ಮರಿಯನ್ನು ತೋರಿಸಿರುವುದನ್ನು ನೀವು ಸ್ಪಷ್ಟವಾಗಿ ನೋಡಬಹುದು. ವೀಡಿಯೋದಲ್ಲಿ, "ಇಲ್ಲಿ ನಾಲ್ಕು ಕಾಲುಗಳಿರುವ ಕೋಳಿ ಮರಿ ಜನಿಸಿದ್ದು, ಈ ಮರಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದು ಸಂಪೂರ್ಣವಾಗಿ ಆರೋಗ್ಯಕರವಾಗಿದೆ" ಎಂದು ವ್ಯಕ್ತಿ ಹೇಳುತ್ತಿರುವುದು ಕೇಳಿಬಂದಿದೆ. ಆ ಕೋಳಿ ಮರಿಯ ತಾಯಿ ಕೋಳಿ ಸೇರಿದಂತೆ ಇತರ ಕೋಳಿಗಳನ್ನೂ ಸಹ ವಿಡಿಯೋದಲ್ಲಿ ವ್ಯಕ್ತಿ ತೋರಿಸಿದ್ದಾನೆ.
ಆ ಮರಿ ದೊಡ್ಡದಾದ ಬಳಿಕ ಮತ್ತೆ ವಿಡಿಯೋ ಮಾಡಿ ತೋರಿಸುತ್ತೇನೆ ಎಂದೂ ಆ ವ್ಯಕ್ತಿ ಹೇಳಿದ್ದಾನೆ. ಈ ವೀಡಿಯೋ ಇಂಟರ್‌ನೆಟ್ ನಲ್ಲಿ ಭಾರೀ ವೈರಲ್ ಆಗುತ್ತಿದೆ. ವೀಡಿಯೋ ನೋಡಿದರೂ ಸಹ ಜನರಿಗೆ ನಂಬಲು ಸಾಧ್ಯವಾಗುತ್ತಿಲ್ಲ.
@saquib12pathans ಎಂಬ ಬಳಕೆದಾರರು ಈ ವೀಡಿಯೊವನ್ನು Instagram ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವೀಡಿಯೊದ ಶೀರ್ಷಿಕೆಯು "ಕೋಳಿ ಮರಿಯ ನಾಲ್ಕು ಕಾಲುಗಳು" ಎಂದು ನೀಡಲಾಗಿದೆ. ಈ ವಿಡಿಯೋಗೆ ಸಾಕಷ್ಟು ಮಂದಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನೂರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: Heeraben Modi passed away: ಪ್ರಧಾನಿ ತಾಯಿ ಹೀರಾಬೆನ್ ನಿಧನ: ಕಣ್ಣೀರು ತರಿಸುವಂತಿದೆ ‘ಪ್ರಿಯ ಪುತ್ರ’ನ ಭಾವುಕ ನುಡಿ
"ಇದು ಅದ್ಭುತವಾಗಿದೆ. ಕೋಳಿಗೆ ನಾಲ್ಕು ಕಾಲುಗಳು ಹೇಗೆ. ನಂಬಲು ಸಾಧ್ಯವಿಲ್ಲ" ಎಂದು ಒಬ್ಬ ಸೋಶಿಯಲ್ ಮೀಡಿಯಾ ಬಳಕೆದಾರ ಬರೆದಿದ್ದಾರೆ. ಅದೇ ರೀತಿ ಇನ್ನೂ ಹಲವರು ಕಾಮೆಂಟ್ ಬಾಕ್ಸ್ ನಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.