Shraddha Walkar Murder Case: ನವದೆಹಲಿ: ಮೇ 18 ರಂದು ಅಫ್ತಾಬ್ ಅಮೀನ್ ಪೂನಾವಾಲಾ ಎಂಬ ಕ್ರೂರಿ ತನ್ನ ಪ್ರೇಯಸಿ ಶ್ರದ್ಧಾ ವಾಕರ್‌ನನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪ ಎದುರಿಸುತ್ತಿದ್ದಾನೆ. ದೆಹಲಿಯಲ್ಲಿ ನಡೆದ ಈ ಘಟನೆ ಬೆಚ್ಚಿಬೀಳಿಸುವಂತಿದೆ.


COMMERCIAL BREAK
SCROLL TO CONTINUE READING

ಅಫ್ತಾಬ್ ಮತ್ತು ಶ್ರದ್ಧಾ ನಡುವೆ ಮದುವೆ ವಿಚಾರಕ್ಕೆ ನಡೆದ ಜಗಳದ ನಂತರ ಮೇ 18 ರಂದು ಆತ ಶ್ರದ್ಧಾ ವಾಕರ್ ನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಅದಾದ ಬಳಿಕ ಆಕೆಯ ಮೃತದೇಹವನ್ನು ತುಂಡು ತುಂಡಾಗಿ 35 ಪೀಸ್ ಗಳಾಗಿ ಕತ್ತರಿಸಿ ದೆಹಲಿ ಹೊರವಲಯದ ಪ್ರದೇಶಗಳಲ್ಲಿ ಎಸೆದಿದ್ದಾನೆ. ಈ ಕೃತ್ಯ ಎಸಗಲು 18 ರಾತ್ರಿಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Aftab Jail Video: ಪ್ರೇಯಸಿಯನ್ನು ಕೊಂದು 35 ಪೀಸ್ ಮಾಡಿದ್ದ ಕ್ರೂರಿಗೆ ಜೈಲಲ್ಲಿ ಗಾಢ ನಿದ್ರೆ! ವಿಡಿಯೋ ನೋಡಿ


ಅಫ್ತಾಬ್ ಬಾಣಸಿಗನಾಗಿ ತರಬೇತಿ ಪಡೆದಿದ್ದು, ಆ ಬಳಿಕ ಕಾಲ್ ಸೆಂಟರ್ ಕೆಲಸಗಾರನಾಗಿದ್ದ. ಶ್ರದ್ಧಾಳನ್ನು ಕೊಲೆ ಮಾಡಿದ ಬಳಿಕ ದೇಹವನ್ನು ಕತ್ತರಿಸಿ, ಎಲ್ಲಾ ರಕ್ತವನ್ನು ಆಸಿಡ್ ಮತ್ತು ಸೋಂಕುನಿವಾರಕದಿಂದ ಸ್ವಚ್ಛಗೊಳಿಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.


ಇವಿಷ್ಟೇ ಅಲ್ಲದೆ, ಮನೆಯಲ್ಲಿಯೇ ಕುಳಿತುಕೊಂಡು ಹೊರಗಡೆಯಿಂದ ಫುಡ್ ಆರ್ಡರ್ ಮಾಡಿದ್ದನ್ನು ಕೂಡ ಫ್ರಿಡ್ಜ್ ನಲ್ಲಿ ಇಟ್ಟಿದ್ದನಂತೆ. ಅದೇ ಫ್ರಿಡ್ಜ್ ನಲ್ಲಿ ಶ್ರದ್ಧಾ ಮೃತದೇಹ ಕೂಡ ಇತ್ತು ಎಂಬುದು ತಿಳಿದುಬಂದಿದೆ.


ಅಫ್ತಾಬ್ ಶ್ರದ್ಧಾಳನ್ನು ಕೊಲೆ ಮಾಡಿದ ಮರುದಿನವೇ ಇನ್ನೊಬ್ಬ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದ. ಅಷ್ಟೇ ಅಲ್ಲದೆ, ಒಂದೆಡೆ ಹೆಣ ಮನೆಯಲ್ಲಿರುವ ಸಂದರ್ಭದಲ್ಲಿಯೇ ಆಕೆಯನ್ನು ಮನೆಗೆ ಕರೆ ತಂದಿದ್ದ ಎಂದು ತಿಳಿದುಬಂದಿದೆ.


ಶ್ರದ್ಧಾಳ ದೇಹವನ್ನು ಕೊಚ್ಚಿದ ಅದೇ ಕೋಣೆಯಲ್ಲಿ ಅಫ್ತಾಬ್ ಮಲಗುತ್ತಿದ್ದನಂತೆ. ಮಲಗುವ ಮುನ್ನ ಆಕೆಯ ರುಂಡವನ್ನು ನೋಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Shradha Murder Case: ಶ್ರದ್ಧಾ ಕೊಲೆಯ ಬಳಿಕ ಬೇರೆ ಹುಡುಗಿ ಜೊತೆ ಕಿರಾತಕ ಅಫ್ತಾಬ್ ಸಂಬಂಧ!?


ಅಫ್ತಾಬ್ ಕ್ರೈಮ್ ಥ್ರಿಲ್ಲರ್‌ಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸಲು ಇಷ್ಟಪಡುತ್ತಿದ್ದ. ಸರಣಿ ಕೊಲೆಗಾರನನ್ನು ಆಧರಿಸಿದ ಅಮೇರಿಕನ್ ಸರಣಿ "ಡೆಕ್ಸ್ಟರ್" ನಿಂದ ಅವನು ಸ್ಫೂರ್ತಿ ಪಡೆದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.