Aftab Jail Video: ಪ್ರೇಯಸಿಯನ್ನು ಕೊಂದು 35 ಪೀಸ್ ಮಾಡಿದ್ದ ಕ್ರೂರಿಗೆ ಜೈಲಲ್ಲಿ ಗಾಢ ನಿದ್ರೆ! ವಿಡಿಯೋ ನೋಡಿ

Shraddha Walkar Murder Case: ಒಂದಿಬ್ಬರು ಪೊಲೀಸರು ಅವನ ಮೇಲೆ ಕಣ್ಣಿಟ್ಟು ಹೊರಗೆ ಕುಳಿತಿದ್ದಾರೆ. ಅಷ್ಟೇ ಅಲ್ಲದೆ, ಅಧಿಕಾರಿಗಳು ಸೆಲ್‌ನ ಹೊರಗೆ ಸುಳಿದಾಡುತ್ತಿರುವುದನ್ನು ಸಹ ಕಾಣಬಹುದು, ಮುಂದಿನ ನ್ಯಾಯಾಲಯದ ಆದೇಶದವರೆಗೆ ಆತನನ್ನು ಐದು ದಿನಗಳವರೆಗೆ ಇರಿಸಲಾಗುತ್ತದೆ.

Written by - Bhavishya Shetty | Last Updated : Nov 15, 2022, 12:54 PM IST
    • ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಪ್ರಿಯಕರ
    • ಅಫ್ತಾಬ್ ಅಮೀನ್ ಪೂನಾವಾಲಾ ಲಾಕ್-ಅಪ್‌ನಲ್ಲಿದ್ದಾನೆ
    • ಈತನ ಮೇಲೆ ನಿಗಾ ಇರಿಸಲು 24/7 ಸಿಸಿಟಿವಿಯನ್ನೂ ಸಹ ಅಳವಡಿಸಲಾಗಿದೆ
Aftab Jail Video: ಪ್ರೇಯಸಿಯನ್ನು ಕೊಂದು 35 ಪೀಸ್ ಮಾಡಿದ್ದ ಕ್ರೂರಿಗೆ ಜೈಲಲ್ಲಿ ಗಾಢ ನಿದ್ರೆ! ವಿಡಿಯೋ ನೋಡಿ title=
Shraddha Walkar

Shraddha Walkar Murder Case: ತನ್ನ ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯಾದ್ಯಂತ ಎಸೆದಿರುವ ಅಫ್ತಾಬ್ ಅಮೀನ್ ಪೂನಾವಾಲಾ ಲಾಕ್-ಅಪ್‌ನಲ್ಲಿದ್ದಾನೆ. ಈತನ ಮೇಲೆ ಪೊಲೀಸ್ ನಿಗಾ ಇರಿಸಿದ್ದಾರೆ. ಇದರ ಹೊರತಾಗಿ 24/7 ಕಾವಲಿಗಾಗಿ ಸಿಸಿಟಿವಿಯನ್ನೂ ಸಹ ಅಳವಡಿಸಲಾಗಿದೆ. ಇದರ ಒಂದು ತುಣುಕು ಇದೀಗ ಬಹಿರಂಗವಾಗಿದೆ.  

ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ 28 ವರ್ಷದ ಅಫ್ತಾಬ್ ಸೆಲ್‌ನಲ್ಲಿ ಮಲಗಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ.

ಇದನ್ನೂ ಓದಿ: Shradha Murder Case: ಈ ವೆಬ್ ಸಿರೀಸ್‌ನಿಂದ ಸಿಕ್ಕಿತ್ತಂತೆ ಕೊಲೆ ಐಡಿಯಾ! ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ಯಾಕೆ? ಇಲ್ಲಿದೆ ಬೆಚ್ಚಿ ಬೀಳಿಸುವ ಸತ್ಯ

ಒಂದಿಬ್ಬರು ಪೊಲೀಸರು ಅವನ ಮೇಲೆ ಕಣ್ಣಿಟ್ಟು ಹೊರಗೆ ಕುಳಿತಿದ್ದಾರೆ. ಅಷ್ಟೇ ಅಲ್ಲದೆ, ಅಧಿಕಾರಿಗಳು ಸೆಲ್‌ನ ಹೊರಗೆ ಸುಳಿದಾಡುತ್ತಿರುವುದನ್ನು ಸಹ ಕಾಣಬಹುದು, ಮುಂದಿನ ನ್ಯಾಯಾಲಯದ ಆದೇಶದವರೆಗೆ ಆತನನ್ನು ಐದು ದಿನಗಳವರೆಗೆ ಇರಿಸಲಾಗುತ್ತದೆ.

ಅಫ್ತಾಬ್ ಪೂನಾವಾಲಾ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದ ಅತ್ಯಂತ ಭಯಾನಕ ಅಪರಾಧವನ್ನು ಎಸಗಿದ್ದು, ತನ್ನ  ಪ್ರೇಯಸಿಯನ್ನು ತುಂಡು ತುಂಡಾಗಿ ಕತ್ತರಿಸಿ ಈ ಕೃತ್ಯ ಎಸಗಿದ್ದಾನೆ.  

ಅಫ್ತಾಬ್ ಮತ್ತು ಶ್ರದ್ಧಾ ನಡುವೆ ಮದುವೆ ವಿಚಾರಕ್ಕೆ ನಡೆದ ಜಗಳದ ನಂತರ ಮೇ 18 ರಂದು ಆತ ಶ್ರದ್ಧಾ ವಾಕರ್ ನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಅದಾದ ಬಳಿಕ ಆಕೆಯ ಮೃತದೇಹವನ್ನು ತುಂಡು ತುಂಡಾಗಿ 35 ಪೀಸ್ ಗಳಾಗಿ ಕತ್ತರಿಸಿ ದೆಹಲಿ ಹೊರವಲಯದ ಪ್ರದೇಶಗಳಲ್ಲಿ ಎಸೆದಿದ್ದಾನೆ. ಈ ಕೃತ್ಯ ಎಸಗಲು 18 ರಾತ್ರಿಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಏಪ್ರಿಲ್ ಅಥವಾ ಮೇನಲ್ಲಿ ಮುಂಬೈನಿಂದ ದೆಹಲಿಗೆ ತೆರಳಿದ್ದ ಜೋಡಿ ಮದುವೆ ವಿಚಾರದಲ್ಲಿ ಜಗಳವಾಡುತ್ತಿದ್ದರು, 26 ವರ್ಷದ ಶ್ರದ್ಧಾ ಮದುವೆಯಾಗುವಂತೆ ಅಫ್ತಾಬ್ ನನ್ನು ಒತ್ತಾಯಿಸಿದ್ದಾಳೆ.

ಮುಂಬೈನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿರುವ ಶ್ರದ್ಧಾ ಡೇಟಿಂಗ್ ಆಪ್ ಮೂಲಕ ಅಫ್ತಾಬ್ ನನ್ನು ಭೇಟಿಯಾಗಿದ್ದಳು. ಆಕೆಯ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮನೆ ಬಿಟ್ಟು ಬಂದಿದ್ದ ಶ್ರದ್ಧಾ, ಅಫ್ತಾಬ್ ಜೊತೆಗೆ ದೆಹಲಿಯಲ್ಲಿ ಬಂದು ನೆಲೆಸಿದ್ದಳು.

ಎರಡು ತಿಂಗಳಿಗೂ ಹೆಚ್ಚು ಕಾಲ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಶ್ರದ್ಧಾಳ ಸ್ನೇಹಿತೆ ಸಹೋದರನಿಗೆ ಹೇಳಿದ ನಂತರ ಘಟನೆಯ ತೀವ್ರತೆ ಬೆಳಕಿಗೆ ಬಂದಿದೆ. ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳೂ ನಿಷ್ಕ್ರಿಯವಾಗಿದ್ದವು.

ನವೆಂಬರ್‌ನಲ್ಲಿ ಶ್ರದ್ಧಾ ತಂದೆ ನಾಪತ್ತೆ ದೂರು ದಾಖಲಿಸಿದ್ದರು. ವಿಕಾಸ್ ಮದನ್ ವಾಕರ್ ಅವರು ನವೆಂಬರ್ 8 ರಂದು ದೆಹಲಿಗೆ ಬಂದು ಶ್ರದ್ಧಾ ಇದ್ದಾಳೆಯೇ ಎಂದು ಪರೀಕ್ಷಿಸಿದ್ದರು. ಆದರೆ ಆ ಸಂದರ್ಭದಲ್ಲಿ ಅಪಾರ್ಟ್ ಮೆಂಟ್ ಗೆ ಬೀಗ ಹಾಕಿರುವುದನ್ನು ಕಂಡು, ಅಪಹರಣ ಪ್ರಕರಣವನ್ನು ದಾಖಲಿಸಲು ಮುಂದಾಗಿದ್ದರು.

ಇದನ್ನೂ ಓದಿ: ಶ್ರದ್ಧಾ ರುಂಡವನ್ನು ಅಫ್ತಾಬ್ ದಿನವೂ ನೋಡುತ್ತಿದ್ದ : ಹೇಗಿತ್ತು ಆ ಕರಾಳರಾತ್ರಿ...!

ಪೂನಾವಾಲನನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ದೇಹದ ಎಲ್ಲಾ ಭಾಗಗಳು ಸದ್ಯ ಪತ್ತೆಯಾಗಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News