Ship Of Love: ಕೋಲ್ಕತ್ತಾದ ರೈತರೊಬ್ಬರು ತಮ್ಮ ಕನಸಿನ ಮನೆಯನ್ನು ನಿರ್ಮಿಸುತ್ತಿದ್ದು ಅದನ್ನು ನೋಡಿದ್ರೆ ಟೈಟಾನಿಕ್ ಹಡಗಿನಂತೆ ಕಾಣುತ್ತಿದೆ. ಉತ್ತರ 24 ಪರಗಣದ ಹೆಲೆಂಚಾ ಜಿಲ್ಲೆಯ ನಿವಾಸಿ ಮಿಂಟು ರಾಯ್ ಅವರು 2010 ರಲ್ಲಿ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಇಂದಿಗೂ ಕೂಡ ಅದು ಪೂರ್ಣವಾಗಿಲ್ಲ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rain Forecast: ರೈತರಿಗೆ ಭಾರೀ ಆತಂಕದ ಸುದ್ದಿ! ಈ ವರ್ಷ ದೇಶದಲ್ಲಿ ಸರಾಸರಿ ಮಳೆಯಾಗೋದು ಇಷ್ಟೇ..!


13 ವರ್ಷಗಳು ಕಳೆದಿವೆ. ಮಿಂಟು ಅವರ ಕನಸಿನ ಮನೆಯನ್ನು 2024 ರ ವೇಳೆಗೆ ಸಿದ್ಧಪಡಿಸುವ ಭರವಸೆಯೊಂದಿಗೆ ಮನೆಯ ಕೆಲಸ ಇನ್ನೂ ನಡೆಯುತ್ತಿದೆ. ಸುಮಾರು 20-25 ವರ್ಷಗಳಿಂದ ಸಿಲಿಗುರಿಯ ಫಾಸಿದಾವಾ ಪ್ರದೇಶದಲ್ಲಿ ನೆಲೆಸಿರುವ ಮಿಂಟು ಅವರು ಕೃಷಿಯನ್ನು ಮಾಡುತ್ತಾರೆ.


2010 ರಲ್ಲಿ ಅವರು ಜೀವನದ ಕನಸಿನ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದರು. ಈ ಮನೆಯನ್ನು ಹಡಗಿನಂತೆ ನಿರ್ಮಿಸಬೇಕು ಎಂಬುದು ಅವರ ಇಚ್ಛೆಯಾಗಿತ್ತು. ಆದರೆ ಮನೆ ತಯಾರಾಗುವ ಮೊದಲು ಸಾಕಷ್ಟು ಪ್ರಯತ್ನ ಮತ್ತು ಇನ್ನೂ ಹೆಚ್ಚಿನ ತಾಳ್ಮೆ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿದದ್ದು, ಹಣಕಾಸಿನ ಅಡಚಣೆ ಬಂದಾಗ.


ಹಣಕಾಸಿನ ಅಡಚಣೆಯಿಂದ ಕೆಲವು ಸಂದರ್ಭಗಳಲ್ಲಿ ಕೆಲಸ ಸ್ಥಗಿತಗೊಂಡಿತ್ತಂತೆ. ಆದರೆ ಅವರು ತಮ್ಮ ಕನಸನ್ನು ಬಿಟ್ಟುಕೊಡಲಿಲ್ಲ. ಮೇಸ್ತ್ರಿಗಳಿಗೆ ಕೊಡುವಷ್ಟು ಹಣ ತನ್ನಲ್ಲಿಲ್ಲ ಎಂದು ಮಿಂಟು ಮನಗಂಡಾಗ, ಮೂರು ವರ್ಷಗಳ ಕಾಲ ನೇಪಾಳಕ್ಕೆ ಹೋಗಿ ಅಲ್ಲಿ ಕಲ್ಲಿನ ಕೆಲಸ ಮಾಡಲು ಕಲಿತರು.


ಆ ಬಳಿಕ ಊರಿಗೆ ಬಂದ ಮಿಂಟು ಬೆಳೆಗಳನ್ನು ನಾಟಿ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ನಂತರ ಬಂದ ಹಣವನ್ನು ಉಳಿಯಾಯ ಮಾಡತೊಡಗಿದರು. ಮಿಂಟು ಅವರು ಈ ಮನೆಗೆ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.


ಈ ಮನೆ 39 ಅಡಿ ಉದ್ದ ಮತ್ತು 13 ಅಡಿ ಅಗಲವಿದೆ. ಸುಮಾರು 30 ಅಡಿ ಎತ್ತರದ ಮನೆ ಈ ಪ್ರದೇಶದ ಪ್ರಮುಖ ಆಕರ್ಷಣೆಯಾಗಿದೆ. ಮನೆ 9.5 ದಶಮಾಂಶ ಭೂಮಿಯಲ್ಲಿ ನಿಂತಿದೆ.


ಇದನ್ನೂ ಓದಿ: Bollywood: ಒಬ್ಬರ ಜೊತೆ ಡೇಟಿಂಗ್ ಮಾಡಿ, ಮತ್ತೊಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್’ನ ನಟಿಯರಿವರು


“ಮುಂದಿನ ವರ್ಷದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇನೆ. ಮೇಲಿನ ಮಹಡಿಯಲ್ಲಿ ರೆಸ್ಟೋರೆಂಟ್ ನಿರ್ಮಿಸಬೇಕೆಂದುಕೊಂಡಿದ್ದೇನೆ. ಇದರಿಂದ ನನಗೆ ಸ್ವಲ್ಪ ಆದಾಯ ಸಿಗಬಹುದು" ಎಂದು ಮಿಂಟು ಹೇಳಿದ್ದಾರೆ. ಇನ್ನು ಈ ಮನೆಗೆ ಅವರ ತಾಯಿಯ ಹೆಸರು ಇಡಬೇಕೆಂದುಕೊಂಡಿದ್ದಾರಂತೆ ಮಿಂಟು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.