Bollywood: ಒಬ್ಬರ ಜೊತೆ ಡೇಟಿಂಗ್ ಮಾಡಿ, ಮತ್ತೊಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್’ನ ನಟಿಯರಿವರು

Actresses Who Dated One Actor and Married Another: ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ 2000 ದಶಕದ ಆರಂಭದಲ್ಲಿ ಮುದ್ದಾದ ಕಪಲ್ ಎಂದೇ ಜನಪ್ರಿಯತೆ ಗಳಿಸಿದ್ದರು. ಒಂದು ಸಂದರ್ಭದಲ್ಲಿ ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ಇಬ್ಬರೂ ಕೂಡ ತಮ್ಮ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಆ ಬಳಿಕ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡು ಬೇರೆ ಬೇರೆ ಮದುವೆಯಾದರು

Written by - Bhavishya Shetty | Last Updated : Apr 10, 2023, 08:22 PM IST
    • ಒಬ್ಬರ ಜೊತೆ ಡೇಟಿಂಗ್ ಮತ್ತೊಬ್ಬರ ಜೊತೆ ಮದುವೆ
    • ಬಾಲಿವುಡ್ ಜಗತ್ತಿನಲ್ಲಿ ಪ್ರೀತಿ ಪ್ರೇಮದ ವಿಚಾರಗಳು ಆಗಾಗ್ಗೆ ಕೇಳಿಬರುತ್ತವೆ.
    • ಇಂದು ಅಂತಹ ಸ್ಟಾರ್ ನಟಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Bollywood: ಒಬ್ಬರ ಜೊತೆ ಡೇಟಿಂಗ್ ಮಾಡಿ, ಮತ್ತೊಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್’ನ ನಟಿಯರಿವರು title=
Bollywood actresses relationship

Actresses Who Dated One Actor and Married Another: ಬಾಲಿವುಡ್ ಜಗತ್ತಿನಲ್ಲಿ ಪ್ರೀತಿ ಪ್ರೇಮದ ವಿಚಾರಗಳು ಆಗಾಗ್ಗೆ ಕೇಳಿಬರುತ್ತವೆ. ಅದರಲ್ಲಿ ಕೆಲವರು ಪ್ರೀತಿಸಿದವರನ್ನೇ ಮದುವೆಯಾದರೆ, ಮತ್ತೂ ಕೆಲವರ ಬೇರೆಯವರ ಜೊತೆ ಸಪ್ತಪದಿ ತುಳಿದಿದ್ದಾರೆ. ಇಂದು ಅಂತಹ ಸ್ಟಾರ್ ನಟಿಯರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: Poor Look of Billionaires: ಅಂಬಾನಿ, ಟ್ರಂಪ್, ಬಿಲ್ ಗೇಟ್ಸ್ ಕಡುಬಡವರಾಗಿದ್ರೆ ಹೇಗೆ ಕಾಣಿಸ್ಬೋದು? ಈ ಫೋಟೋಸ್ ನೋಡಿ

ಕರೀನಾ ಕಪೂರ್ ಖಾನ್:

ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ 2000 ದಶಕದ ಆರಂಭದಲ್ಲಿ ಮುದ್ದಾದ ಕಪಲ್ ಎಂದೇ ಜನಪ್ರಿಯತೆ ಗಳಿಸಿದ್ದರು. ಒಂದು ಸಂದರ್ಭದಲ್ಲಿ ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ಇಬ್ಬರೂ ಕೂಡ ತಮ್ಮ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಆ ಬಳಿಕ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡು ಬೇರೆ ಬೇರೆ ಮದುವೆಯಾದರು, ಇದೀಗ ಕರೀನಾ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ.

ದೀಪಿಕಾ ಪಡುಕೋಣೆ:

ಪ್ರಸ್ತುತ ಬಿ-ಟೌನ್‌’ನ ಅತ್ಯಂತ ಜನಪ್ರಿಯ ನಟಿಯಾಗಿರುವ ಈ ಡಿಂಪಲ್ ಸ್ಟಾರ್ ಒಂದೊಮ್ಮೆ ನಟ ರಣಬೀರ್ ಕಪೂರ್ ಅವರ ಪ್ರೇಮ ಪಾಶಕ್ಕೆ ಸಿಲುಕೊಂಡಿದ್ದರು. ಆದರೆ ರಣಬೀರ್ ನಟಿ ಕತ್ರಿನಾ ಕೈಫ್ ಜೊತೆ ಸಂಬಂಧ ಬೆಳೆಸಿಕೊಂಡಿರುವುದು ತಿಳಿದುಬಂತು. ಈ ಘಟನೆಯಿಂದ ತೀವ್ರ ನೊಂದ ದೀಪಿಕಾ ಬ್ರೇಕಪ್ ಮಾಡಿಕೊಂಡರು. ಇದೀಗ ನಟ ರಣವೀರ್ ಸಿಂಗ್ ಅವರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ.

ಅನುಷ್ಕಾ ಶರ್ಮಾ:

ಬಾಲಿವುಡ್ ಸ್ಟಾರ್ ನಟಿಯರಲ್ಲಿ ಅನುಷ್ಕಾ ಶರ್ಮಾ ಕೂಡ ಒಬ್ಬರು. ಬ್ಯಾಂಡ್ ಬಜಾ ಬಾರಾತ್" ಸಿನಿಮಾದ ವೇಳೆ ನಟ ರಣವೀರ್ ಸಿಂಗ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿತ್ತು. ಆದರೆ ಇವೆಲ್ಲಾ ಊಹೆಗಳಿಗೆ ಬ್ರೇಕ್ ಹಾಕಿದ ನಟಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ವಿವಾಹವಾದರು.

ಐಶ್ವರ್ಯಾ ರೈ:

ಮಾಜಿ ವಿಶ್ವ ಸುಂದರಿ, ಕರಾವಳಿಯ ಚೆಲುವೆ ಐಶ್ವರ್ಯಾ ರೈ ಮೊದಲು ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಆ ಬಳಿಕ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಬ್ರೇಕಪ್ ಮಾಡಿಕೊಂಡರು ಎನ್ನಲಾಗಿದೆ. ಇದೀಗ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ ಐಶ್ವರ್ಯಾ.

ಪ್ರಿಯಾಂಕಾ ಚೋಪ್ರಾ:

ಬಾಲಿವುಡ್ ಮಾತ್ರವಲ್ಲದೆ, ಹಾಲಿವುಡ್’ನಲ್ಲಿಯೂ ಮಿಂಚುತ್ತಿರುವ ಪ್ರಿಯಾಂಕ ಚೋಪ್ರಾ ‘ಕಮಿನೇ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಹ-ನಟ ಶಾಹಿದ್ ಕಪೂರ್‌ ಅವರನ್ನು ಪ್ರೀತಿಸಲು ಪ್ರಾರಂಭಿಸಿದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಅವರ ಜೊತೆ ಡೇಟಿಂಗ್ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಆ ಬಳಿಕ ವೈಯಕ್ತಿಕ ಕಾರಣಗಳಿಂದ ದೂರಾದ ಅವರು, ಬೇರೆಯವರ ಜೊತೆ ಜೀವನ ನಡೆಸುತ್ತಿದ್ದಾರೆ. ಅಮೇರಿಕನ್ ಸಿಂಗರ್ ನಿಕ್ ಜೋನಾಸ್‌ ಜೊತೆ ಪ್ರೀತಿಯಲ್ಲಿ ಬಿದ್ದ ಪ್ರಿಯಾಂಕ ಅವರನ್ನೇ ಮದುವೆಯಾಗಿದ್ದಾರೆ.

ಇದನ್ನೂ ಓದಿ: Relationship Tips: ದೈಹಿಕ ಸಂಬಂಧ ಬೆಳೆಸುವಾಗ ಪುರುಷರು ಈ ಕೆಲಸಗಳನ್ನು ಮಾಡಲೇಬಾರದು…!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News