ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ದೆಹಲಿ ಪೋಲೀಸ್ (ಡಿಪಿ), ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಉತ್ತರ ಪ್ರದೇಶ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ ಲಿಮಿಟೆಡ್ (ಯುಪಿಆರ್‌ವಿಯುಎನ್‌ಎಲ್) ನೇಮಕಾತಿಗಾಗಿ ಟೆರಿಟೋರಿಯಲ್ ಆರ್ಮಿ ಆಫೀಸರ್ ಅಡಿಯಲ್ಲಿ ಐದು ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಆಹ್ವಾನಿಸಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕವಾಗಿದೆ. ಇನ್ನು ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಅರ್ಹತೆ, ಆಯ್ಕೆ ಪ್ರಕ್ರಿಯೆ, ಹೇಗೆ ಅರ್ಜಿ ಸಲ್ಲಿಸಬೇಕು ಇತ್ಯಾದಿ ವಿಚಾರಗಳನ್ನು ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ಆ ಪೋಸ್ಟ್‌ಗಳಿಗೆ ಹೊರಡಿಸಿದ ಅಧಿಸೂಚನೆಯಿಂದ ಪಡೆಯಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರಬಲ ರಾಜಕಾರಣಿಯ ಮಗಳ ಮೇಲೆ ಈ ಸ್ಟಾರ್‌ ಆಟಗಾರನಿಗೆ ಲವ್‌ : ಇವರ ಲವ್‌ಸ್ಟೋರಿಯೇ ವಿಭಿನ್ನ


ಭಾರತೀಯ ಸೇನೆಯ ನೇಮಕಾತಿ 2022 : 
ಆರ್ಮಿ ಹೆಡ್‌ಕ್ವಾರ್ಟರ್ಸ್ ಸೆಲೆಕ್ಷನ್ ಬೋರ್ಡ್ ಟೆರಿಟೋರಿಯಲ್ ಸೇನೆಗಾಗಿ ಚೈನೀಸ್ ಇಂಟರ್‌ಪ್ರಿಟರ್‌ಗಳನ್ನು ಹುಡುಕುತ್ತಿದೆ. ಅಭ್ಯರ್ಥಿಗಳು ಆಗಸ್ಟ್ 10, 2022 ರ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಲ್ಲಿ ಉದ್ಯೋಗ ಪಡೆಯುವವರಿಗೆ ತಿಂಗಳಿಗೆ 2,17,600 ರೂ.ವರೆಗೆ ವೇತನ ಸಿಗಲಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 5 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.


ಎಸ್‌ಎಸ್‌ಸಿ ದೆಹಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌:
ಸ್ಟಾಫ್ ಸೆಲೆಕ್ಷನ್ ಕಮಿಷನ್ ಸಹಾಯಕ ವೈರ್‌ಲೆಸ್ ಆಪರೇಟರ್ (ಎಡ್ಬ್ಲ್ಯೂಎ) / ಟೆಲಿ-ಪ್ರಿಂಟರ್ ಆಪರೇಟರ್ (ದೆಹಲಿ ಪೊಲೀಸ್‌ನಲ್ಲಿ ಟಿಪಿಒ)ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಜುಲೈ 29ರ ಒಳಗಾಗಿ ಹೆಡ್ ಕಾನ್‌ಸ್ಟೇಬಲ್‌ ಹುದ್ದೆಗೆ  ssc.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 857 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.


ಎಸ್‌ಎಸ್‌ಸಿ ದೆಹಲಿ ಪೊಲೀಸ್ ಚಾಲಕ ನೇಮಕಾತಿ 2022: 
ಸ್ಟಾಫ್ ಸೆಲೆಕ್ಷನ್ ಕಮಿಷನ್ ಚಾಲಕ ಉದ್ಯೋಗಗಳಿಗಾಗಿ ಅರ್ಜಿ ಆಹ್ವಾನಿಸಿದೆ. ದೆಹಲಿ ಪೊಲೀಸರಿಗೆ ಈ ನೇಮಕಾತಿ ನಡೆಯಲಿದೆ. ಪುರುಷರಾಗಿದ್ದು 12 ನೇ ಪಾಸ್ ಆಗಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ 29 ಜುಲೈ 2022ರೊಳಗೆ ಪೊಲೀಸ್ ಚಾಲಕ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬಹುದು.


ಇದನ್ನೂ ಓದಿ: Rashmika Mandanna: ಟೈಗರ್​ ಶ್ರಾಫ್ ಜೊತೆಗಿನ ಗಾಸಿ​ಪ್​ ನಿಜ ಎಂದ ರಶ್ಮಿಕಾ ಮಂದಣ್ಣ


ಭಾರತೀಯ ನೌಕಾಪಡೆಯ ಎಸ್‌ಎಸ್‌ಆರ್‌ ನೇಮಕಾತಿ: 
ಭಾರತೀಯ ನೌಕಾಪಡೆಯು ಜುಲೈ15, 2022 ರಂದು ಹಿರಿಯ ಸೆಕೆಂಡರಿ ನೇಮಕಾತಿ (ಎಸ್‌ಎಸ್‌ಆರ್‌) ಅಡಿಯಲ್ಲಿ ಅಗ್ನಿವೀರ್ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ. ಇದು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಏಕೆಂದರೆ 01/2022 ಬ್ಯಾಚ್‌ಗಾಗಿ 'ಅಗ್ನಿಪಥ್ ಯೋಜನೆ' ಅಡಿಯಲ್ಲಿ 2800 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಭಾರತೀಯ ನೌಕಾಪಡೆಯ SSR ಅಧಿಸೂಚನೆಯನ್ನು ಉದ್ಯೋಗ ಪತ್ರಿಕೆ ಮತ್ತು joinindiannavy.gov.in ನಲ್ಲಿ ಪ್ರಕಟಿಸಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ