ನವದೆಹಲಿ : ಕಾಡು ಪ್ರಾಣಿಗಳ ವೀಡಿಯೊಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ (Social media) ಸದ್ದು ಮಾಡುತ್ತಿರುತ್ತವೆ. ವಿಶೇಷವಾಗಿ ಸಿಂಹ, ಹುಲಿ, ಚಿರತೆ ತಮ್ಮ ಅಪಾಯಕಾರಿ ಪರಭಕ್ಷಕ ಶೈಲಿಯಿಂದ ಹೆಚ್ಚು ಪ್ರಾಬಲ್ಯ ಹೊಂದಿವೆ. ಇದರಲ್ಲೂ ಚಿರತೆ ತನ್ನ ವಿಭಿನ್ನ ಬೇಟೆಯ ಶೈಲಿಗೆ ಹೆಸರುವಾಸಿಯಾಗಿದೆ. ಸಿಂಹ ಮತ್ತು ಹುಲಿಯ ನಂತರ ಬೆಕ್ಕಿನ ಕುಟುಂಬದಲ್ಲಿ ಬರುವ ಚಿರತೆ ಮೂರನೇ ಅತಿದೊಡ್ಡ ಮತ್ತು ಅತ್ಯಂತ ಅಪಾಯಕಾರಿ ಪ್ರಾಣಿಯಾಗಿದೆ. ಇದರ ವೀಡಿಯೋಗಳು (Animal video on social media) ಅಪರೂಪಕ್ಕೆ ಕಾಣಸಿಗುತ್ತವೆ. ಆದರೆ ಈ ವಿಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಿದಾಗ, ವೈರಲ್ ಆಗಿ ಬಿಡುತ್ತವೆ. 


COMMERCIAL BREAK
SCROLL TO CONTINUE READING

ಮೊಸಳೆಯ ಮೇಲೆ ಚಿರತೆಯ ಮಾರಣಾಂತಿಕ ದಾಳಿ :
ಚಿರತೆ (cheetha) ತನ್ನ ಬೇಟೆಯನ್ನು ಹುಡುಕುತ್ತಾ ನೀರಿನೊಳಗೆ ಧುಮುಕುತ್ತದೆ. ಮಾತ್ರವಲ್ಲ ಇಲ್ಲಿ ಮೊಸಳೆಯ ಮೇಲೆ ಭಯಂಕರ (cheetha crocodile video) ದಾಳಿ ಮಾಡುತ್ತದೆ. ಮೊಸಳೆ ಮತ್ತು ಚಿರತೆ ನಡುವೆ ಉಳಿಗಾಗಿ ಕಾಳಗವೇ ನಡೆಯುತ್ತದೆ. ಇಬ್ಬರ ಜಗಳದಲ್ಲಿ ಮೊಸಳೆ ಸೋಲೋಪ್ಪಿಕೊಳ್ಳುತ್ತದೆ.  ಚಿರತೆ ಕೊನೆಗೂ ತನ್ನ ಬೇಟೆಯನ್ನು ಶಿಕಾರಿ ಮಾಡುವುದರಲ್ಲಿ ಯಶಸ್ವಿಯಾಗುತ್ತದೆ. 



 


ಇದನ್ನೂ ಓದಿ : Viral Video : ಮದುವೆ ಮಂಟಪದಿಂದ ಎದ್ದು 'ಉ ಅಂಟಾವಾ' ಹಾಡಿಗೆ ಸೊಂಟ ಬಳುಕಿಸಿದ ವಧು..! ಡಾನ್ಸ್ ಗೆ ಬ್ರೇಕ್ ಹಾಕಿದ ವರ


 ವೈರಲ್ ಆಗಿದೆ ಚಿರತೆ ವಿಡಿಯೋ : 
ವೈಲ್ಡ್ ಅನಿಮಲ್ಸ್‌ಗೆ ಸಂಬಂಧಿಸಿದ ಈ ವೀಡಿಯೊವನ್ನು (video) ವೈಲ್ಡ್_ಅನಿಮಲ್ಸ್_ಕ್ರಿಯೇಶನ್ ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಚಿರತೆ,  ಸಿಂಹ ಮತ್ತು ಹುಲಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ಅದರ ಬಲವಾದ ಹಲ್ಲುಗಳಿಂದ, ಇದು ಆಮೆಯಂತ  ದಪ್ಪ ಚಿಪ್ಪನ್ನೂ ಕೂಡಾ ಕಚ್ಚಿ ತೆಗೆಯುತ್ತದೆ. ಚಿರತೆ ಹಗಲು ರಾತ್ರಿ  ನೆಲ ಮತ್ತು ನೀರಿನಲ್ಲಿ  ಎಲ್ಲಿ ಬೇಕಾದರೂ ಬೇಟೆಯಾಡಬಹುದು.  ಚಿರತೆ ಮರ ಹತ್ತುವುದರಲ್ಲಿಯೂ ನಿಪುಣತೆ ಹೊಂದಿರುವ ಪ್ರಾಣಿಯಾಗಿದೆ. 


ಇದನ್ನೂ ಓದಿ : Viral Video: ಹೆಂಡತಿಗೆ ಬಸ್ ಹತ್ತಿಸಲು ಗಂಡ ಏನು ಮಾಡಿದ್ದಾನೆ ನೋಡಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ