Viral Video: ಪೇಂಟಿಂಗ್ ಮಾಡುವ ಆನೆಯನ್ನು ಎಲ್ಲಾದರೂ ನೋಡಿರುವಿರಾ? ಇಲ್ಲಿದೆ ನೋಡಿ

Elephant Painting Viral Video - ಆನೆ (Elephant) ಪೇಂಟಿಂಗ್ ಮಾಡುವುದನ್ನು ನೀವು ನೋಡಿದ್ದೀರಾ? ಇಲ್ಲ ಎಂದಾದರೆ  ಇಲ್ಲಿ ಆನೆ ಪೇಂಟಿಂಗ್ ಮಾಡುತ್ತಿರುವ ವಿಡಿಯೋವನ್ನು ನೀವು ನೋಡಬಹುದು. ಈ ವಿಡಿಯೋಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Written by - Nitin Tabib | Last Updated : Feb 5, 2022, 05:22 PM IST
  • ಪೇಂಟಿಂಗ್ ಮಾಡುವ ಆನೆಯನ್ನು ಎಂದಾದರೂ ನೋಡಿರುವಿರಾ?
  • ಇಲ್ಲ ಎಂದಾದರೆ ಈ ವಿಡಿಯೋ ಅನ್ನು ಒಮ್ಮೆ ವಿಕ್ಷೀಸಿ.
  • IFS ಅಧಿಕಾರಿಯಾಗಿರುವ ಪ್ರವೀಣ್ ಅಂಗುಸಾಮಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Viral Video: ಪೇಂಟಿಂಗ್ ಮಾಡುವ ಆನೆಯನ್ನು ಎಲ್ಲಾದರೂ ನೋಡಿರುವಿರಾ? ಇಲ್ಲಿದೆ ನೋಡಿ title=
Elephant Painting Viral Video (File Photo)

ನವದೆಹಲಿ: Elephant Viral Video - 'ಹಾತಿ ಮೇರೆ ಸಾಥಿ' ಎಂಬ ಮಾತು ನೀವು ಕೇಳಿರಬಹುದು... ಹೌದು, ಆನೆಯನ್ನು ಯಾವಾಗಲು ಮನುಷ್ಯನ ಹತ್ತಿರದ ಪ್ರಾಣಿ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಆನೆ ತುಂಬಾ ಬುದ್ಧಿವಂತ ಎಂದೂ ಕೂಡ ಹೇಳಲಾಗುತ್ತದೆ. ಆದರೆ, ಆನೆಯ ಕೋಪ ಕೂಡ ಮನುಷ್ಯರಿಗೆ ಕೆಲವೊಮ್ಮೆ ದುಬಾರಿ ಸಾಬೀತಾಗುತ್ತದೆ. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಆನೆಯೊಂದು ಪೇಂಟಿಂಗ್ ಮಾಡುತ್ತಿರುವುದನ್ನು ನೀವು ನೋಡಬಹುದು. ಜನರಿಗೆ ಇದು ಭಾರಿ ಸರ್ಪ್ರೈಸ್ ಸಿಕ್ಕಂತಾಗಿದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ (Viral Video 2022) ಆನೆಯೊಂದು ಪೇಂಟಿಂಗ್ ಮಾಡುತ್ತಿರುವುದನ್ನು ನೀವು ನೋಡಬಹುದು. ನೀವೂ ಕೂಡ ಈ ರೀತಿಯ ದೃಶ್ಯ ನೋಡುವುದು ತುಂಬಾ ವಿರಳ ಎಂದರೆ ತಪ್ಪಾಗಲಾರದು. ವೃತ್ತಿಯಲ್ಲಿ IFS ಅಧಿಕಾರಿಯಾಗಿರುವ ಪ್ರವೀಣ್ ಅಂಗುಸಾಮಿ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ-ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. 'ಜೇಮ್ಸ್' ಅಧಿಕೃತ ಟೀಸರ್ ಬಿಡುಗಡೆ ಡೇಟ್ ಫಿಕ್ಸ್

ಆನೆ ತನ್ನ ಸೊಂಡಿಲಿನಲ್ಲಿ ಪೇಂಟ್ ಬ್ರೇಶ್ ಹಿಡಿದಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅಷ್ಟೇ ಯಾಕೆ ಅದು ತನ್ನ ಚಿತ್ರವನ್ನೇ ಕಾರ್ಡ್ ಶೀಟ್ ಮೇಲೆ ಮೂಡಿಸುತ್ತಿದೆ. ಅದು ತನ್ನನ್ನು ತಾನು ಕನ್ನಡಿಯಲ್ಲಿ ನೋಡಿದಂತೆಯೇ ಸರಳವಾಗಿ ಚಿತ್ರ ನಿರ್ಮಿಸುತ್ತಿದೆ. ಮೊದಲು ಸೊಂಡಿಲು ಬರೆದ ಆಣೆ ನಂತರ ಎಲ್ಲಾ ನಾಲ್ಕು ಕಾಲುಗಳು ಮತ್ತು ತದನಂತರ ತನ್ನ ಬಾಲ ಚಿತ್ರಿಸುತ್ತದೆ. 

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34ಕ್ಕೆ ಏರಿಕೆಯಾಗುವುದು ಖಚಿತ!

ವಿಡಿಯೋ ನೋಡಿದ ಜನರು ಆನೆಯ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಅಷ್ಟೇ ಯಾಕೆ, 'ಈ ಭೂಮಿಯ ಮೇಲೆ ಅಸಾಧ್ಯವಾದುದು ಯಾವುದೂ ಇಲ್ಲ' ಎಂದೂ ಕೂಡ ಕಾಮೆಂಟ್ ಮಾಡುತಿದ್ದಾರೆ. 

ಇದನ್ನೂ ಓದಿ-Gemstone: ರತ್ನವನ್ನು ಧರಿಸುವ ಮೊದಲು ಈ ವಿಶೇಷ ನಿಯಮವನ್ನು ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News