ಬೆಂಗಳೂರು: ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ಆದರೆ, ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನ(Gold)ದ ಬೆಲೆ ಏರಿಳಿತ ಕಾಣುತ್ತಿದೆ. ಹಾಗಾದರೆ ಕಳೆದ ವಾರ ಚಿನ್ನದ ದರ ಎಷ್ಟು ರೂಪಾಯಿ ಏರಿಳಿತ ಕಂಡಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿದೆ. 


ಚಿನ್ನಾಭರಣಗಳ ಬೆಲೆ ಹೇಗೆ ನಿಗದಿಯಾಗುತ್ತದೆ, ಜ್ಯೂವೆಲರ್ ಬಳಿ ಹೋಗುವ ಮೊದಲು ಇದನ್ನು ತಿಳಿದುಕೊಳ್ಳಿ


COMMERCIAL BREAK
SCROLL TO CONTINUE READING

ಕಳೆದ ವಾರ ಚಿನ್ನ(Gold rate) ದರ ಎರಡು ಬಾರಿ ಇಳಿಕೆ ಕಂಡರೆ, ನಾಲ್ಕು ಬಾರಿ ಏರಿಕೆ ಕಂಡಿದೆ. 870 ರೂ. ಏರಿಕೆ ಕಂಡಿದೆ.  ಆಭರಣ ಚಿನ್ನದ ದರ 10 ಗ್ರಾಂಗೆ 190 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ 48,600 ರೂಪಾಯಿ ಆಗಿದೆ. ಇನ್ನು, ಶುದ್ಧ ಚಿನ್ನ 10 ಗ್ರಾಂಗೆ 210 ರೂಪಾಯಿ ಏರಿಕೆ ಕಂಡಿದ್ದು, 53,020 ರೂಪಾಯಿ ಆಗಿದೆ.


ಕಳೆದ ವಾರ ಬೆಳ್ಳಿ ದರ(silver rate) ಕೂಡ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 5,300 ರೂಪಾಯಿ ಆಗಿದೆ. ಈ ಮೂಲಕ ಬೆಳ್ಳಿ ಬೆಲೆ ಕೆಜಿಗೆ 65400 ರೂಪಾಯಿ ಆಗಿತ್ತು. ಕೆಜಿ ಬೆಳ್ಳಿಗೆ 1,490 ರೂಪಾಯಿ ಏರಿಕೆ ಆಗಿದೆ.  ಈ ಮೂಲಕ 66,900 ಆಗಿದೆ.


ದೀಪಾವಳಿಯಲ್ಲಿ ಚಿನ್ನ ಅಗ್ಗವಾಗಲಿದೆಯೇ? ಎಷ್ಟು ಕಡಿಮೆಯಾಗಬಹುದು? ಇಲ್ಲಿದೆ ಮಾಹಿತಿ...


ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನೂ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.