ಇದೇ ಸೆಪ್ಟೆಂಬರ್ 23ರಂದು ಲಾಂಚ್ ಆಗಲಿದೆ Toyota Urban Cruiser : ಪ್ರೀ ಬುಕಿಂಗ್ನಲ್ಲಿ ಸಿಗಲಿದೆ ಆಫರ್
ನೀವು ಕೂಡ ಟೊಯೋಟಾದ ಹೊಸ ಎಸ್ಯುವಿ ಅರ್ಬನ್ ಕ್ರೂಸರ್ಗಾಗಿ ಕಾಯುತ್ತಿದ್ದರೆ, ನಿಮಗಾಗಿ ಒಳ್ಳೆಯ ಸುದ್ದಿ ಇದೆ. ಅರ್ಬನ್ ಕ್ರೂಸರ್ ಮುಂದಿನ ವಾರ ಅಂದರೆ ಸೆಪ್ಟೆಂಬರ್ 23 ರಂದು ಬಿಡುಗಡೆಯಾಗುತ್ತಿದೆ. ಮಾರುತಿ ವಿಟಾರಾ ಬ್ರೆಝಾ ಆಧಾರಿತ ಈ ಎಸ್ಯುವಿಯ ಪೂರ್ವ ಬುಕಿಂಗ್ ನಡೆಯುತ್ತಿದೆ. ಟೋಕನ್ ಮೊತ್ತವನ್ನು 11,000 ರೂ. ಪಾವತಿಸಿ ನೀವು ಬುಕ್ ಮಾಡಬಹುದು.
ನವದೆಹಲಿ: ನೀವು ಕೂಡ ಟೊಯೋಟಾದ ಹೊಸ ಎಸ್ಯುವಿ ಅರ್ಬನ್ ಕ್ರೂಸರ್ಗಾಗಿ ಕಾಯುತ್ತಿದ್ದರೆ, ನಿಮಗಾಗಿ ಒಳ್ಳೆಯ ಸುದ್ದಿ ಇದೆ. ಅರ್ಬನ್ ಕ್ರೂಸರ್ ಮುಂದಿನ ವಾರ ಅಂದರೆ ಸೆಪ್ಟೆಂಬರ್ 23 ರಂದು ಬಿಡುಗಡೆಯಾಗುತ್ತಿದೆ. ಮಾರುತಿ ವಿಟಾರಾ ಬ್ರೆಝಾ ಆಧಾರಿತ ಈ ಎಸ್ಯುವಿಯ ಪೂರ್ವ ಬುಕಿಂಗ್ ನಡೆಯುತ್ತಿದೆ. ಟೋಕನ್ ಮೊತ್ತವನ್ನು 11,000 ರೂ. ಪಾವತಿಸಿ ನೀವು ಬುಕ್ ಮಾಡಬಹುದು. ಇದಕ್ಕಾಗಿ ನೀವು ಟೊಯೋಟಾ ಡೀಲರ್ಸ್ ಬಳಿ ಹೋಗಬಹುದು ಅಥವಾ ನೀವು ಅದನ್ನು ಆನ್‌ಲೈನ್‌ನಲ್ಲಿ ಮಾಡಬಹುದು.
ಪೂರ್ವ-ಬುಕರ್ಗಳಿಗಾಗಿ ಆಫರ್:
ಟೊಯೋಟಾ ಅರ್ಬನ್ ಕ್ರೂಸರ್ ಅನ್ನು ಮೊದಲೇ ಕಾಯ್ದಿರಿಸುವ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಇದರ ಅಡಿಯಲ್ಲಿ ಗ್ರಾಹಕರು ಕಂಪನಿಯಿಂದ 2 ವರ್ಷಗಳವರೆಗೆ ಯಾವುದೇ ವೆಚ್ಚವಿಲ್ಲದ ಆವರ್ತಕ ನಿರ್ವಹಣೆ ಪ್ಯಾಕೇಜ್ ಪಡೆಯುತ್ತಾರೆ. ಇದರರ್ಥ ಎರಡು ವರ್ಷಗಳವರೆಗೆ ಈ ಹೊಸ ಕಾರಿನ ನಿರ್ವಹಣೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅರ್ಬನ್ ಕ್ರೂಸರ್ನೊಂದಿಗೆ ಗ್ರಾಹಕರಿಗೆ 3 ವರ್ಷಗಳವರೆಗೆ ಅಥವಾ ಒಂದು ಲಕ್ಷ ಕಿಲೋಮೀಟರ್‌ಗಳವರೆಗೆ ಖಾತರಿ ಸಿಗುತ್ತದೆ.
ಮಾರುಕಟ್ಟೆಗೆ ಬರಲಿದೆ ಮತ್ತೊಂದು ಎಸ್ಯುವಿ, ಚಾಲಕನನ್ನು ಎಚ್ಚರಿಸಲಿದೆ ಹೊಸ ತಂತ್ರಜ್ಞಾನ
ಅರ್ಬನ್ ಕ್ರೂಸರ್ ಬೆಲೆ ಎಷ್ಟು?
ಇದರ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ. ಸೆಪ್ಟೆಂಬರ್ 23 ರಂದು ಅಂದರೆ ನೂತನ ಕಾರ್ ಲಾಂಚ್ ಆದ ಬಳಿಕವಷ್ಟೇ ಕಂಪನಿಯು ಕಾರಿನ ಬೆಲೆಯನ್ನು ಘೋಷಿಸುವುದಾಗಿ ತೀರ್ಮಾನಿಸಿದೆ. ಇದರ ಬೆಲೆ ಬ್ರೆಜಾ ಕಾರಿನಷ್ಟೇ ಅಥವಾ ಹೆಚ್ಚು ಕಡಿಮೆ ಆ ಕಾರಿನ ಬೆಲೆಗೆ ಸನಿಹದಲ್ಲಿರಬಹುದು ಎಂದು ತಜ್ಞರು ಊಹಿಸಿದ್ದಾರೆ. ಇದರ ಬೆಲೆ 8.5 ಲಕ್ಷದಿಂದ 11 ಲಕ್ಷ ರೂ., ಇದು ಬ್ರೆಜಾಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಅರ್ಬನ್ ಕ್ರೂಸರ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಟೊಯೋಟಾದ ಮಾರುತಿ ಕಾರಿನ ಎರಡನೇ ರಿಬ್ಯಾಡ್ ಆವೃತ್ತಿಯಾಗಿದೆ. ಇದಕ್ಕೂ ಮೊದಲು ಟೊಯೋಟಾ ಬಾಲೆನೊ ಹ್ಯಾಚ್‌ಬ್ಯಾಕ್ ಕಾರನ್ನು ಗ್ಲ್ಯಾನ್ಜಾ ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.
ಅರ್ಬನ್ ಕ್ರೂಸರ್ನ ನೋಟ ಮತ್ತು ವೈಶಿಷ್ಟ್ಯಗಳು:
ಇದು ವಿಶೇಷ ಮುಂಭಾಗದ ಮುಖ್ಯ ಗ್ರಿಲ್ ಅನ್ನು ಹೊಂದಿದೆ, ಇದನ್ನು ಪೂರ್ಣ ಎಲ್ಇಡಿ ಹೆಡ್ಲ್ಯಾಂಪ್ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್ಗಳಿಂದ ಅಲಂಕರಿಸಲಾಗಿದೆ. ಬ್ರೆಜ್ಜಾದಂತೆ, ಡೈಮಂಡ್ ಕಟ್ 16 ಇಂಚಿನ ಅಲಾಯ್ ವೀಲ್‌ಗಳು ಇದರಲ್ಲಿ ಲಭ್ಯವಿರುತ್ತವೆ. ಅರ್ಬನ್ ಕ್ರೂಸರ್ 6 ಮೊನೊಟೋನ್ ಕಲರ್ ಆಯ್ಕೆಯಲ್ಲಿ ಬರಲಿದೆ. ಇದು ನೀಲಿ, ಕಂದು, ಬಿಳಿ, ಕಿತ್ತಳೆ, ಸಿಲ್ವರ್ ಮತ್ತು ಬೂದು ಬಣ್ಣಗಳನ್ನು ಒಳಗೊಂಡಿದೆ. ಇದರೊಂದಿಗೆ ಬ್ಲೂ / ಬ್ಲ್ಯಾಕ್, ಬ್ರೌನ್ / ಬ್ಲ್ಯಾಕ್ ಮತ್ತು ಆರೆಂಜ್ / ವೈಟ್ ಎಂಬ ಮೂರು ಡ್ಯುಯಲ್ ಟೋನ್ ಬಣ್ಣಗಳು ಸಹ ಲಭ್ಯವಿರುತ್ತವೆ.
ಭಾರತದಲ್ಲಿ ಐಷಾರಾಮಿ ರೇಂಜ್ ರೋವರ್ ಇವೋಕ್ ಕನ್ವೆರ್ಟಬಲ್ ಕಾರ್ ಬಿಡುಗಡೆ
ವೈಶಿಷ್ಟ್ಯಗಳ ಬಗ್ಗೆ ಮಾತನಾಡುಡುವುದಾದರೆ ಇದು ಪುಶ್ ಸ್ಟಾರ್ಟ್ ಮತ್ತು ಸ್ಟಾಪ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಸ್ಮಾರ್ಟ್ ಪ್ಲೇಕಾಸ್ಟ್ ಟಚ್‌ಸ್ಕ್ರೀನ್, ರೇನ್ ಸೆನ್ಸಿಂಗ್ ವೈಪರ್ಸ್, ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರೋಕ್ರೊಮಿಕ್ ರಿಯರ್ ವ್ಯೂ ಮಿರರ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಇದರೊಂದಿಗೆ ಇದು ಕ್ರೂಸ್ ಕಂಟ್ರೋಲ್, ಎಲೆಕ್ಟ್ರೋ-ಕ್ರೋಮಿಕ್ ರಿಯರ್‌ವ್ಯೂ ಮಿರರ್ ಮತ್ತು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಇದು ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಬ್ಲೂಟೂತ್ ಸಂಪರ್ಕವನ್ನು ಬೆಂಬಲಿಸುತ್ತದೆ.