ಭಾರತದಲ್ಲಿ ಐಷಾರಾಮಿ ರೇಂಜ್ ರೋವರ್ ಇವೋಕ್ ಕನ್ವೆರ್ಟಬಲ್ ಕಾರ್ ಬಿಡುಗಡೆ

   

  • Mar 28, 2018, 19:18 PM IST
1 /10

ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಲ್ಯಾಂಡ್ ರೋವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ರೇಂಜ್ ರೋವರ್ ಇವೋಕ್ ಕನ್ವೆರ್ಟಬಲ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ ಬರೋಬ್ಬರಿ  69.53 ಲಕ್ಷ ರೂ.ಗಳು.

2 /10

ದೇಶದ ಮೊಟ್ಟಮೊದಲ ಕನ್ವೆರ್ಟಬಲ್ SUV ಇದಾಗಿದ್ದು, ಅತ್ಯಂತ ವಿಶಿಷ್ಟ ಗುಣ, ವಿಶೇಷತೆಗಳೊಂದಿಗೆ ಐಶಾರಾಮಿ ಕಾರು ಪ್ರಿಯರಿಗೆ ಮೆಚ್ಚುಗೆಯಾಗಲಿದೆ.   

3 /10

ಇನ್'ಕಂಟ್ರೋಲ್ ಟಚ್ ಪ್ರೊ ಇನ್ಫೋಟೆನ್ಮೆಂಟ್ ಸಿಸ್ಟಮ್ ಇದೆ.

4 /10

ಕಾರಿನ ಮುಂಭಾಗದಲ್ಲಿ ಅಡಾಪ್ಟಿವ್ ಎಲ್ಇಡಿ ಹೆಡ್‍ಲೈಟ್ಸ್, 360ಡಿಗ್ರಿ ಕ್ಯಾಮೆರಾ ಇವೆ. 

5 /10

ಎರಡು ಬಾಗಿಲುಗಳ ವಿನ್ಯಾಸದಲ್ಲಿ ಲಭ್ಯವಿರುವ ಈ ಕಾರಿನ ಎಂಜಿನ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳು ಸಾಧಾರಣ ರೇಂಜ್ ರೋವರ್ ಇವೊಕ್ ಕಾರಿನಂತೆಯೇ ಇವೆ. 

6 /10

ಈ ಕಾರಿನಲ್ಲಿ ಫೋಲ್ಡಿಂಗ್ ರೂಫ್ ವ್ಯವಸ್ಥೆಯಿದ್ದು, ಇದರಲ್ಲಿರುವ ರೂಫ್ ಅನ್ನು ಪಾಲಿಯಾಕ್ರಿಕ್ ಫ್ಯಾಬ್ರಿಕ್‌ನೊಂದಿಗೆ 5 ಪದರಗಳಿಂದ ವಿನ್ಯಾಸಗೊಳಿಸಲಾಗಿದೆ. ರೂಫ್ ಅನ್ನು Z ಫೋಲ್ಡಿಂಗ್ ಕನ್ವರ್ಟಬಲ್ ರೂಫ್ ಸಿಸ್ಟಮ್ ಮತ್ತು ನಾಲ್ಕು ಎಲೆಕ್ಟ್ರಿಕ್ ಮೋಟಾರ್‍‍ನಿಂದ ನಿಯಂತ್ರಿಸಬಹುದಾಗಿದೆ.  

7 /10

ಕಾರಿನ ಫ್ಯಾಬ್ರಿಕ್ ರೂಫ್‌ಗಳು ಕೇವಲ 18 ಸೆಕೆಂಡುಗಳಲ್ಲಿ ಮಡಚುವ ಸಾಮರ್ಥ್ಯವನ್ನು ಹೊಂದಿದ್ದು, ಗಂಟೆಗೆ ಗರಿಷ್ಠ 48 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವಾಗಲೂ ಈ ಕಾರಿನ ರೂಫ್ ಟಾಪ್ ಮಡಚಬಹುದು.

8 /10

ಅಲ್ಲದೆ, ಕಾರಿನ ಒಳಭಾಗದ ವಿನ್ಯಾಸವೂ ಕೂಡ ಆಕರ್ಷಣೀಯವಾಗಿದ್ದು, ಇನ್'ಕಂಟ್ರೋಲ್ ಟಚ್ ಪ್ರೊ ಇನ್ಫೋಟೆನ್ಮೆಂಟ್ ಸಿಸ್ಟಮ್, ನಾಲ್ಕು ಆಸನವುಳ್ಳ ಬ್ಲಾಕ್ ಕ್ಯಾಬಿನ್, ನ್ಯಾವಿಗೇಷನ್ ಪ್ರೋ, ವಿಂಡ್‍ಸೋರ್ ಲೆದರ್ ಸೀಟ್, ಇಂಟೀರಿಯರ್ ಎಂಬಿಯೆಂಟ್ ಲೈಟಿಂಗ್ ಇದೆ.  

9 /10

ಈ ಕಾರು 2 ಲೀಟರ್ ಇಂಜಿನಿಯಂ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 237-ಬಿಹೆಚ್‍ಪಿ ಮತ್ತು 340-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿ ಹೊಂದಿದ್ದು,  9-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಇರುವ ಎಂಜಿನ್ ಜೋಡಿಸಲಾಗಿದೆ.

10 /10

ಈ ಕಾರು ಸಾಧಾರಣ ಮಾದರಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದು, 4370-ಎಂಎಂ ಉದ್ದ ಹೊಂದಿದೆ. ಇದರ ಎತ್ತರ ಮತ್ತು ಉದ್ದವು ಐದು ಬಾಗಿಲುಳ್ಳ ಸಾಧಾರಣ ಕಾರಿನ ಮಾದರಿಗಿಂತ ಕಡಿಮೆಯಿದ್ದು, 1,900-ಎಂಎಂ ಎತ್ತರ ಮತ್ತು 1,609-ಎಂಎಂ ಅಗಲ ಮತ್ತು 2,660-ಎಂಎಂ ವೀಲ್‍ಬೇಸ್ ಸುತ್ತಳತೆ ಹೊಂದಿದೆ.