Fire In Covid Center: ಕರೋನಾವೈರಸ್ ಅಟ್ಟಹಾಸದಿಂದ ಮೊದಲೇ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಇಂದು ಬೆಳಿಗ್ಗೆ ಕೋವಿಡ್ ಸೆಂಟರ್‌ನ ಐಸಿಯುನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು 13 ರೋಗಿಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.


ICU Ward) 3.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿ 13 ರೋಗಿಗಳು ಸಾವನ್ನಪ್ಪಿದ್ದಾರೆ. ಘಟನೆಯ ಮಾಹಿತಿ ಬಂದ ಕೂಡಲೇ, ಅಗ್ನಿಶಾಮಕ ದಳದ ಹೊರತಾಗಿ, ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಿಸಲಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ - Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ


ಎಸಿಯಲ್ಲಿ ಸ್ಫೋಟದ ನಂತರ ಐಸಿಯು ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ:
ಘಟನಾ ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು, 'ಎಸಿಯಲ್ಲಿ ಸ್ಫೋಟದ ನಂತರ ಐಸಿಯು ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಐಸಿಯು ವಾರ್ಡ್‌ನಲ್ಲಿ 17 ರೋಗಿಗಳು ಚಿಕಿತ್ಸೆಯಲ್ಲಿದ್ದರು. ಈ ಪೈಕಿ 13 ಜನರು ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಅಗ್ನಿಶಾಮಕ ದಳ, ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿರುವುದಾಗಿ ತಿಳಿದುಬಂದಿದೆ.


ಇದನ್ನೂ ಓದಿ - Home Quarantine: ಆರೋಗ್ಯ ಸಚಿವಾಲಯದ ಈ ಟಿಪ್ಸ್ ಅನುಸರಿಸಿ ಮನೆಯಲ್ಲಿಯೇ ನಿಮ್ಮ Oxygen ಮಟ್ಟ ಸುಧಾರಿಸಿ


ನಾಸಿಕ್‌ನಲ್ಲಿ ಆಮ್ಲಜನಕ ಸೋರಿಕೆಯಾದ ಕಾರಣ 24 ಮಂದಿ ಸಾವನ್ನಪ್ಪಿದ್ದಾರೆ:
ಇದಕ್ಕೂ ಮೊದಲು ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ ಬುಧವಾರ (ಏಪ್ರಿಲ್ 21) ಟ್ಯಾಂಕರ್‌ನಿಂದ ಆಮ್ಲಜನಕ ಸೋರಿಕೆಯಾದ ಕಾರಣ 24 ಕರೋನಾ ಸೋಂಕಿತ ರೋಗಿಗಳು ಸಾವನ್ನಪ್ಪಿದ್ದರು. ಈ ಘಟನೆ ನಾಸಿಕ್‌ನ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ನಡೆದಿದ್ದು, ಇದ್ದಕ್ಕಿದ್ದಂತೆ ಟ್ಯಾಂಕರ್‌ನಿಂದ ಆಮ್ಲಜನಕ ಸೋರಿಕೆಯಾದ ಕಾರಣ ಇಡೀ ಆಸ್ಪತ್ರೆ ಆವರಣದಲ್ಲಿ ಹೊಗೆ ಕಾಣಿಸಿಕೊಂಡಿದೆ. ಘಟನೆಯ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶಿಸಿದ್ದಾರೆ ಮತ್ತು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5-5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.