ಒಂದೇ ದಿನದಲ್ಲಿ ದೆಹಲಿಯಲ್ಲಿ 306 ಕೊರೊನಾ ಸಾವು, 26 ಸಾವಿರ ಪ್ರಕರಣ ದಾಖಲು

ಕೋವಿಡ್ ಪ್ರಕರಣಗಳಲ್ಲಿ ಘಾತೀಯ ಏರಿಕೆ ಮತ್ತು ಪುನರಾವರ್ತಿತ ಆಮ್ಲಜನಕದ ಕೊರತೆಯೊಂದಿಗೆ ಹೋರಾಡುತ್ತಿರುವ ದೆಹಲಿ, ಕಳೆದ 24 ಗಂಟೆಗಳಲ್ಲಿ ಇದುವರೆಗಿನ ಅತಿ ಹೆಚ್ಚು ಸಾವುನೋವುಗಳನ್ನು ದಾಖಲಿಸಿದೆ.26,000 ಕ್ಕೂ ಹೆಚ್ಚು ಪ್ರಕರಣಗಳು ಹಾಗೂ 306 ಜನರು ಸಾವನ್ನಪ್ಪಿದ್ದಾರೆ.

Last Updated : Apr 22, 2021, 10:57 PM IST
  • ಇನ್ನೊಂದೆಡೆಗೆ ಕೊರೊನಾ ಸಕಾರಾತ್ಮಕತೆಯ ಪ್ರಮಾಣ ಶೇ 36.24 ರಷ್ಟಕ್ಕೆ ಏರಿದೆ.
ಒಂದೇ ದಿನದಲ್ಲಿ ದೆಹಲಿಯಲ್ಲಿ 306 ಕೊರೊನಾ ಸಾವು, 26 ಸಾವಿರ ಪ್ರಕರಣ ದಾಖಲು  title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್ ಪ್ರಕರಣಗಳಲ್ಲಿ ಘಾತೀಯ ಏರಿಕೆ ಮತ್ತು ಪುನರಾವರ್ತಿತ ಆಮ್ಲಜನಕದ ಕೊರತೆಯೊಂದಿಗೆ ಹೋರಾಡುತ್ತಿರುವ ದೆಹಲಿ, ಕಳೆದ 24 ಗಂಟೆಗಳಲ್ಲಿ ಇದುವರೆಗಿನ ಅತಿ ಹೆಚ್ಚು ಸಾವುನೋವುಗಳನ್ನು ದಾಖಲಿಸಿದೆ.26,000 ಕ್ಕೂ ಹೆಚ್ಚು ಪ್ರಕರಣಗಳು ಹಾಗೂ 306 ಜನರು ಸಾವನ್ನಪ್ಪಿದ್ದಾರೆ.

ಕೊರೊನಾ ಪ್ರಕರಣ ಹೆಚ್ಚಳ: ಭಾರತೀಯ ಭಕ್ತರಿಗೆ ನೋ ಎಂಟ್ರಿ ಎಂದ ನಿತ್ಯಾನಂದನ ಕೈಲಾಸ

ಆ ಮೂಲಕ ಒಟ್ಟು ಸಾವು ನೋವುಗಳ ಸಂಖ್ಯೆ 13,193 ಕ್ಕೆ ಏರಿದೆ ಮತ್ತು ಪ್ರಕರಣಗಳ ಸಂಖ್ಯೆ 9,56,348 ಕ್ಕೆ ಏರಿದೆ, ಅದರಲ್ಲಿ 91,618 ಸಕ್ರಿಯ ಪ್ರಕರಣಗಳಾಗಿವೆ.ಇನ್ನೊಂದೆಡೆಗೆ ಕೊರೊನಾ ಸಕಾರಾತ್ಮಕತೆಯ ಪ್ರಮಾಣ ಶೇ 36.24 ರಷ್ಟಕ್ಕೆ ಏರಿದೆ.

ರಾಜ್ಯಗಳಿಗೆ ಆಮ್ಲಜನಕ ಪೂರೈಕೆ ಪ್ರಕ್ರಿಯೆಗೆ ತಡೆ ಉಂಟಾಗಬಾರದು : ಪ್ರಧಾನಿ ಆದೇಶ

ಕಳೆದ ವಾರದಿಂದ ದೆಹಲಿ 25 ಸಾವಿರ ಪ್ರಕರಣಗಳನ್ನು ದಾಖಲಿಸುತ್ತಿದೆ.ಭಾರಿ ಸಂಖ್ಯೆಯಲ್ಲಿ ತನ್ನ ಆಸ್ಪತ್ರೆಗಳನ್ನು ವಾರ್ ವಲಯಗಳಾಗಿ ಪರಿವರ್ತಿಸಲಾಗಿದೆ, ಅಲ್ಲಿ ಕಳೆದ ಮೂರು ದಿನಗಳಿಂದ, ಹಾಸಿಗೆಗಳು, ಔಷಧಗಳು ಮತ್ತು ಅತ್ಯಂತ ಮುಖ್ಯವಾಗಿ ಆಮ್ಲಜನಕದ ಕೊರತೆಯ ಮಧ್ಯೆ ರೋಗಿಗಳನ್ನು ಉಳಿಸಲು ವೈದ್ಯರು ಹೋರಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News