ನವದೆಹಲಿ: Trending On Social Media - ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ 10ನೇ ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯನ್ನು ರದ್ದುಗೊಳಿಸುವಂತೆ ಮಂಡಳಿಯನ್ನು (CBSE Board) ಒತ್ತಾಯಿಸುತ್ತಿದ್ದಾರೆ. CBSE ಶೀಘ್ರದಲ್ಲೇ ಟರ್ಮ್ 2 (CBSE Class 10th And 12th Term 2 Exam 20222) ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಈ ಹಿಂದೆ, ಕೋವಿಡ್ -19 ಗೆ ಸಂಬಂಧಿಸಿದ ಪರಿಸ್ಥಿತಿ ಸುಧಾರಿಸಿದಾಗ ಮಾತ್ರ ಟರ್ಮ್ 2 ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಸಿಬಿಎಸ್‌ಇ ಮಂಡಳಿ ಹೇಳಿಕೆ ನೀಡಿತ್ತು


COMMERCIAL BREAK
SCROLL TO CONTINUE READING

ಐಎಎನ್‌ಎಸ್‌ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಈ ವರ್ಷ ಮಂಡಳಿಯ ಟರ್ಮ್ 2 ಪರೀಕ್ಷೆಯನ್ನು ರದ್ದುಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ, ಏಕೆಂದರೆ ಆರೋಗ್ಯ ತಜ್ಞರು ಈಗಾಗಲೇ ಮೂರನೇ ಅಲೆ ಕರೋನಾಗೆ ಸಂಬಂಧಿಸಿದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳುತ್ತಿದ್ದಾರೆ. 


ಏತನ್ಮಧ್ಯೆ ಹಲವು ವಿದ್ಯಾರ್ಥಿಗಳು Twitter ನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಕ್ಯಾನ್ಸಲ್ ಮಾಡುವಂತೆ ಬೇಡಿಕೆ ಸಲ್ಲಿಸುತ್ತಿದ್ದಾರೆ. #cancelboardpariksha, #CancelBoardExam2022, #BoardExam ನಂತಹ ಹ್ಯಾಶ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಭಾರಿ ಟ್ರೆಂಡ್ ಮಾಡುತ್ತಿವೆ.


ಇದನ್ನೂ ಓದಿ-Viral Video: ಪುಷ್ಪ ಸಿನಿಮಾದ ‘ಸಾಮಿ-ಸಾಮಿ’ ಹಾಡಿಗೆ ತಾಂಜಾನಿಯಾ ಯುವಕನ ಅದ್ಭುತ ನೃತ್ಯ..!


ಏತನ್ಮಧ್ಯೆ, CBSE ತನ್ನ ಅಧಿಕೃತ ವೆಬ್‌ಸೈಟ್ cbseresults.nic.in ನಲ್ಲಿ ತರಗತಿ -10 ಮತ್ತು ತರಗತಿ -12 ರ ಟರ್ಮ್ - 2 ಗೆ ಸಂಬಂಧಿಸಿದ ಮಾದರಿ ಪತ್ರಿಕೆಗಳನ್ನು ಸಹ ಬಿಡುಗಡೆ ಮಾಡಿದೆ. ಈ ಮಾದರಿ ಪತ್ರಿಕೆಗಳು ಮುಂಬರುವ ಬೋರ್ಡ್ ಪೇಪರ್‌ಗಳಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ಒಳಗೊಂಡಿವೆ. ಇದರೊಂದಿಗೆ ಬೋರ್ಡ್ ಪರೀಕ್ಷೆಗಳ ಅಂಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಅದರಲ್ಲಿ ನೀಡಲಾಗಿದೆ.


ಇದನ್ನೂ ಓದಿ-Viral Video: ಪಾಪ್ ಸಿಂಗರ್ ಕೆನ್ನೆ ಕಚ್ಚಿದ ಹಾವು!, ಭಯಾನಕ ದೃಶ್ಯ ಹೇಗಿದೆ ನೋಡಿ


ಟರ್ಮ್ 1 ಬೋರ್ಡ್ ಪರೀಕ್ಷೆಗಳು MCQ ಸ್ವರೂಪದಲ್ಲಿದ್ದರೆ, ಟರ್ಮ್ 2 ಸಣ್ಣ ಮತ್ತು ದೀರ್ಘ ಉತ್ತರ ಪ್ರಶ್ನೆಗಳನ್ನು ಹೊಂದಿರಲಿವೆ. ಈ ಪೇಪರ್‌ಗಳು 2 ಗಂಟೆಗಳ ಕಾಲ ಇರುತ್ತವೆ. ಟರ್ಮ್-1 ರ ಬೋರ್ಡ್ ಪರೀಕ್ಷೆಗಳನ್ನು ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆಸಲಾಗಿತು, ಆದರೆ ಟರ್ಮ್-2 ರ ಪರೀಕ್ಷೆಗಳು ಈ ವರ್ಷ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿವೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-Crazy Video: ಕರಾಟೆ ಅಭ್ಯಾಸ ಮಾಡುತ್ತಿದ್ದ ಮಾಸ್ಟರ್ ಮೇಲೆ ದೊಡ್ಡ ಕಲ್ಲು ಎಸೆದ ವ್ಯಕ್ತಿ, ಮುಂದೆ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.