Time Is Money: ವೃದ್ಧಾಪ್ಯದಲ್ಲಿ ಸಹಾಯ ಮತ್ತು ಬೆಂಬಲಕ್ಕಾಗಿ Bank ನಲ್ಲಿ Time ಠೇವಣಿ ಮಾಡಿ ! ಏನಿದು ಹೊಸ ಯೋಜನೆ?

Invest Time In Bank - ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಆಸರೆ ಬೇಕಿರುವಾಗ ಯಾರು ಸಹಾಯ ಮಾಡುವರು? ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಲೇ ಇರುತ್ತದೆ.  ಈ ಪ್ರಶ್ನೆಗೆ ಉತ್ತರ ಸ್ವಿಟ್ಜರ್ಲ್ಯಾಂಡ್ ಸೂಚಿಸಿದೆ.

Written by - Nitin Tabib | Last Updated : Jan 17, 2022, 01:15 PM IST
  • Time Is Money ಎಂಬ ಮಾತನ್ನು ನೀವು ಕೇಳಿರಬಹುದು.
  • ಸ್ವಿಟ್ಜರ್ ಲ್ಯಾಂಡ್ ನಲ್ಲಿ ತಲೆಯೆತ್ತಿದ ಟೈಮ್ ಬ್ಯಾಂಕ್ ಗಳು.
  • ಏನಿದು ಹೊಸ ಪರಿಕಲ್ಪನೆ ಅಂತೀರಾ? ಈ ವರದಿ ಓದಿ
Time Is Money: ವೃದ್ಧಾಪ್ಯದಲ್ಲಿ ಸಹಾಯ ಮತ್ತು ಬೆಂಬಲಕ್ಕಾಗಿ Bank ನಲ್ಲಿ Time ಠೇವಣಿ ಮಾಡಿ ! ಏನಿದು ಹೊಸ ಯೋಜನೆ? title=
Time Investment (File Photo)

'Time Is Money' ಎಂಬ ಆಂಗ್ಲ ನಾಣ್ನುಡಿ ನೀವೆಲ್ಲರೂ ಕೇಳಿರಬಹುದು.  ಸ್ವಿಟ್ಜರ್ಲೆಂಡ್‌ನಲ್ಲಿ ಈ ಗಾದೆಯನ್ನು ಅನುಸರಿಸಿ, ಈಗ ಹಣದಂತೆ ಸಮಯದ ಬ್ಯಾಂಕ್ (Time Bank) ತೆರೆಯಲಾಗಿದೆ. ಸ್ವಿಟ್ಜರ್ಲೆಂಡ್‌ನ (Switzerland) ಈ ಸಮಯದ ಬ್ಯಾಂಕ್ ಯೋಜನೆಯ ಮೂಲಕ, ದೇಶದ ನಾಗರಿಕರು ಯಾರಿಗಾದರೂ ಸಹಾಯ ಮಾಡಲು ತಮ್ಮ ಸಮಯವನ್ನು ನೀಡುವ ಮೂಲಕ ಆ ಸಮಯವನ್ನು (Time Investment) ಹಣ ಅಥವಾ ಬಂಡವಾಳದ ರೂಪದಲ್ಲಿ ಉಳಿತಾಯ ಮಾಡಬಹುದು. ಭವಿಷ್ಯದಲ್ಲಿ ಅವರಿಗೆ ಯಾರೊಬ್ಬರ ಸಮಯ ಬೇಕಾದಾಗ, ಅವರು ಬಂಡವಾಳದ ರೂಪದಲ್ಲಿ ಠೇವಣಿ ಮಾಡಿದ ಸಮಯವು ಇನ್ನೊಬ್ಬ ವ್ಯಕ್ತಿಯ ರೂಪದಲ್ಲಿ ಅವರಿಗೆ ಹಿಂತಿರುಗುತ್ತದೆ.

ಸರಳ ಭಾಷೆಯಲ್ಲಿ ಹೇಳುವುದಾದರೆ, ಹೆಚ್ಚುತ್ತಿರುವ ಒಂಟಿತನದ ಸಮಸ್ಯೆಯನ್ನು ಹೋಗಲಾಡಿಸಲು ಇದು ಉತ್ತಮ ಉಪಕ್ರಮವಾಗಿದೆ. ಇದರಲ್ಲಿ ನೀವು ನಿಮ್ಮ ಸಮಯವನ್ನು ಬಂಡವಾಳವಾಗಿ ಬಳಸಬಹುದು. ಸ್ವಿಟ್ಜರ್ಲೆಂಡ್‌ನ ಆರೋಗ್ಯ ಸಚಿವಾಲಯವು ವಿಶೇಷವಾಗಿ ಒಂಟಿಯಾಗಿ ವಾಸಿಸುವ ವೃದ್ಧರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಸಿದ್ಧಪಡಿಸಿದೆ. ಈ ಯೋಜನೆಯ ಅಡಿಯಲ್ಲಿ, ದೇಶದ ಜನರು ನಿರ್ಗತಿಕ ವೃದ್ಧರಿಗೆ ಅಥವಾ ಒಂಟಿಯಾಗಿ ವಾಸಿಸುವ ಜನರಿಗೆ ಸೇವೆ ಸಲ್ಲಿಸಲು ಸಮರ್ಥರಾಗಿದ್ದಾರೆ. ಒಂಟಿಯಾಗಿ ವಾಸಿಸುವ ಜನರ ಒಂಟಿತನವನ್ನು ಹೋಗಲಾಡಿಸಲು, ನೀವು ಅವರೊಂದಿಗೆ ಸಮಯ ಕಳೆಯಬಹುದು. ನೀವು ಯಾವುದೇ ಚಟುವಟಿಕೆ ಇತ್ಯಾದಿಗಳನ್ನು ಪ್ರಾರಂಭಿಸಬಹುದು.

ಯಾವುದೇ ವ್ಯಕ್ತಿಯ ಈ ಸಮಯವನ್ನು ಈ ಸ್ವಯಂಸೇವಕರ ಸಾಮಾಜಿಕ ಭದ್ರತಾ ಖಾತೆಯಲ್ಲಿ ಸಮಯ ಘಟಕಗಳಾಗಿ ಠೇವಣಿ ಮಾಡಲಾಗುತ್ತದೆ. ಈ ಸ್ವಯಂಸೇವಕರು ವೃದ್ಧಾಪ್ಯಕ್ಕೆ ಬಂದಾಗ ಮತ್ತು ಅವರಿಗೆ ಯಾವುದೇ ಕೆಲಸದಲ್ಲಿ ಸಹಾಯ ಬೇಕಾದಾಗ, ಟೈಮ್ ಬ್ಯಾಂಕ್ ಅವರಿಗೆ ಸ್ವಯಂಸೇವಕರನ್ನು ವ್ಯವಸ್ಥೆ ಮಾಡುತ್ತದೆ. ಅವರು ಟೈಮ್ ಬ್ಯಾಂಕ್‌ನಲ್ಲಿ ಎಷ್ಟು ಸಮಯ ಠೇವಣಿ ಇಟ್ಟಿದ್ದಾರೆ, ಅವರಿಗೆ ಅಷ್ಟೇ ಸಮಯಕ್ಕೆ ಸಹಾಯವನ್ನು ಪಡೆಯಲು ಸಾಧ್ಯವಾಗಲಿದೆ.

ನಾವು  ಸಮಯವನ್ನು ಹೇಗೆ ಠೇವಣಿ ಮಾಡಬಹುದು
ಟೈಮ್ ಬ್ಯಾಂಕ್ ಪರಿಕಲ್ಪನೆಯನ್ನು ವಹಿವಾಟಿನ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದು ಸಮಾಲೋಚನೆ, ಮಕ್ಕಳ ಆರೈಕೆ, ಸಲೂನ್ ಸಹಾಯ, ನೈರ್ಮಲ್ಯ ಸಹಾಯ, ತೋಟಗಾರಿಕೆ, ಯಾವುದೇ ಮನೆಗೆಲಸ ಅಥವಾ ಯಾವುದೇ ಇತರ ಸಮಯ ತೆಗೆದುಕೊಳ್ಳುವ ಕೆಲಸವನ್ನು ಒಳಗೊಂಡಿರುತ್ತದೆ. ತೆಗೆದುಕೊಂಡ ಸಮಯವನ್ನು ಟೈಮ್ ಬ್ಯಾಂಕ್ ಟ್ರ್ಯಾಕ್ ಮಾಡುತ್ತದೆ. ನಂತರ ಈ ಸಮಯವನ್ನು ಸಮಯ ಘಟಕದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ-SBI Alert: 40 ಕೋಟಿ ಗ್ರಾಹಕರಿಗೆ SBI ಎಚ್ಚರಿಕೆ! ಈ ಕಾರಣದಿಂದಾಗಿ ನಿಮ್ಮ ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳಬಹುದು

ಈ ದೇಶಗಳಲ್ಲಿ ಸಮಯ ಬ್ಯಾಂಕ್ ಇದೆ (Trending News)
ವಿಭಕ್ತ ಕುಟುಂಬಗಳ ಜೊತೆಗೆ, ವೃದ್ಧರು ಒಂಟಿಯಾಗಿ ಬದುಕುವ ಪ್ರವೃತ್ತಿ ಅಥವಾ ಬಲವಂತವಾಗಿ ಬದುಕುವುದು ವಿಶ್ವಾದ್ಯಂತ ಹೆಚ್ಚುತ್ತಿದೆ. ಉದ್ಯೋಗದ ಕಾರಣದಿಂದ ಮಕ್ಕಳು ತಮ್ಮ ಪೋಷಕರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈ ಒಂಟಿತನವನ್ನು ಎರಡೂ ಕಡೆ ತುಂಬಲು, ಟೈಮ್ ಬ್ಯಾಂಕ್‌ನಂತಹ ಪರಿಕಲ್ಪನೆಗಳು ಹೆಚ್ಚು ಪ್ರಚಲಿತವಾಗುತ್ತಿವೆ. ಅಮೆರಿಕ, ಬ್ರಿಟನ್, ಜಪಾನ್, ನ್ಯೂಜಿಲೆಂಡ್, ಸ್ಪೇನ್ ಮತ್ತು ಗ್ರೀಸ್‌ನಂತಹ ದೇಶಗಳು ಸಹ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
ಇದನ್ನು ಶೀಘ್ರದಲ್ಲೇ ಸಿಂಗಾಪುರದಲ್ಲಿ ಜಾರಿಗೆ ತರಲು ಚಿಂತಿಸಲಾಗುತ್ತಿದೆ.

ಇದನ್ನೂ ಓದಿ-17-01-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

ಭಾರತದಲ್ಲಿ ಇಂತಹ ಮೊದಲ ಬ್ಯಾಂಕ್ ಮಧ್ಯಪ್ರದೇಶದಲ್ಲಿದೆ
ಭಾರತದಲ್ಲಿಯೂ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಮಿತಿಯು 2018 ರಲ್ಲಿ ಈ ಯೋಜನೆಯನ್ನು ಅಳವಡಿಸಿಕೊಳ್ಳಲು ಶಿಫಾರಸು ಮಾಡಿತ್ತು. ಸಮಿತಿಯ ಸಲಹೆಗಳ ಆಧಾರದ ಮೇಲೆ, ಮಧ್ಯಪ್ರದೇಶವು 2019 ರಲ್ಲಿ ಟೈಮ್ ಬ್ಯಾಂಕ್ (Madhya Pradesh Time Bank) ಅನ್ನು ತೆರೆದ ದೇಶದ ಮೊದಲ ರಾಜ್ಯವಾಗಿದೆ. ಇಂದು ಅದರಲ್ಲಿ 500 ಜನರು ಸ್ವಯಂಸೇವಕರಾಗಿದ್ದಾರೆ.

ಇದನ್ನೂ ಓದಿ-ಕೊರೊನಾ ಸಮಯದಲ್ಲಿ ವಿಶ್ವದ 10 ಶ್ರೀಮಂತರ ಸಂಪತ್ತು ದ್ವಿಗುಣ, ಇಲ್ಲಿದೆ ಆ ಬಿಲಿಯನೇರ್‌ಗಳ ಪಟ್ಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News