Two Goods Train Collided In Madhya Pradesh: ಸಿಂಗ್‌ಪುರ ರೈಲು ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ರೈಲು ಅಪಘಾತ ಸಂಭವಿಸಿದೆ. ಇಂದು (ಏಪ್ರಿಲ್ 19) ಬೆಳಿಗ್ಗೆ ಮಧ್ಯಪ್ರದೇಶದ ಸಿಂಗ್‌ಪುರ ರೈಲು ನಿಲ್ದಾಣದ ಬಳಿ ಎರಡು ಗೂಡ್ಸ್ ರೈಲುಗಳು ಪರಸ್ಪರ ಮುಖಾಮುಖಿಯಾಗಿದ್ದು ಈ ದುರ್ಘಟನೆಯಲ್ಲಿ ಓರ್ವ ಲೋಕೋ ಪೈಲಟ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.  


COMMERCIAL BREAK
SCROLL TO CONTINUE READING

ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಲಾಸ್‌ಪುರದಿಂದ ಕಟ್ನಿ ರೈಲ್ವೇ ಮಾರ್ಗದಲ್ಲಿ ಶಹದೋಲ್‌ಗೆ 10 ಕಿಮೀ ಮೊದಲು  ಸಿಂಗ್‌ಪುರ ರೈಲು ನಿಲ್ದಾಣದ ಬಳಿ ಎರಡು ಗೂಡ್ಸ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಬಳಿಕ ರೈಲುಗಳ ಇಂಜಿನ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, 3 ಬೋಗಿಗಳು ಪಲ್ಟಿಯಾಗಿವೆ. ಅಪಘಾತದಲ್ಲಿ ಓರ್ವ ಲೋಕೋ ಚಾಲಕ ಸಾವನ್ನಪ್ಪಿದ್ದು, ಆತನ ಇಬ್ಬರು ಸಹಚರರು ಗಾಯಗೊಂಡಿದ್ದಾರೆ ಎನ್ನಲಾಗಿದೆ. 


Covid-19: ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ, 24 ಗಂಟೆಯಲ್ಲಿ ಶೇ.38ರಷ್ಟು ಹೆಚ್ಚಳ!


ಘಟನೆ ಕುರಿತಂತೆ ಮಾಹಿತಿ ನೀಡಿರುವ ಆಗ್ನೇಯ ಮಧ್ಯ ರೈಲ್ವೆಯು ಇಂದು ಬೆಳಿಗ್ಗೆ 7.15ರ ಸುಮಾರಿಗೆ ಆಗ್ನೇಯ ಮಧ್ಯ ರೈಲ್ವೆಯ ಬಿಲಾಸ್‌ಪುರ-ಕಟ್ನಿ ವಿಭಾಗದ ಸಿಂಗ್‌ಪುರ ನಿಲ್ದಾಣದಲ್ಲಿ ಕಲ್ಲಿದ್ದಲು ತುಂಬಿದ ಸರಕು ರೈಲಿನ ಸಿಗ್ನಲ್ ಓವರ್‌ಶೂಟ್‌ನ ನಂತರ ಎಂಜಿನ್ ಸೇರಿದಂತೆ 09 ವ್ಯಾಗನ್‌ಗಳು ಹಳಿತಪ್ಪಿದ ಕುರಿತು ಬುಲೆಟಿನ್ ಅನ್ನು ಬಿಡುಗಡೆ ಮಾಡಿತು. 


ಘಟನೆ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆ, ರೈಲ್ವೆ ಅಧಿಕಾರಿಗಳು ಮತ್ತು ನೌಕರರು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರು. ಘಟನೆ ಬಳಿಕ ಎಲ್ಲಾ ಮೂರು ಮಾರ್ಗಗಳಲ್ಲಿ ರೈಲು ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ. 


ಇದನ್ನೂ ಓದಿ- Mayor Dance viral photo: ಕುಡಿದ ಮತ್ತಿನಲ್ಲಿ ಎಲ್ಲಾ ಬಟ್ಟೆ ಬಿಚ್ಚಿದ ಮೇಯರ್‌


ಇನ್ನೂ ಈ ಘಟನೆ ಕುರಿತಂತೆ ಕಾರಣವೇನು ಎಂದು ಇನ್ನೂ ಕೂಡ ನಿಖರವಾಗಿ ತಿಳಿದುಬಂದಿಲ್ಲ. ವಿವರವಾದ ತನಿಖೆಯ ನಂತರವೇ ಅಪಘಾತದ ನಿಖರವಾದ ಕಾರಣ ಪತ್ತೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.