Mayor Dance viral photo: ಕುಡಿದ ಮತ್ತಿನಲ್ಲಿ ಎಲ್ಲಾ ಬಟ್ಟೆ ಬಿಚ್ಚಿದ ಮೇಯರ್‌

Colombia mayor martin alfonso dance : ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲೂ ಕೆಲವು ವಿಡಿಯೋಗಳು ನೋಡುಗರನ್ನು ನಿಬ್ಬೆರಗಾಗಿಸುತ್ತವೆ. ಇದೀಗ ಅಂಥದ್ದೆ ಒಂದು ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಮೇಯರ್‌ ಒಬ್ಬರು ಮಾಡದ ಕೆಲಸ ಪ್ರತಿಪಕ್ಷಗಳಿಗೆ ಹೋಳಿಗೆ ಊಟದಂತಾಗಿದೆ.   

Written by - Chetana Devarmani | Last Updated : Apr 19, 2023, 12:35 PM IST
  • ಕುಡಿದ ಮತ್ತಿನಲ್ಲಿ ಎಲ್ಲಾ ಬಟ್ಟೆ ಬಿಚ್ಚಿದ ಮೇಯರ್‌
  • ಪ್ರತಿಪಕ್ಷಗಳ ಬಾಯಿಗೆ ಹೂರಣವಾದ ಘಟನೆ
  • ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ವೈರಲ್‌
Mayor Dance viral photo: ಕುಡಿದ ಮತ್ತಿನಲ್ಲಿ ಎಲ್ಲಾ ಬಟ್ಟೆ ಬಿಚ್ಚಿದ ಮೇಯರ್‌  title=

Viral News: ಕುಡಿದ ವ್ಯಕ್ತಿ ಏನು ಮಾಡುತ್ತಾನೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಎಣ್ಣೆ ಏಟಲ್ಲಿ ಕೆಲವರು ಮಾಡುವ ಅವಾಂತರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ. ಇದೀಗ ಮೇಯರ್ ಒಬ್ಬರು ನೈಟ್‌ಕ್ಲಬ್‌ನಲ್ಲಿ ನೃತ್ಯ ಮಾಡುವಾಗ, ಎಲ್ಲಾ ಮಿತಿಗಳನ್ನು ದಾಟಿ ಬಟ್ಟೆಗಳನ್ನು ಕಳಚಿರುವ ದೃಶ್ಯ ಎಲ್ಲೆಡೆ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪ್ರಕರಣ ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ನಡೆದಿದೆ. ಮೇಯರ್ ವಿಡಿಯೋ ವೈರಲ್ ಆದ ಬಳಿಕ ಅವರ ಪಕ್ಷಕ್ಕೂ ಮುಖಭಂಗವಾಗಿದೆ.

ಇದನ್ನೂ ಓದಿ : ನೀರಡಿಕೆಯಿಂದ ಬಳಲುತ್ತಿದ್ದ ತೋಳಕ್ಕೆ ನೀರುಣಿಸಿದ ವ್ಯಕ್ತಿ..! ಹೃದಯಸ್ಪರ್ಶಿ ವಿಡಿಯೋ ವೈರಲ್‌

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಮಾರ್ಟಿನ್ ಕುಡಿದ ಅಮಲಿನಲ್ಲಿ ಮೊದಲು ತನ್ನ ಶರ್ಟ್ ಅನ್ನು ತೆಗೆದರು ಮತ್ತು ನಂತರ ತನ್ನ ಪ್ಯಾಂಟ್ ತೆಗೆಯಲು ಸಹ ಮುಂದಾದರು. ಆ ವೇಳೆ ಮಹಿಳೆಯರೂ ಅಲ್ಲಿದ್ದರು. 

Viral News

ಈ ಘಟನೆಯ ವಿಡಿಯೋ ವೈರಲ್ ಆದ ನಂತರ ದೇಶದ ಉಳಿದ ನಾಯಕರು ಮೇಯರ್ ಅವರನ್ನು ಸಾಕಷ್ಟು ಟೀಕಿಸುತ್ತಿದ್ದಾರೆ. ಕ್ರಿಶ್ಚಿಯನ್ ಧರ್ಮವನ್ನು ನಂಬುವ ಈ ದೇಶದಲ್ಲಿ ಹೋಲಿ ವೀಕ್ ನಡೆಯುತ್ತಿರುವಾಗ ಈ ಘಟನೆ ಜರುಗಿದೆ ಎನ್ನಲಾಗುತ್ತಿದೆ. ಪ್ರತಿಪಕ್ಷಗಳು ಮೇಯರ್‌ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ.  

ಇದನ್ನೂ ಓದಿ : Viral Video: ಷರ್ಟ್-ಪ್ಯಾಂಟ್ ಬಿಚ್ಚಿ ಮೆಟ್ರೊ ರೈಲಿನಲ್ಲಿ ಆ ಕೆಲ್ಸಾನೂ ಮಾಡೇಬಿಟ್ಟ ಈ ಭೂಪ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News