ನೀವು ಜಗತ್ತಿನ ಯಾವುದೇ ಮೂಲಗೆ ಪ್ರಯಾಣಿಸಬೇಕಾದರೂ ಅದಕ್ಕೆ ಪಾಸ್ ಪೋರ್ಟ್ ಅವಶ್ಯಕ. ಅನೇಕ ದೇಶಗಳ ಪಾಸ್ಪೋರ್ಟ್ ಬಣ್ಣಗಳು ವಿಭಿನ್ನವಾಗಿವೆ. ಈ ಬಣ್ಣಗಳು ಕೆಲವು ವಿಶೇಷ ಅರ್ಥಗಳನ್ನು ಹೊಂದಿವೆ. ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೆ, ವೀಸಾ ಇಲ್ಲದೆ 60 ದೇಶಗಳಿಗೆ ಪ್ರಯಾಣಿಸಬಹುದು. ಇನ್ನು ಭಾರತದಲ್ಲಿ ಎಷ್ಟು ರೀತಿಯ ಪಾಸ್‌ಪೋರ್ಟ್‌ಗಳಿವೆ ಎಂದು ನಿಮಗೆ ತಿಳಿದಿದೆಯೇ! ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಮದುವೆ ಮಂಟಪದಲ್ಲಿ ವಧುವನ್ನು ಕಂಡು ಕಿರುಚಾಡುತ್ತಾ ಎದ್ದು ಬಿದ್ದು ಓಡಿಹೋದ ವರ!


ಭಾರತೀಯ ಪಾಸ್‌ಪೋರ್ಟ್‌ಗಳಲ್ಲಿ ಎಷ್ಟು ವಿಧಗಳಿವೆ?


ಭಾರತದಲ್ಲಿ ಮೂರು ವಿಧದ ಪಾಸ್‌ಪೋರ್ಟ್‌ಗಳಿವೆ. ಇವುಗಳಿಲ್ಲದೆ ನೀವು ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಯಾವುದೇ ವಿದೇಶಿ ಪ್ರಯಾಣದ ಹೊರತಾಗಿ, ವಿಳಾಸ ಪುರಾವೆಗಾಗಿ ಇದನ್ನು ಬಳಸಬಹುದು. ಇದು ಪ್ರಮುಖ ID ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.


ಪಾಸ್ ಪೋರ್ಟ್ ಬಣ್ಣದ ಅರ್ಥ:


ನೀಲಿ ಪಾಸ್ ಪೋರ್ಟ್: 


ಭಾರತದಲ್ಲಿ ಹೆಚ್ಚಾಗಿ ನೀಲಿ ಬಣ್ಣದ ಪಾಸ್‌ಪೋರ್ಟ್‌ಗಳನ್ನು ಬಳಸಲಾಗುತ್ತದೆ. ಇದು ಸಾಮಾನ್ಯ ಭಾರತೀಯ ನಾಗರಿಕರಿಗೆ ಮೀಸಲಿಡಲಾಗುತ್ತದೆ. ನೀಲಿ ಬಣ್ಣವು ಭಾರತವನ್ನು ಪ್ರತಿನಿಧಿಸುತ್ತದೆ. ಪಾಸ್‌ಪೋರ್ಟ್‌ನ ಬಣ್ಣಗಳು ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ನಾಗರಿಕರನ್ನು ಗುರುತಿಸಲು ಅನುಕೂಲ ಮಾಡಿಕೊಡುತ್ತವೆ. ಪಾಸ್‌ಪೋರ್ಟ್‌ನ ಬಣ್ಣವನ್ನು ನೋಡುವ ಮೂಲಕ, ಕಸ್ಟಮ್ಸ್ ಅಧಿಕಾರಿ ಅಥವಾ ವಿದೇಶದಲ್ಲಿರುವ ಪಾಸ್‌ಪೋರ್ಟ್ ಪರೀಕ್ಷಕರು ಭಾರತದ ಜನರನ್ನು ಗುರುತಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಅವರು ತಮ್ಮ ದೇಶಕ್ಕೆ ಬರುವ ವ್ಯಕ್ತಿ ಯಾವ ಸ್ಥಾನದಲ್ಲಿ ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತಾರೆ.


ಬಿಳಿ ಪಾಸ್ ಪೋರ್ಟ್:


ಭಾರತ ಸರ್ಕಾರದ ಸರ್ಕಾರಿ ಅಧಿಕಾರಿಗೆ ಬಿಳಿ ಬಣ್ಣದ ಪಾಸ್‌ಪೋರ್ಟ್ ನೀಡಲಾಗುತ್ತದೆ. ಆ ವ್ಯಕ್ತಿ ಯಾವುದೇ ಸರ್ಕಾರಿ ಕೆಲಸಕ್ಕಾಗಿ ವಿದೇಶಕ್ಕೆ ಹೋದರೆ, ಆಗ ಅವರಿಗೆ ಈ ಪಾಸ್‌ಪೋರ್ಟ್ ನೀಡಲಾಗುತ್ತದೆ. ಇದು ಅವರ ಅಧಿಕೃತ ಗುರುತನ್ನು ಹೇಳುತ್ತದೆ. ಕಸ್ಟಮ್ಸ್ ತಪಾಸಣೆಯ ಸಮಯದಲ್ಲಿ ಅವರು ವಿಭಿನ್ನವಾಗಿ ವ್ಯವಹರಿಸುತ್ತಾರೆ.


ಇದನ್ನೂ ಓದಿ: Viral Video: ತಂದೆಗೆ ಕೆಲಸ ಸಿಕ್ಕಿತೆಂದು ಮಗಳು ನೀಡಿದ ಪ್ರತಿಕ್ರಿಯೆ ನೋಡಿದ್ರೆ ಕಣ್ಣೀರು ಬರುತ್ತೆ!


ಮೆರೂನ್ ಪಾಸ್‌ಪೋರ್ಟ್‌:


ಮೆರೂನ್ ಬಣ್ಣದ ಪಾಸ್‌ಪೋರ್ಟ್‌ಗಳನ್ನು ಭಾರತೀಯ ರಾಜತಾಂತ್ರಿಕರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುತ್ತದೆ. ಇದು ಉತ್ತಮ ಗುಣಮಟ್ಟದ ಪಾಸ್‌ಪೋರ್ಟ್ ಆಗಿದ್ದು, ಇದಕ್ಕಾಗಿ ಪ್ರತ್ಯೇಕ ಅರ್ಜಿಯನ್ನು ನೀಡಲಾಗುತ್ತದೆ. ಈ ಪಾಸ್‌ಪೋರ್ಟ್‌ನೊಂದಿಗೆ ಪ್ರಯಾಣಿಸುವ ಜನರಿಗೆ ರಾಯಭಾರ ಕಚೇರಿಯಿಂದ ವಿದೇಶಗಳಿಗೆ ಪ್ರಯಾಣಿಸುವಾಗ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ಮೆರೂನ್ ಪಾಸ್‌ಪೋರ್ಟ್ ಹೊಂದಿದ್ದರೆ ವೀಸಾದ ಅಗತ್ಯವಿರುವುದಿಲ್ಲ. ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಭಾರತದ ಹೈ ಕಮಿಷನ್‌ನ ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಗೆ ನೀಡಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.