ಸಾವರ್ಕರ್ ಅವಮಾನಿಸಿದ್ರೆ ಪರಿಸ್ಥಿತಿ ನೆಟ್ಟಗಿರಲ್ಲ: ರಾಹುಲ್ ಗಾಂಧಿಗೆ ಉದ್ಧವ್ ಠಾಕ್ರೆ ತಿರುಗೇಟು!
Uddhav Thackeray on Savarkar row: ಅಂಡಮಾನ್‍ನ ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ 14 ವರ್ಷ ಊಹಿಸಲಾಗದ ಹಿಂಸೆ ಅನುಭವಿಸಿದರು. ನಾವು ಸಾವರ್ಕರ್ ಅವರಿಗೆ ಆಗುವ ಅವಮಾನವನ್ನು ಸಹಿಸಲಾರೆವು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ನವದೆಹಲಿ: ಸಂಸದ ಸ್ಥಾನದಿಂದ ಅನರ್ಹ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಗುಡುಗಿದ್ದರು. ‘ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ. ನಾನು ಕ್ಷಮೆ ಕೇಳುವುದಿಲ್ಲ’ವೆಂದು ರಾಹುಲ್ ಕಿಡಿಕಾರಿದ್ದರು.
ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ. ‘ನಮ್ಮ ಆರಾಧ್ಯ ದೈವ ವೀರ ಸಾವರ್ಕರ್ ಅವರನ್ನು ಅವಮಾನಿಸಬೇಡಿ, ಅವಮಾನಿಸಿದರೆ ಪರಿಸ್ಥಿತಿ ಸರಿಯಾಗಿರುವುದಿಲ್ಲ ಅಂತಾ ರಾಹುಲ್‍ಗೆ ಉದ್ಧವ್ ಠಾಕ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಶಾಲಾ ತಪಾಸಣೆ ವೇಳೆ ಸಾರಾಯಿ, ಕಾಂಡೋಮ್ ಪತ್ತೆ..!
‘ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರನ್ನು ಎಲ್ಲರೂ ತಮ್ಮ ಆರಾಧ್ಯ ದೈವವೆಂದು ನಂಬಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಅವಮಾನಿಸಬೇಡಿ. ಅಂಡಮಾನ್‍ನ ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ 14 ವರ್ಷ ಊಹಿಸಲಾಗದ ಹಿಂಸೆ ಅನುಭವಿಸಿದರು. ಅವರ ನೋವುಗಳನ್ನು ಮಾತ್ರ ಕೇಳಬಹುದು, ಅದು ಅವರ ತ್ಯಾಗದ ಪ್ರತೀಕ. ನಾವು ಸಾವರ್ಕರ್ ಅವರಿಗೆ ಆಗುವ ಅವಮಾನವನ್ನು ಸಹಿಸಲಾರೆವು’ ಎಂದು ಹೇಳಿದ್ದಾರೆ.
‘ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಕೀಳಾಗಿ ಕಂಡರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಉಂಟಾಗಬಹುದು. ಸಾವರ್ಕರ್ ನಮ್ಮ ದೇವರು, ಅವರಿಗೆ ಅಗೌರವ ತೋರಿಸಿದ್ರೆ ನಾವು ಸಹಿಸುವುದಿಲ್ಲ. ನಾವು ಹೋರಾಟಕ್ಕೆ ಸಿದ್ದರಿದ್ದೇವೆ. ನಮ್ಮ ದೇವರನ್ನು ಅವಮಾನಿಸಿದ್ರೆ ಅದನ್ನು ಸಹಿಸುವುದಿಲ್ಲ’ವೆಂದು ಹೇಳಿದ್ದಾರೆ.
ಇದನ್ನೂ ಓದಿ: "ಮೈತ್ರಿ ಮಾಡಿಕೊಳ್ಳುವುದು ನಮ್ಮ ಕೆಲಸವಲ್ಲ, ಮೈತ್ರಿಗೆ ಸಹಕಾರ ನೀಡುವುದು ನಮ್ಮ ಕೆಲಸ"
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.