UIDAI Alert : `ಪ್ರತಿ ೧೨ ಡಿಜಿಟ್ ನಂಬರ್ ಆಧಾರ್ ಆಗಿರುವುದಿಲ್ಲ ` ನಿಮ್ಮ ಆಧಾರ ಕಾರ್ಡ್ ಅನ್ನೊಮ್ಮೆ ಪರಿಶೀಲಿಸಿಕೊಳ್ಳಿ
Aadhaar Latest News Update : ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಯುಐಡಿಎಐ ಎಚ್ಚರಿಕೆಯ ಸಂದೇಶವನ್ನು ಜಾರಿ ಮಾಡಿದೆ. ಎಲ್ಲಾ 12 ಅಂಕೆಗಳ ಸಂಖ್ಯೆಯನ್ನು ಆಧಾರ್ ಎಂದು ಪರಿಗಣಿಸಲಾಗುವುದಿಲ್ಲ ಎಂದು ಯುಐಡಿಎಐ ಹೇಳಿದೆ.
Aadhaar Latest News Update : ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಯುಐಡಿಎಐ ಎಚ್ಚರಿಕೆಯ (UIDAI Alert) ಸಂದೇಶವನ್ನು ಜಾರಿ ಮಾಡಿದೆ. ಎಲ್ಲಾ 12 ಅಂಕೆಗಳ ಸಂಖ್ಯೆಯನ್ನು ಆಧಾರ್ ಎಂದು ಪರಿಗಣಿಸಲಾಗುವುದಿಲ್ಲ ಎಂದು ಯುಐಡಿಎಐ ಹೇಳಿದೆ. ವಾಸ್ತವವಾಗಿ, ಆಧಾರ್ ಬಗ್ಗೆ ಕೇಳಿ ಬರುತ್ತಿರುವ ವಂಚನೆ ದೂರುಗಳ ಆಧಾರದಲ್ಲಿ ಯುಐಡಿಎಐ ಈ ಎಚ್ಚರಿಕೆಯನ್ನು ನೀಡಿದೆ. ಇದು ಬಹಳ ಗಂಭೀರ ವಿಚಾರವಾಗಿದ್ದು, ನಿರ್ಲಕ್ಷಿಸುವುದರಿಂದ ಭಾರೀ ನಷ್ಟ ಉಂಟಾಗಬಹುದು.
'ಪ್ರತಿ 12 ಡಿಜಿಟ್ ನಂಬರ್ ಆಧಾರ್ ಅಲ್ಲ':
ಯುಐಡಿಎಐ (UIDAI) ಟ್ವಿಟರ್ ಮೂಲಕ ಈ ಎಚ್ಚರಿಕೆಯನ್ನು ನೀಡಿದೆ. ಇದರಲ್ಲಿ ಎಲ್ಲಾ 12 ಡಿಜಿಟ್ ಸಂಖ್ಯೆಗಳು ಆಧಾರ್ ಅಲ್ಲ ಎಂದು ಬರೆಯಲಾಗಿದೆ. ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಆಧಾರ್ (Aadhaar) ಅನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ. ಆದ್ದರಿಂದ, ಆಧಾರ್ ಅಗತ್ಯವಿರುವ ಯಾವುದೇ ಕೆಲಸವನ್ನು ಮಾಡುವಾಗಲೂ, ಎದುರಿನವರು ನೀಡಿರುವ ಆಧಾರ್ ಸಂಖ್ಯೆಯನ್ನು ಖಂಡಿತವಾಗಿಯೂ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!
Aadhaar card) ಪ್ರಮುಖ ದಾಖಲೆಯಾಗಿದೆ. ಪ್ರತಿ ಹಂತದಲ್ಲೂ ಇದರ ಅಗತ್ಯವಿರುತ್ತದೆ. ಆದರೆ ಆಧಾರ್ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ಸಹ ವಂಚನೆಗೆ ಬಲಿಯಾಗಬಹುದು. ಏಕೆಂದರೆ ಆಧಾರ್ ನೊಂದಿಗೆ ವ್ಯಕಿಯ ಎಲ್ಲ ಸೂಕ್ಷ್ಮ ಮಾಹಿತಿಯನ್ನು ಲಗತ್ತಿಸಲಾಗಿರುತ್ತದೆ. ಆದ್ದರಿಂದಲೇ, ಯುಐಡಿಎಐ, ಆಧಾರ್‌ಗೆ ಸಂಬಂಧಿಸಿದ ನವೀಕರಣಗಳ ಬಗ್ಗೆ ಜನರನ್ನು ಎಚ್ಚರಿಸುತ್ತಲೇ ಇರುತ್ತದೆ.
ಇದನ್ನೂ ಓದಿ : Personal Loan : ವೈಯಕ್ತಿಕ ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿ ಲಭ್ಯ : ಹೇಗೆ ಕ್ಲೈಮ್ ಮಾಡಬೇಕು ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ