Chhota Rajan : ಆಸ್ಪತ್ರೆಗೆ ದಾಖಲಾದ ಭೂಗತ ಪಾತಕಿ ಛೋಟಾ ರಾಜನ್..!
ಛೋಟಾ ರಾಜನ್ ನನ್ನು ಜುಲೈ 27 ರಂದು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಿಸಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಗುರುವಾರ ತಿಳಿಸಲಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿರುವ ಛೋಟಾ ರಾಜನ್ ನನ್ನು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನವದೆಹಲಿ : ಭೂಗತ ಪಾತಕಿ ರಾಜೇಂದ್ರ ನಿಖಾಲ್ಜೆ ಅಲಿಯಾಸ್ ಛೋಟಾ ರಾಜನ್ ನನ್ನು ಜುಲೈ 27 ರಂದು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಿಸಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಗುರುವಾರ ತಿಳಿಸಲಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿರುವ ಛೋಟಾ ರಾಜನ್ ನನ್ನು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದಕ್ಕೂ ಮುನ್ನ ಏಪ್ರಿಲ್‌ನಲ್ಲಿ 61 ವರ್ಷದ ಛೋಟಾ ರಾಜನ್(Chhota Rajan) ಗೆ ಕೋವಿಡ್-19 ಪಾಸಿಟಿವ್ ಬಂದ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ : Income Tax Return : ಈಗ ನೀವು Mobile ನಲ್ಲೆ IT ರಿಟರ್ನ್ ಫೈಲ್ ಮಾಡಬಹುದು! ಹೇಗೆ ಇಲ್ಲಿದೆ ನೋಡಿ
ಪಾತಕಿ ರಾಜನ್ ನನ್ನು ಇಂಡೋನೇಷ್ಯಾದ ಬಾಲಿಯಿಂದ 2015 ರಲ್ಲಿ ಬಂಧಿಸಿದ ಭಾರತಕ್ಕೆ ಗಡೀಪಾರು ಮಾಡಲಾಯಿತು. ಅಂದಿನಿಂದ ದೆಹಲಿಯ ತಿಹಾರ್ ಜೈಲಿ(Tihar Jail)ನಲ್ಲಿ ಜೈಲು ಶಿಕ್ಷೆಅನುಭವಿಸುತ್ತಿದ್ದಾನೆ.
ಗಮನಿಸಬೇಕಾದ ಸಂಗತಿಯೆಂದರೆ, ಮೇ 7 ರಂದು ಛೋಟಾ ರಾಜನ್ ಸಾವಿನ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಡಿದ್ದವು, ಇದನ್ನು ನಂತರ ಏಮ್ಸ್(AIIMS) ಅಧಿಕಾರಿಗಳು ತಿರಸ್ಕರಿಸಿದರು.
ಇದನ್ನೂ ಓದಿ : SBI YONO App: ಆನ್‌ಲೈನ್ ಬ್ಯಾಂಕಿಂಗ್ ನಿಯಮಗಳನ್ನು ಬದಲಾಯಿಸಿದ ಎಸ್‌ಬಿಐ
2011 ರಲ್ಲಿ ಪತ್ರಕರ್ತ ಜೆ ಡೇ(J Dey) ಅವರನ್ನು ಕೊಲೆ ಮಾಡಿದ್ದಕ್ಕಾಗಿ 2018 ರಲ್ಲಿ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ