ನವದೆಹಲಿ: ಅಮೇರಿಕನ್ ಪಿಜ್ಜಾ ರೆಸ್ಟೋರೆಂಟ್ ಚೈನ್ ಔಟ್‌ಲೆಟ್ ತನಗೆ ಮಾಂಸಾಹಾರಿ ಪಿಜ್ಜಾವನ್ನು ವಿತರಿಸಿದ ಹಿನ್ನಲೆಯಲ್ಲಿ ಈಗ ಮಹಿಳೆಯೊಬ್ಬಳು ರೆಸ್ಟೋರೆಂಟ್  ನಿಂದ  ₹ 1 ಕೋಟಿ ಪರಿಹಾರವನ್ನು ಕೋರಿ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾಳೆ.ಈಗ ದೂರು ನೀಡಿರುವ ದೀಪಾಲಿ ತ್ಯಾಗಿ ತನ್ನ ಅರ್ಜಿಯಲ್ಲಿ, ಧಾರ್ಮಿಕ ನಂಬಿಕೆಗಳು, ಬೋಧನೆಗಳು, ಕುಟುಂಬ ಸಂಪ್ರದಾಯಗಳು, ಸ್ವಂತ ಮನಸ್ಸಾಕ್ಷಿ ಮತ್ತು ಅವಳ ಅತ್ಯುತ್ತಮ ಆಯ್ಕೆಯಿಂದಾಗಿ ತಾನು ಶುದ್ಧ ಸಸ್ಯಾಹಾರಿ ಎಂದು ಹೇಳಿಕೊಂಡಿದ್ದಾಳೆ.


COMMERCIAL BREAK
SCROLL TO CONTINUE READING

ಮಾರ್ಚ್ 21,2019 ರಂದು ದೀಪಾಲಿ ಉತ್ತರ ಪ್ರದೇಶದ ಘಜಿಯಾಬಾದ್‌ನಲ್ಲಿರುವ ತನ್ನ ನಿವಾಸದಲ್ಲಿ ಪಿಜ್ಜಾ  ಔಟ್‌ಲೆಟ್‌ನಿಂದ ಸಸ್ಯಾಹಾರಿ ಪಿಜ್ಜಾಕ್ಕಾಗಿ ಮಹಿಳೆ ಆರ್ಡರ್ ಮಾಡಿದ್ದರು. ಆ ದಿನ ಹೋಳಿಯ ಸಂದರ್ಭವಾಗಿದ್ದು, ಅವರ ಮಕ್ಕಳು ಹಸಿವಿನಿಂದ ಬಳಲುತ್ತಿದ್ದರು ಆದರೆ ಆಗ ನಿಗಧಿತ ಸಮಯದಲ್ಲಿ ಪಿಜ್ಜಾವನ್ನು ತಲುಪಿಸಲುವಲ್ಲ್ಲಿರೆಸ್ಟೋರೆಂಟ್ 30 ನಿಮಿಷಗಳ ವಿಳಂಭ ಮಾಡಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾವೈರಸ್ ಹಿನ್ನಲೆಯಲ್ಲಿ ಭಾರತದ ಪಾತ್ರದ ಬಗ್ಗೆ ಆ ಇಂಗ್ಲೆಂಡ್ ಸಚಿವ ಹೇಳಿದ್ದೇನು..?


ಕೊನೆಗೆ ಮಹಿಳೆ ಆ ಆರ್ಡರನ್ನು ಸ್ವೀಕರಿಸಿದಾಗ ಅದು ನಾನ್ ವೆಜ್ ಪಿಜ್ಜಾ ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ ಎನ್ನಲಾಗಿದೆ. ಈಗ ಆಕೆಯ ತನ್ನ ವಕೀಲ ಫರ್ಹತ್ ವಾರ್ಸಿ ಹೇಳುವಂತೆ ತನ್ನ ದೂರುದಾರರು ಗ್ರಾಹಕ ನ್ಯಾಯಾಲಯಕ್ಕೆ ಈ ವಿಚಾರವಾಗಿ ತಕ್ಷಣ ಗ್ರಾಹಕ ಕೇರ್ ಗೆ ಕರೆ ಮಾಡಿ ಅವರ ನಿರ್ಲಕ್ಷ್ಯದ ಬಗ್ಗೆ ದೂರು ನೀಡಿದ್ದರು ಮತ್ತು ಶುದ್ಧ ಸಸ್ಯಾಹಾರಿಗಳ ಮನೆಗೆ ನಾನ್ ವೆಜ್ ಪಿಜ್ಜಾವನ್ನು ವಿತರಿಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ನಂತರ, ಮಾರ್ಚ್ 26, 2019 ರಂದು,  ಪಿಜ್ಜಾ ಔಟ್‌ಲೆಟ್‌ನ ಜಿಲ್ಲಾ ವ್ಯವಸ್ಥಾಪಕನು ದೂರುದಾರರಿಗೆ ಕರೆ ಮಾಡಿ, ದೂರುದಾರರ ಇಡೀ ಕುಟುಂಬಕ್ಕೆ ಪಿಜ್ಜಾಗಳನ್ನು ಉಚಿತವಾಗಿ ನೀಡುವ ಪ್ರಸ್ತಾಪವನ್ನು ನೀಡಿದರು.


ಇದನ್ನೂ ಓದಿ: Automobile ಕ್ಷೇತ್ರದಲ್ಲಿ Top Manufacturing Center ಆಗಲಿದೆ ಭಾರತ, Nitin Gadkari ಭವಿಷ್ಯ


ಆದರೆ ಮಹಿಳೆಯ ಪರ ವಕೀಲನು ಇದು ಸರಳ ಪ್ರಕರಣವಲ್ಲ , ಏಕೆಂದರೆ ಕಂಪನಿಯು ದೂರುದಾರರ "ಧಾರ್ಮಿಕ ಆಚರಣೆಗಳನ್ನು ಹಾಳುಮಾಡಿದೆ" ಮತ್ತು  ಇದರಿಂದಾಗಿ ಆಕೆಗೆ ಶಾಶ್ವತ ಮಾನಸಿಕ ಸಂಕಟವನ್ನು ಅನುಭವಿಸಬೇಕಾಗಿದೆ, ಇದರಿಂದ ಹೊರ ಹೊರಬರಲು ಅವರು ತನ್ನ ಜೀವನದಲ್ಲಿ ಲಕ್ಷಾಂತರ ರೂಪಾಯಿಗಳವರೆಗೆ ವ್ಯಯ ಮಾಡಬೇಕಾಗುತ್ತದೆ ಎಂದು ದೂರಿದ್ದಾರೆ.ಈಗ ಈ ವಿಚಾರವಾಗಿ ಪಿಜ್ಜಾ  ಔಟ್‌ಲೆಟ್‌ನ ಜಿಲ್ಲಾ ವ್ಯವಸ್ಥಾಪಕರು ಉತ್ತರಿಸಿದ್ದು, ಹಣದ ವಿಚಾರದಲ್ಲಿ ಮಾತುಕತೆ ನಡೆಸಲು ತಮಗೆ ಅಧಿಕಾರವಿಲ್ಲದ ಕಾರಣ, ಅವರು ಈ ವಿಷಯವನ್ನು ತಮ್ಮ ಕಾನೂನು ತಂಡಕ್ಕೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.


ದನ್ನೂ ಓದಿ: West Bengal assembly election 2021: ಪ.ಬಂಗಾಳದ ನಂದಿಗ್ರಾಮದಲ್ಲಿ ಮೊಳಗಲಿದೆ ರೈತರ ಕಹಳೆ


ಇದಕ್ಕೆ ಪ್ರತಿಕ್ರಿಯಿಸಿರುವ ಆ ಮಹಿಳೆ, ಈಗ ಕಂಪನಿ ನೀಡುವುದಾಗಿ ಹೇಳಿರುವ ಉಚಿತ ಪಿಜ್ಜಾ ವಿತರಣೆ ಪ್ರಸ್ತಾಪವು ದೂರುದಾರರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ವ್ಯಂಗ್ಯಮಾಡುವಂತಿದೆ ಎಂದು ತಿಳಿಸಿದ್ದಾರೆ.ಇನ್ನೂ ಮುಂದುವರೆದು ಕಂಪನಿ ಪ್ರಾಣಿಗಳ ಮಾಂಸವನ್ನು ಬೆರೆಸಿ ಆಹಾರವನ್ನು ಕಲುಸಿತಗೊಳಿಸಿದೆ. ಅಷ್ಟೇ ಅಲ್ಲದೆ ತನ್ನ ಧಾರ್ಮಿಕ ಸಂಪ್ರದಾಯದ ಪ್ರಕಾರ ಪ್ರಾಣಿಯನ್ನು ಕೊಂದು ಆದರ ಮಾಂಸವನ್ನು ಸೇವಿಸುವುದು ಮಹಾ ಪಾಪವಾಗಿದೆ.ಪ್ರಾಣಿಗಳ ಮಾಂಸವನ್ನು ತಿನ್ನುವ ಆ ಪಾಪದಲ್ಲಿ  ಕಂಪನಿಯೂ ಮೋಸದಿಂದ ಭಾಗಿಯಾಗಿದೆ. ಇಡೀ ಜೀವನದಲ್ಲಿ ಇದರಿಂದಾಗಿ ಮಾನಸಿಕ ಸಂಕಟವನ್ನು ಅನುಭವಿಸುವುದಾಗಿದೆ. ಅಷ್ಟೇ ಅಲ್ಲದೆ ಧಾರ್ಮಿಕ ನಂಬಿಕೆಯನ್ನು ಹಾಳು ಮಾಡಲಾಗಿದೆ ಎಂದು ಆ ಮಹಿಳೆ ದೂರು ನೀಡಿದ್ದಾಳೆ. 


ಈಗ ಆ ಮಹಿಳೆ ತನಗೆ ₹ 1 ಕೋಟಿ ರೂ ಪರಿಹಾರವನ್ನು ನೀಡಬೇಕೆಂದು ಗ್ರಾಹಕರ ನ್ಯಾಯಾಲಯವನ್ನು ಕೋರಿದ್ದಾರೆ.ಈಗ ದೆಹಲಿ ಜಿಲ್ಲಾ ಗ್ರಾಹಕ ವಿವಾದ ನಿವಾರಣಾ ಆಯೋಗವು ಮಹಿಳೆಯ ದೂರಿಗೆ ಉತ್ತರವನ್ನು ಸಲ್ಲಿಸುವಂತೆ ಪಿಜ್ಜಾ ಔಟ್‌ಲೆಟ್‌ಗೆ ಸೂಚಿಸಿದೆ ಮತ್ತು ಮಾರ್ಚ್ 17 ರಂದು ಹೆಚ್ಚಿನ ವಿಚಾರಣೆಗೆ ಈ ವಿಷಯವನ್ನು ಪಟ್ಟಿ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.