ನವದೆಹಲಿ: ಭಾರತ ಮತ್ತು ಯುಎಸ್ ನಡುವಿನ 2+2 ಮಾತುಕತೆಗೆ ವೇದಿಕೆ ಸಜ್ಜಾಗಿದ್ದು ಇದೀಗ ಅಮೆರಿಕದ ಈ ಸಂವಾದದಲ್ಲಿ ಭಾಗವಹಿಸಲು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ (Mike Pompeo) ಮತ್ತು ರಕ್ಷಣಾ ಸಚಿವ ಮಾರ್ಕ್ ಟಿ ಎಸ್ಪರ್ (Mark T Esper) ದೆಹಲಿಯನ್ನು ತಲುಪಿದ್ದಾರೆ.


S Jaishankar) ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.


COMMERCIAL BREAK
SCROLL TO CONTINUE READING

ಚೀನಾ ಮತ್ತು ಪಾಕಿಸ್ತಾನದ ವಿಷಯದ ಬಗ್ಗೆ ಚರ್ಚೆ ಸಾಧ್ಯತೆ:
ಉಭಯ ದೇಶಗಳ ಈ ಮಹತ್ವದ ಸಭೆ ಭಾರತ ಮತ್ತು ಅಮೆರಿಕ ಎರಡಕ್ಕೂ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.  2+2 ಮಾತುಕತೆ ವೇಳೆ ಚೀನಾ ಮತ್ತು ಪಾಕಿಸ್ತಾನದ ವಿಷಯವು ಮಹತ್ವದ್ದಾಗಿದೆ ಎನ್ನಲಾಗುತ್ತಿದೆ. ಏತನ್ಮಧ್ಯೆ ಯುಎಸ್-ಭಾರತದ ನಡುವಿನ ಈ ಸಭೆ ಬಗ್ಗೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ.  ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ತನ್ನ ಭೇಟಿ ಮೂಲಕ ಮೈಕ್ ಪೊಂಪಿಯೊ 'ಚೀನಾ ವಿರೋಧಿ ಯುನೈಟೆಡ್ ಫ್ರಂಟ್' ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬರೆದಿದೆ.


PHOTOS: ಅಮೇರಿಕನ್ ಯುವತಿಗೆ ಭಾರತದ ರೈತನ ಮೇಲೆ ಮೂಡಿದ ಪ್ರೀತಿ!


ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳ ಸಾಧ್ಯತೆ: 
ಈ ಸಭೆಯಲ್ಲಿ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದದಡಿಯಲ್ಲಿ (Basic Exchange and Cooperation Agreement) ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಕೆಲವು ಒಪ್ಪಂದಗಳು ನಡೆಯಲಿವೆ. ಇವುಗಳಲ್ಲಿ ಪ್ರಾದೇಶಿಕ ಭದ್ರತಾ ಸಹಕಾರ, ರಕ್ಷಣಾ ಮಾಹಿತಿ ಹಂಚಿಕೆ, ಮಿಲಿಟರಿ ಮಾತುಕತೆಗಳು ಮತ್ತು ರಕ್ಷಣಾ ವ್ಯಾಪಾರ ಒಪ್ಪಂದಗಳು ಸೇರಿವೆ. ಈ ಒಪ್ಪಂದದೊಂದಿಗೆ ಭಾರತವು ಯುಎಸ್ನಿಂದ ನಿಖರವಾದ ಜಿಯೋಸ್ಪೇಷಿಯಲ್ ಡೇಟಾವನ್ನು ಪಡೆಯುತ್ತದೆ. ಇದು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.