PHOTOS: ಅಮೇರಿಕನ್ ಯುವತಿಗೆ ಭಾರತದ ರೈತನ ಮೇಲೆ ಮೂಡಿದ ಪ್ರೀತಿ!

ಫೇಸ್ ಬುಕ್ ಮೂಲಕ ರೈತ ದೀಪಕ್ ಹಾಗೂ ವಿದೇಶಿ ಯುವತಿ ಜೆಲಿ ಲಿಜೆತ್ ಸ್ನೇಹ ಪ್ರಾರಂಭವಾಯಿತು. ಬಳಿಕ ಈ ಇಬ್ಬರೂ  WhatsApp ನಲ್ಲಿ ಮಾತನಾಡಲು ಪ್ರಾರಂಭಿಸಿದರು.

  • Mar 21, 2019, 14:21 PM IST

ಹೋಶಂಗಾಬಾದ್: ಪ್ರೀತಿಗೆ ಯಾವುದೇ ಮಿತಿಯಿಲ್ಲ. ಅದು ಏಳು ಸಮುದ್ರವನ್ನೂ ದಾಟುವ ಶಕ್ತಿ ಹೊಂದಿದೆ ಎಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಮಧ್ಯಪ್ರದೇಶದ ಹೋಶಂಗಬಾದ್ ರೈತ ಹಾಗೂ ಅಮೇರಿಕಾದ ಹುಡುಗಿ ನಡುವೆ ಪ್ರೇಮಾಂಕುರವಾಗಿದೆ.  ತನ್ನ ಪ್ರಿಯತಮನಿಗಾಗಿ ಆಕೆ ಭಾರತಕ್ಕೆ ತಲುಪಿದ್ದಾಳೆ.

ವಾಸ್ತವವಾಗಿ, ಸಿವಾನಿ ಮಾಲ್ವಾದ ಬಿಸೌನಿಕ ಎಂಬ ಗ್ರಾಮದ ರೈತ ದೀಪಕ್ ರಜಪೂತ್(36) ಮತ್ತು ಅಮೆರಿಕಾದ ಜೆಲಿ ಲಿಜೆತ್(40) ನಡುವೆ ಫೇಸ್ ಬುಕ್ ನಲ್ಲಿ ಪ್ರಾರಂಭವಾದ ಪ್ರೇಮ ಹೋಳಿ ದಿನದಂದು ಮದುವೆಯಾಗಿ ಬದಲಾಗಿದೆ.

1 /5

ಜೆಲಿ ಲಿಜೆತ್ ಟೆರಾಜಸ್ ಆಕಾ ಜೂಲಿ ಯುಎಸ್ ಮಾನವ ಸಂಪನ್ಮೂಲ ಇಲಾಖೆ (HRD) ಅಧಿಕಾರಿ. ಫೇಸ್ ಬುಕ್ ಮೂಲಕ ರೈತ ದೀಪಕ್ ಹಾಗೂ ವಿದೇಶಿ ಹುಡುಗಿ ಜೆಲಿ ಲಿಜೆತ್ ಸ್ನೇಹ ಪ್ರಾರಂಭವಾಯಿತು. ಬಳಿಕ ಈ ಇಬ್ಬರೂ  WhatsApp ನಲ್ಲಿ ಮಾತನಾಡಲು ಪ್ರಾರಂಭಿಸಿದರು.

2 /5

ಕಳೆದ ಎರಡು ತಿಂಗಳ ಹಿಂದೆ ಜೆಲಿ ಲಿಜೆತ್ ಭಾರತದ ಪ್ರವಾಸಕ್ಕಾಗಿ ಬಂದರು. ಈ ಸಮಯದಲ್ಲಿ ಇಬ್ಬರೂ ಭೇಟಿಯಾದರು. ಇಂದು ಹೋಳಿ ಸಂದರ್ಭದಲ್ಲಿ ನರ್ಮದಾ ಕರಾವಳಿಯಲ್ಲಿರುವ ಚಿತ್ರಗುಪ್ತ ದೇವಸ್ಥಾನದಲ್ಲಿ ವೈದಿಕ ಆಚರಣೆಗಳನ್ನು ವಿವಾಹವಾದರು.

3 /5

ಜೆಲಿ ಲಿಜೆತ್ ದಕ್ಷಿಣ ಅಮೆರಿಕಾದ ಓವ್ಲಿ ಟಾಸ್ ಬಲ್ಗೇರಿಯಾ ನಗರದ ನಿವಾಸಿ. ಮೂರು ವರ್ಷಗಳ ಹಿಂದೆ ಇವರಿಬ್ಬರ ನಡುವೆ ಫೇಸ್ ಬುಕ್ ಪರಿಚಯವಾಗಿದೆ. ಬಿ.ಕಾಂ ಪದವೀದರರಾದ ದೀಪಕ್ ಫೇಸ್ ಬುಕ್ ನಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು. ದೀಪಕ್ ವಿಚಾರದಾರೆಗಳಿಂದ ಪ್ರಭಾವಿತರಾದ ಜೆಲಿ WhatsApp ನಲ್ಲಿ ಮಾತನಾಡಲು ಪ್ರಾರಂಭಿಸಿದರು. ದಿನಗಳೆದಂತೆ ಇಬ್ಬರೂ ಕರೆ ಮಾಡಿ ಮಾತನಾಡುತ್ತಿದ್ದರು. ಏತನ್ಮಧ್ಯೆ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ದೀಪಕ್ ಮದುವೆ ಪ್ರಸ್ತಾಪ ಮಾಡುತ್ತಿದ್ದಂತೆ ಜೆಲಿ ಅದನ್ನು ಸ್ವೀಕರಿಸಿದರು. ಎರಡೂ ಕುಟುಂಬವೂ ಈ ವಿವಾಹದಿಂದ ಸಂತೋಷವಾಗಿವೆ ಎಂದು ದೀಪಕ್ ಹೇಳಿದ್ದಾರೆ.

4 /5

ಎರಡು ತಿಂಗಳಿನಿಂದ ಭಾರತದ ಪ್ರವಾಸದಲ್ಲಿರುವ ಜೆಲಿ, ಭಾರತದ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದಾರಂತೆ. ಅದೇ ಸಮಯದಲ್ಲಿ, ಭಾರತವು ಬಹಳ ಸುಂದರ ದೇಶ. ಇಲ್ಲಿ ಜನರು ಬಹಳ ಒಳ್ಳೆಯವರು ಎಂದು ಜೆಲಿ ಲಿಜೆತ್ ನಂಬುತ್ತಾರೆ.

5 /5

'ದೀಪಕ್ ತಮ್ಮ ಬಳಿ ಬಂದು ತಾನು ದಕ್ಷಿಣ ಅಮೆರಿಕಾದ ಯುವತಿಯನ್ನು ಮದುವೆಯಾಗಲು ಬಯಸಿರುವುದಾಗಿ ತಿಳಿಸಿ, ನ್ಯಾಯಾಲಯದಿಂದ ಅಗತ್ಯ ನಾವು ಕಾನೂನು ದಾಖಲೆಗಳನ್ನು ಮಾಡುವಂತೆ ಮನವಿ ಮಾಡಿದ್ದರು. ಇದರ ನಂತರ, ಈಗ ಅವರು ವೈದಿಕ ಸಂಪ್ರದಾಯಗಳನ್ನು ಮದುವೆ ಆಗಿದ್ದಾರೆ" ಎಂದು ಅಡ್ವೋಕೇಟ್ ಆನಂದ ಡ್ಯೂಬೆ ಹೇಳಿದ್ದಾರೆ.  

You May Like

Sponsored by Taboola