Uttarakhand Bus Accident: ಉತ್ತರಾಖಂಡ್ ನ ವಿಕಾಸ್ ನಗರ್ ಬಳಿ ಹಳ್ಳಕ್ಕೆ ಉರುಳಿದ ಬಸ್, ಇದುವರೆಗೆ 15 ಶವಗಳನ್ನು ಹೊರತೆಗೆಯಲಾಗಿದೆ
Uttarakhand Bus Accident: ಉತ್ತರಾಖಂಡ್ ನ ಡೆಹ್ರಾಡೂನ್‌ನ ವಿಕಾಸನಗರ ಬಳಿಯ ಬುಲ್ಹಾದ್ ಬೈಲಾ ರಸ್ತೆಯಲ್ಲಿ ಬಸ್ ಹಳ್ಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಇದುವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ.
Uttarakhand Bus Accident: ಉತ್ತರಾಖಂಡದಲ್ಲಿ (Uttarakhand) ಇಂದು ಭೀಕರ ಅಪಘಾತ ಸಂಭವಿಸಿದೆ. ಡೆಹ್ರಾಡೂನ್‌ನ (Dehradun) ವಿಕಾಸನಗರ ಬಳಿಯ ಬುಲ್ಹಾದ್ ಬೈಲಾ ರಸ್ತೆಯಲ್ಲಿ ಬಸ್ ಹಳ್ಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಇದುವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿದ್ದ ಗ್ರಾಮಸ್ಥರೆಲ್ಲ ಒಂದೇ ಊರಿನವರೆಂದು ಹೇಳಲಾಗುತ್ತಿದೆ. ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಚಕ್ರತಾ ಎಸ್‌ಡಿಎಂ ತಿಳಿಸಿದ್ದಾರೆ.
ಇದನ್ನೂ ಓದಿ-ಧನ್ತೇರಸ್-ದೀಪಾವಳಿ ಬಳಿಕ ಚಿನ್ನದ ಬೆಲೆ 8 ಸಾವಿರ ರೂ. ಏರಿಕೆ ಸಾಧ್ಯತೆ: ಈಗ ಖರೀದಿಸುವುದು ಸೂಕ್ತವೇ?
ಅಪಘಾತಕ್ಕೆ ಓವರ್ಲೋಡಿಂಗ್ ಕಾರಣ ಎಂದ ಪೊಲೀಸರು
ಅಪಘಾತಕ್ಕೆ ಓವರ್‌ಲೋಡ್ ಒಂದು ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಸ್ ಚಿಕ್ಕದಾಗಿದ್ದು, ಅದರಲ್ಲಿ 25 ಜನರು ಪ್ರಯಾಣಿಸುತ್ತಿದ್ದರು. ಈ ಬಸ್ (Bus Accident) ಹೊರಡುವ ಮಾರ್ಗದಲ್ಲಿ ಹೆಚ್ಚು ಬಸ್‌ಗಳಿಲ್ಲದ ಕಾರಣ ಒಂದೇ ಬಸ್‌ನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ-ಕಾಂಗ್ರೆಸ್ ನಿಂದಾಗಿಯೇ ಪ್ರಧಾನಿ ಮೋದಿ ಶಕ್ತಿಶಾಲಿಯಾಗಿರುವುದು-ಮಮತಾ ಬ್ಯಾನರ್ಜೀ
ಶೋಕ ವ್ಯಕ್ತಪಡಿಸಿದ ಸಿಎಂ ಪುಷ್ಕರ್ ಧಾಮಿ
ಅಪಘಾತದ ಕುರಿತು ಟ್ವೀಟ್ ಮಾಡಿರುವ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಧಾಮಿ (CM Pushkar Dhami), "ಚಕ್ರತಾ ಪ್ರದೇಶದ ಬುಲ್ಹಾದ್-ಬೈಲಾ ರಸ್ತೆಯಲ್ಲಿ ಸಂಭವಿಸಿದ ಹೃದಯ ವಿದ್ರಾವಕ ರಸ್ತೆ ಅಪಘಾತಕ್ಕೆ ನನ್ನ ಸಂತಾಪಗಳು. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಕುಟುಂಬ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಮತ್ತು ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.
Strom R3: ವಿಶ್ವದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರನ್ನು ಕೇವಲ 10 ಸಾವಿರಕ್ಕೆ ಬುಕ್ ಮಾಡಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ