Strom R3: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ತತ್ತರಿಸಿರುವ ಜನರು ಈಗ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ನೀವೂ ಸಹ ಎಲೆಕ್ಟ್ರಿಕ್ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ಪ್ರಯೋಜನಕಾರಿ ಆಗಿದೆ. ಅತ್ಯುತ್ತಮ ಎಲೆಕ್ಟ್ರಿಕ್ ಕಾರಿನ ಬಗ್ಗೆ ಈ ಲೇಖನದಲ್ಲಿ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ಈ ಕಾರನ್ನು ತುಂಬಾ ಅಗ್ಗದ ದರದಲ್ಲಿ ಖರೀದಿಸಬಹುದಾಗಿದೆ.
ವಿಶ್ವದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರ್:
ಮುಂಬೈ ಮೂಲದ ಸ್ಟಾರ್ಟಪ್ ಕಂಪನಿ ಸ್ಟ್ರೋಮ್ ಮೋಟಾರ್ಸ್ ಈ ಕಾರನ್ನು ತಯಾರಿಸಿದೆ. ಇದು 3 ಚಕ್ರಗಳನ್ನು ಹೊಂದಿದೆ. ಆದರೆ, ಇದು ಸಾಮಾನ್ಯ ತ್ರಿಚಕ್ರ ವಾಹನದಂತೆ ಅಲ್ಲ. ಇದರ ಹೊರತಾಗಿಯೂ, ಅದರ ಲುಕ್ ಸಾಕಷ್ಟು ವಿಶಿಷ್ಟವಾಗಿದೆ. ಇದು ವಿಶ್ವದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು (Cheapest electric car) ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ- New Bike Driving Rule: ಬೈಕ್ ಸವಾರರೇ ಎಚ್ಚರ! ಸರ್ಕಾರದ ಈ ಹೊಸ ನಿಯಮಗಳನ್ನು ತಪ್ಪದೇ ಓದಿ
2022 ರ ವೇಳೆಗೆ ಕಾರ್ ವಿತರಿಸಲಾಗುವುದು:
ಸ್ಟ್ರೋಮ್ ಮೋಟಾರ್ಸ್ ಈ ಕಾರಿಗೆ ಸ್ಟ್ರೋಮ್ ಆರ್3 (Strom R3) ಎಂದು ಹೆಸರಿಸಿದೆ. ಈ ಕಾರನ್ನು ಬುಕ್ ಮಾಡಲು, ನೀವು 10000 ರೂಪಾಯಿಗಳನ್ನು ಪಾವತಿಸಿದರೆ ಸಾಕು. ಕಂಪನಿಯು ಆರಂಭದಲ್ಲಿ ಈ ಎಲೆಕ್ಟ್ರಿಕ್ ಕಾರನ್ನು ಮುಂಬೈ ಮತ್ತು ದೆಹಲಿ-ಎನ್‌ಸಿಆರ್ ರಸ್ತೆಗಳಲ್ಲಿ ಬಿಡುಗಡೆ ಮಾಡಲು ಯೋಚಿಸಿದೆ. ಈ ಎಲೆಕ್ಟ್ರಿಕ್ ಕಾರನ್ನು ಮುಂದಿನ ವರ್ಷ ಅಂದರೆ 2022 ರ ವೇಳೆಗೆ ವಿತರಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.
ಇದರ ಲುಕ್ ಬಹಳ ವಿಶಿಷ್ಟವಾಗಿದೆ:
ನೀವು ಅನೇಕ ತ್ರಿಚಕ್ರ ವಾಹನಗಳನ್ನು ನೋಡಿರಬೇಕು. ಆದರೆ ಸ್ಟ್ರೋಮ್ ಆರ್3 ಸಾಮಾನ್ಯ ತ್ರಿಚಕ್ರ ವಾಹನದಂತಿಲ್ಲ. ಸಾಮಾನ್ಯ ಎಂಜಿನ್‌ನಲ್ಲಿರುವ ಮೂರು ಚಕ್ರಗಳ ಮುಂಭಾಗದಲ್ಲಿ ಒಂದು ಚಕ್ರ ಮತ್ತು ಹಿಂಭಾಗದಲ್ಲಿ ಎರಡು ಇರುತ್ತದೆ. ಆದರೆ ಈ ಕಾರಿನಲ್ಲಿ ಇದು ವಿರುದ್ಧವಾಗಿದೆ. ಅಂದರೆ, Strom R3 ಕಾರಿನಂತೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಮಧ್ಯದಲ್ಲಿ ಎರಡು ಚಕ್ರಗಳನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ ಈ ಕಾರು ಸುಮಾರು 200 ಕಿ.ಮೀ ದೂರ ಕ್ರಮಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಇದರ ಹೊರತಾಗಿ, Strom R3 4G ಸಂಪರ್ಕಿತ ಡಯಾಗ್ನೋಸ್ಟಿಕ್ ಎಂಜಿನ್ ಅನ್ನು ಪಡೆಯುತ್ತದೆ, ಇದು ಚಾಲಕನಿಗೆ ಟ್ರ್ಯಾಕ್ ಸ್ಥಳ ಮತ್ತು ಚಾರ್ಜ್ ಸ್ಥಿತಿಯನ್ನು ತಿಳಿಸುತ್ತದೆ. ಈ ಕಾರಿನಲ್ಲಿ ನೀವು ಸನ್‌ರೂಫ್ ಅನ್ನು ಸಹ ಪಡೆಯುತ್ತೀರಿ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ- Electric Bike:ಮಾರುಕಟ್ಟೆಗೆ ಬಿಡುಗಡೆಯಾಗಿದೆ ಈ ಹೊಸ e-Bike, ಒಂದೇ ಚಾರ್ಜ್ ನಲ್ಲಿ 160 ಕಿ.ಮೀ ಮೈಲೇಜ್
ಈ ರೀತಿ ಬುಕ್ ಮಾಡಬಹುದು:
ಸ್ಟ್ರೋಮ್ ಆರ್3 ಕಾರಿನ ಬೆಲೆ 4.5 ಲಕ್ಷ ರೂ. ಎಂದು ಹೇಳಲಾಗುತ್ತಿದೆ. ನೀವು ಅದರ ವೇಗವನ್ನು ಪರಿಗಣಿಸಿದರೆ, ಅದು ಗಂಟೆಗೆ ಗರಿಷ್ಠ 80 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದು. ಕಾರನ್ನು ಖರೀದಿಸಿದಾಗ, ನೀವು ಮೊದಲ ಮೂರು ವರ್ಷಗಳವರೆಗೆ ಅಥವಾ 1 ಲಕ್ಷ ಕಿಮೀ ವರೆಗೆ ವಾರಂಟಿಯನ್ನು ಪಡೆಯುತ್ತೀರಿ. ಇದು ಹವಾನಿಯಂತ್ರಣವನ್ನು ಸಹ ಹೊಂದಿದೆ. ನೀವು Strom R3 ಅನ್ನು ಖರೀದಿಸಲು ಬಯಸಿದರೆ, ನಂತರ ನೀವು Strom Motors ನ ಅಧಿಕೃತ ವೆಬ್‌ಸೈಟ್ https://www.strommotors.com/ ಗೆ ಭೇಟಿ ನೀಡುವ ಮೂಲಕ ಬುಕ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ