ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಅನಾಮಧೇಯ ದಾನಿಯಿಂದ ಬಂತು 60 ಕೆಜಿ ಚಿನ್ನ!
Kashi Vishwanath temple: ಕಾಶಿಯ ವಿಶ್ವನಾಥ ದೇವಸ್ಥಾನಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಚಿನ್ನ ಬಂದಿದೆ.
ವಾರಣಾಸಿ: ಕಾಶಿ ವಿಶ್ವನಾಥ ದೇಗುಲಕ್ಕೆ (Kashi Vishwanath temple) ಅನಾಮಧೇಯ ದಾನಿಯೊಬ್ಬರು 60 ಕೆಜಿ ಚಿನ್ನಾಭರಣ ನೀಡಿದ್ದು, ಅದರಲ್ಲಿ 37 ಕೆಜಿಯನ್ನು ಗರ್ಭಗುಡಿಯ ಒಳಗೋಡೆಗಳಿಗೆ ಬಳಸಲಾಗಿದೆ.
ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸ ಇದೆಯಾ? ಹಾಗಾದ್ರೆ ಹಾನಿ ಕಟ್ಟಿಟ್ಟ ಬುತ್ತಿ!
ದೇವಾಲಯಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳು 'ಝರೋಖಾ ದರ್ಶನ' (ಬಾಗಿಲಿನ ಹೊರಗಿನಿಂದ ದೇವರನ್ನು ನೋಡುವುದು) ಮೂಲಕ ಪ್ರಾರ್ಥನೆ ಸಲ್ಲಿಸುವಾಗ ಗೋಡೆಗಳ ಮೇಲೆ ಚಿನ್ನದ ಲೇಪನದ ನೋಟವನ್ನು ಪಡೆಯುತ್ತಾರೆ. .
ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ಮಾತನಾಡಿ, "ದೇವಸ್ಥಾನಕ್ಕೆ (Varanasi) ಅನಾಮಧೇಯ ದಾನಿಯಿಂದ 60 ಕಿಲೋಗ್ರಾಂ ಚಿನ್ನ ಬಂದಿದೆ, ಅದರಲ್ಲಿ 37 ಕೆಜಿಯನ್ನು ಗರ್ಭಗುಡಿಯ ಒಳಗೋಡೆಗಳ ಚಿನ್ನದ ಲೇಪನಕ್ಕೆ ಬಳಸಲಾಗಿದೆ" ಎಂದಿದ್ದಾರೆ.
ದೇವಾಲಯದ ಅಧಿಕಾರಿಗಳು ದೇಣಿಗೆ ನೀಡಿದ ಚಿನ್ನವನ್ನು ಗರ್ಭಗುಡಿಯ ಒಳಗೋಡೆಯ ಚಿನ್ನದ ಲೇಪನಕ್ಕಾಗಿ ಮತ್ತು ಮುಖ್ಯ ದೇವಾಲಯದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸಿದ್ದಾರೆ.
ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಅನ್ನೇ ಏಕೆ ಆಯ್ಕೆ ಮಾಡುತ್ತಾರೆ?
ಕಾಶಿ ವಿಶ್ವನಾಥ ದೇಗುಲದ (Kashi) ಇತಿಹಾಸದ ಪ್ರಕಾರ, 1777 ರಲ್ಲಿ ಇಂದೋರ್‌ನ ರಾಣಿ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ದೇವಾಲಯದ ಪುನರ್ನಿರ್ಮಾಣದ ನಂತರ, ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಸುಮಾರು ಒಂದು ಟನ್ ಚಿನ್ನವನ್ನು ದಾನ ಮಾಡಿದರು, ಇದನ್ನು ದೇಗುಲದ ಎರಡು ಗುಮ್ಮಟಗಳಿಗೆ ಬಳಸಲಾಯಿತು.
18 ನೇ ಶತಮಾನದ ನಂತರ, 2017 ರಲ್ಲಿ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದ ನಂತರ ದೇಗುಲದ ಪ್ರದೇಶವನ್ನು ವಿಸ್ತರಿಸುವ ಪ್ರಮುಖ ಕೆಲಸವನ್ನು ಪ್ರಧಾನಿ (PM Modi) ಖಚಿತಪಡಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.