Photo Gallery: ಕಾಶಿ ವಿಶ್ವನಾಥನಿಗೆ ಪೂಜೆ, ಗಂಗಾ ಆರತಿ ಸಲ್ಲಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಇಂದು(ಡಿ.13) ಕಾಶಿಯ ಭವ್ಯ ಸ್ವರೂಪ ‘ಕಾಶಿ ವಿಶ್ವನಾಥ ಧಾಮ’ವನ್ನು ಲೋಕಾರ್ಪಣೆಗೊಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಇಂದು(ಡಿ.13) ಉತ್ತರಪ್ರದೇಶದ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್(Kashi Vishwanath Corridor)ನ್ನು ಉದ್ಘಾಟಿಸಿದರು. ಗಂಗಾ ನದಿಯಲ್ಲಿ ಮಿಂದು ವಿಶ್ವನಾಥ ಮಂದಿರದಲ್ಲಿ ಪೂಜೆ ಸಲ್ಲಿಸಿದರು. 339 ಕೋಟಿ ರೂ. ವೆಚ್ಚದಲ್ಲಿ ಈ ಕಾರಿಡಾರ್ ಸಿದ್ಧಪಡಿಸಲಾಗಿದೆ. 2014ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಶಿಗೆ ಬಂದಿದ್ದಾಗ ಗಂಗಾಮಾತೆ ನನಗೆ ಕರೆ ನೀಡಿದ್ದರು ಎಂದು ಮೋದಿ ಸ್ಮರಿಸಿಕೊಂಡಿದ್ದಾರೆ. ಕಾಶಿ ವಿಶ್ವನಾಥ್ ಕಾರಿಡಾರ್ ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾಗಿದೆ. ಪವಿತ್ರ ತೀರ್ಥಕ್ಷೇತ್ರ ಕಾಶಿಯಲ್ಲಿ ಪ್ರಧಾನಿ ಮೋದಿಯವರ ಐತಿಹಾಸಿಕ ಕ್ಷಣಗಳು ಹೇಗಿದ್ದವು ಎಂಬುದರ ಚಿತ್ರಪಟಗಳು ಇಲ್ಲಿವೆ ನೋಡಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

339 ಕೋಟಿ ರೂ. ವೆಚ್ಚದ ‘ಕಾಶಿ ವಿಶ್ವನಾಥ ಕಾರಿಡಾರ್’(Kashi Vishwanath Corridor)ನ್ನು ಉದ್ಘಾಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಸೂರ್ಯದೇವನಿಗೆ ಅರ್ಘ್ಯ ನೀಡಿದರು.   ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಗೂ ಮುನ್ನ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಸೂರ್ಯದೇವನಿಗೆ ಅರ್ಘ್ಯ ನೀಡಿದರು. #KashiVishwanathDham #DivyaKashiBhavyaKashi pic.twitter.com/pjpoJDuA9b — BJP Karnataka (@BJP4Karnataka) December 13, 2021

2 /5

ದೇಶದ ಸಮಸ್ತ ಜನತೆಗೆ ಇದೊಂದು ಐತಿಹಾಸಿಕ ಕ್ಷಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ‘ಕಾಶಿ ವಿಶ್ವನಾಥ ಧಾಮ’ವನ್ನು ದೇಶಕ್ಕೆ ಸಮರ್ಪಿಸುವ ಮುನ್ನ ವಿವಿಧ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡು ಕಾಶಿ ವಿಶ್ವನಾಥನಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು. ದೇಶದ ಸಮಸ್ತ ಜನತೆಗೆ ಐತಿಹಾಸಿಕ ಕ್ಷಣ. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಶ್ರೀ @narendramodi ಅವರು ಕಾಶಿ ವಿಶ್ವನಾಥ ಧಾಮವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. #KashiVishwanathDham #DivyaKashiBhavyaKashi pic.twitter.com/9IB5pKgsA9 — BJP Karnataka (@BJP4Karnataka) December 13, 2021

3 /5

ಉತ್ತರಪ್ರದೇಶದ ವಾರಣಾಸಿಯಲ್ಲಿ ‘ಕಾಶಿ ವಿಶ್ವನಾಥ ಕಾರಿಡಾರ್’(Kashi Vishwanath Corridor)ನ್ನು ಉದ್ಘಾಟಿಸುವ ಮುನ್ನ ಪ್ರಧಾನಿ ಮೋದಿಯವರು ಕಾಶಿ ವಿಶ್ವನಾಥನಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿದ ಕ್ಷಣ. ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ ಪ್ರಧಾನಿ ಶ್ರೀ @narendramodi#KashiVishwanathDham #DivyaKashiBhavyaKashi pic.twitter.com/IiPvvCYPwz — BJP Karnataka (@BJP4Karnataka) December 13, 2021

4 /5

ಪ್ರಧಾನಿ ನರೇಂದ್ರ ಮೋದಿಯವರು ಕಾಶಿಯ ಭವ್ಯ ಸ್ವರೂಪ ‘ಕಾಶಿ ವಿಶ್ವನಾಥ ಧಾಮ’ವನ್ನು ಲೋಕಾರ್ಪಣೆಗೊಳಿಸಿದರು. ಪ್ರಧಾನಿ ಶ್ರೀ @narendramodi ಅವರು ಕಾಶಿಯ ಭವ್ಯ ಸ್ವರೂಪ 'ಕಾಶಿ ವಿಶ್ವನಾಥ ಧಾಮ'ವನ್ನು ಲೋಕಾರ್ಪಣೆಗೊಳಿಸಿದರು. #KashiVishwanathDham #DivyaKashiBhavyaKashi pic.twitter.com/K7yjroi7Gc — BJP Karnataka (@BJP4Karnataka) December 13, 2021

5 /5

‘ಕಾಶಿ ವಿಶ್ವನಾಥ ಧಾಮ’ದ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಶ್ರಮಿಕರೊಂದಿಗೆ ಪ್ರಧಾನಿ ಮೋದಿ ಅವರು ಭೋಜನ ಸ್ವೀಕರಿಸಿದರು. ಬಳಿಕ ಕಾಶಿಯಲ್ಲಿ ಗಂಗಾ ಆರತಿ ಪೂಜೆ ನೆರವೇರಿಸಿದರು. ಕಾಶಿ ವಿಶ್ವನಾಥ ಧಾಮದ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಶ್ರಮಿಕರೊಂದಿಗೆ ಪ್ರಧಾನಿ ಮೋದಿ ಅವರು ಭೋಜನ ಸ್ವೀಕರಿಸಿದರು.#KashiVishwanathDham #DivyaKashiBhavyaKashi pic.twitter.com/dXTS1tKLtN — BJP Karnataka (@BJP4Karnataka) December 13, 2021