ನವದೆಹಲಿ : ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ಭರ್ಜರಿ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅವರು ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿದ್ದಾರೆ. ಇವರು ದೇಶದ 14ನೇ ಉಪರಾಷ್ಟ್ರಪತಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ಉಪರಾಷ್ಟ್ರಪತಿ ಚುನಾವಣೆಗೆ ಇಂದು ಬೆಳಗ್ಗೆ 10 ಗಂಟೆಗೆ ಮತದಾನ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಚುನಾವಣೆಯಲ್ಲಿ ಒಟ್ಟು 725 ಸಂಸದರು ಮತ ಚಲಾಯಿಸಿದ್ದು, 50ಕ್ಕೂ ಹೆಚ್ಚು ಅಭ್ಯರ್ಥಿಗಳು ಮತದಾನ ಮಾಡಿಲ್ಲ. 


50ಕ್ಕೂ ಹೆಚ್ಚು ಸಂಸದರು ಮತದಾನ ಮಾಡಿಲ್ಲ


ಉಪರಾಷ್ಟ್ರಪತಿ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಸುಮಾರು ಶೇ.93 ರಷ್ಟು ಸಂಸದರು ಮತ ಚಲಾಯಿಸಿದ್ದಾರೆ, 50 ಕ್ಕೂ ಹೆಚ್ಚು ಸಂಸದರು ತಮ್ಮ ಮತ ಚಲಾಯಿಸಿಲ್ಲ. 


ಇದನ್ನೂ ಓದಿ : Vice-Presidential Poll : ಮತದಾನ ಮುಕ್ತಾಯ, ನಿಮಗೆ ಗೊತ್ತಿರಲಿ ಈ 10 ಸಂಗತಿಗಳು!


ಒಟ್ಟು 725 ಸಂಸದರು ಮತದಾನ 


ಸಂಜೆ 5 ಗಂಟೆಗೆ ಮತದಾನ ಮುಗಿಯುವ ವೇಳೆಗೆ ಒಟ್ಟು 780 ಸಂಸದರ ಪೈಕಿ 725 ಮಂದಿ ಮತ ಚಲಾಯಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾನ ಮುಗಿದ ಬಳಿಕ ಮತ ಎಣಿಕೆ ಕಾರ್ಯ ಆರಂಭವಾಯಿತು. ಸಂಸತ್ತಿನ ಎರಡು ಸದನಗಳ ಒಟ್ಟು ಸದಸ್ಯರ ಸಂಖ್ಯೆ 788 ಆಗಿದ್ದು, ಮೇಲ್ಮನೆಯ ಎಂಟು ಸ್ಥಾನಗಳು ಪ್ರಸ್ತುತ ಖಾಲಿ ಇವೆ. ಹೀಗಾಗಿ, 780 ಸಂಸದರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರು.


ಮತದಾನದಿಂದ ದೂರ ಉಳಿದ ಟಿಎಂಸಿ


ತೃಣಮೂಲ ಕಾಂಗ್ರೆಸ್ ಮೊದಲೇ ಮತದಾನದಿಂದ ದೂರ ಉಳಿಯುವುದಾಗಿ ಘೋಷಿಸಿತ್ತು. ಉಭಯ ಸದನಗಳಲ್ಲಿ ಒಟ್ಟು 39 ಸಂಸದರನ್ನು ಹೊಂದಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಭ್ಯರ್ಥಿ ಮತ್ತು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧಂಖರ್ (71) ಅವರು ವಿರೋಧ ಪಕ್ಷದ ಜಂಟಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ (80) ಅವರನ್ನು ಎದುರಿಸಿದರು.


ಇದನ್ನೂ ಓದಿ : Vice President Election 2022 : ಉಪರಾಷ್ಟ್ರಪತಿ ಚುನಾವಣೆ 2022 : ಯಾವ ಪಕ್ಷ, ಯಾರ ಕಡೆ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.