Video: Gir National Parkನ ಗಾರ್ಡ್ ಸಿಂಹದಿಂದ ಸಹಾಯ ಬೇಡಿದಾಗ...
ವಿಶ್ವ ವನ್ಯಜೀವಿ ವಾರ ಇನ್ನೂ ನಡೆಯುತ್ತಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಬಹಳ ಸುಂದರವಾದ ವೀಡಿಯೊ ಹೊರಬಂದಿದೆ. ಈ ವಿಡಿಯೋವನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಹಂಚಿಕೊಂಡಿದ್ದಾರೆ.
ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಇಂತಹ ವೀಡಿಯೊಗಳನ್ನು ಹಲವು ಬಾರಿ ನೋಡಲಾಗಿದ್ದು ಒಮ್ಮೆ ಅವುಗಳನ್ನು ನೋಡುವುದರಿಂದ ಮನಸ್ಸೇ ತುಂಬುವುದಿಲ್ಲ. ಚಿಕ್ಕ ಮಕ್ಕಳು ಮತ್ತು ಪ್ರಾಣಿಗಳ ವೀಡಿಯೊಗಳಲ್ಲಿ ಇದು ವಿಶೇಷವಾಗಿ ಕಂಡುಬರುತ್ತದೆ. ಅನೇಕ ಬಾರಿ ಅವರ ಅತ್ಯಂತ ಮುದ್ದಾದ ಚಲನೆಗಳು ಕ್ಯಾಮೆರಾದಲ್ಲಿ ಸೆರೆಹಿಡಿದು ಹೃದಯದಲ್ಲಿ ನೆಲೆಗೊಳ್ಳುತ್ತವೆ. ಈ ವೈರಲ್ ವೀಡಿಯೊ (Viral Video)ದಲ್ಲಿ ಇದೇ ರೀತಿಯ ಘಟನೆಯೊಂದನ್ನು ಸೆರೆಹಿಡಿಯಲಾಗಿದೆ.
ಗುಜರಾತಿನಲ್ಲಿ ಸಿಂಹದಿಂದ ಸಹಾಯ ಕೋರಿದ ಗಾರ್ಡ್:
ವಿಶ್ವ ವನ್ಯಜೀವಿ ವಾರ ಇನ್ನೂ ನಡೆಯುತ್ತಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಗಿರ್ ರಾಷ್ಟ್ರೀಯ ಉದ್ಯಾನವನ (Gir National Park)ದಿಂದ ಬಹಳ ಸುಂದರವಾದ ವೀಡಿಯೊ ಹೊರಬಂದಿದೆ. ಈ ವೀಡಿಯೊದಲ್ಲಿ ಗಿರ್ ಕಾಡಿನ ಕಾವಲುಗಾರ ಮಹೇಶ್ ಸೊಂಡರ್ವಾ ತನ್ನ ಕರ್ತವ್ಯ ಮುಗಿದ ನಂತರ ಮನೆಗೆ ಹೋಗುತ್ತಿರುವುದನ್ನು ಕಾಣಬಹುದು. ಆಗ ಅವರು ಕಾಡಿನ ಸಿಂಹವು ತಮ್ಮ ದಾರಿಯನ್ನು ತಡೆಯುತ್ತ ಕುಳಿತಿರುವುದನ್ನು ನೋಡುತ್ತಾರೆ. ಕಾಡಿನ ರಾಜನಿಗೆ ಹೆದರುವ ಬದಲು ದಿನವಿಡೀ ಸಿಂಹ ಇತ್ಯಾದಿಗಳೊಂದಿಗೆ ವಾಸಿಸುವ ಮಹೇಶ್ ಸಹಾಯ ಕೇಳುತ್ತಾರೆ. ನಾನು ದಿನವಿಡೀ ನಿಮ್ಮ ಸೇವೆಯಲ್ಲಿಯೇ ನಿರತನಾಗಿರುತ್ತೇನೆ. ಈಗ ನನಗೆ ಮನೆಗೆ ಹೋಗಲು ದಾರಿ ಮಾಡಿಕೊಡುವಂತೆ ಎಂದು ಅವರು ತಮ್ಮ ಸ್ಥಳೀಯ ಭಾಷೆಯಲ್ಲಿ ಸಿಂಹಕ್ಕೆ ಮನವಿ ಮಾಡುತ್ತಾರೆ.
Watch Video: ದೆಹಲಿ ಮೃಗಾಲಯದಲ್ಲಿ ಸಿಂಹ ಇದ್ದ ಸ್ಥಳಕ್ಕೆ ಜಿಗಿದು ಕುಳಿತ ಯುವಕ! ಮುಂದೆ ಆಗಿದ್ದೇನು?
ಪ್ರಕಾಶ್ ಜಾವಡೇಕರ್ ಕೂಡ ವಿಡಿಯೋ ಶೇರ್ ಮಾಡಿದ್ದಾರೆ:
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ (Prakash Javadekar) ಕೂಡ ಸಿಂಹದ ಈ ವಿಶೇಷ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
VIDEO: ರಸ್ತೆ ಮಧ್ಯೆ ಕುಳಿತಿದ್ದ ಸಿಂಹಗಳು, ಹಾರ್ನ್ ಮಾಡಲು ಧೈರ್ಯವಿಲ್ಲದ ವಾಹನ ಸವಾರರು! ಮುಂದೆ...
ನೀವೂ ಸಹ ತಪ್ಪದೇ ಈ ವಿಡಿಯೋವನ್ನು ಶೇರ್ ಮಾಡಿ