close

News WrapGet Handpicked Stories from our editors directly to your mailbox

Watch Video: ದೆಹಲಿ ಮೃಗಾಲಯದಲ್ಲಿ ಸಿಂಹ ಇದ್ದ ಸ್ಥಳಕ್ಕೆ ಜಿಗಿದು ಕುಳಿತ ಯುವಕ! ಮುಂದೆ ಆಗಿದ್ದೇನು?

ಮೃಗಾಲಯ ವೀಕ್ಷಣೆಗೆಂದು ಬಂದಿದ್ದ ಯುವಕನೋರ್ವ ಸಿಂಹ ಇದ್ದ ಸ್ಥಳಕ್ಕೆ ಇದ್ದಕ್ಕಿದ್ದಂತೆ ಹಾರಿದ್ದಲ್ಲದೆ, ಸಿಂಹದ ಮುಂದೆ ಕುಳಿತಿದ್ದ. ಕೂಡಲೇ ಅಲ್ಲಿದ್ದವರು ಆತನ ಬಗ್ಗೆ ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆತನನನ್ನು ರಕ್ಷಿಸಿದ್ದಾರೆ.

Updated: Oct 17, 2019 , 05:06 PM IST
Watch Video: ದೆಹಲಿ ಮೃಗಾಲಯದಲ್ಲಿ ಸಿಂಹ ಇದ್ದ ಸ್ಥಳಕ್ಕೆ ಜಿಗಿದು ಕುಳಿತ ಯುವಕ! ಮುಂದೆ ಆಗಿದ್ದೇನು?

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಮೃಗಾಲಯದಲ್ಲಿ 21 ವರ್ಷದ ಯುವಕನೋರ್ವ ಸಿಂಹ ಇದ್ದ ಸ್ಥಳಕ್ಕೆ ಜಿಗಿದು, ಸಿಂಹದ ಮುಂದೆಯೇ ಕುಳಿತ ಆತಂಕಕಾರಿ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. 

ಮೃಗಾಲಯ ವೀಕ್ಷಣೆಗೆಂದು ಬಂದಿದ್ದ ಯುವಕನೋರ್ವ ಸಿಂಹ ಇದ್ದ ಸ್ಥಳಕ್ಕೆ ಇದ್ದಕ್ಕಿದ್ದಂತೆ ಹಾರಿದ್ದಲ್ಲದೆ, ಸಿಂಹದ ಮುಂದೆ ಕುಳಿತಿದ್ದ. ಕೂಡಲೇ ಅಲ್ಲಿದ್ದವರು ಆತನ ಬಗ್ಗೆ ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆತನನನ್ನು ರಕ್ಷಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಬರುವುದು ಒಂದು ಕ್ಷಣ ತಡವಾಗಿದ್ದರೂ ಸಹ ಆತ ಸಿಂಹ ಆಹಾರವಾಗುತ್ತಿದ್ದ ಎನ್ನಲಾಗಿದೆ. ಬಳಿಕ ಆತನನ್ನು ಮೃಗಾಲಯದ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ ಆ ಯುವಕನನ್ನು ಮಾನಸಿಕ ಅಸ್ವಸ್ಥ ಎನ್ನಲಾಗಿದೆ. 

ಮೃಗಾಲಯಕ್ಕೆ ತೆರಳಿದ್ದ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ಸಂಪೂರ್ಣ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.