One Leg Dancer Rekha - ಧನಬಾದ್‌ನ (Dhanbad) ಬಲಿಯಾಪುರ್  ನಿವಾಸಿಯಾಗಿರುವ  19 ವರ್ಷದ ರೇಖಾ ಮಿಶ್ರಾ (Rekha Mishra) ಇಂದು ತನ್ನಂತಹ ಅನೇಕ ಯುವತಿಯರಿಗೆ ಉದಾಹರಣೆಯಾಗಿದ್ದಾರೆ. ಏನಾದರು ಮಾಡಬೇಕೆಂಬ ಛಲ ಮತ್ತು ಉತ್ಸಾಹದಿಂದ ಇಡೀ  ಸಮಾಜಕ್ಕೆ ಒಂದು ಸಂದೇಶವನ್ನು ನೀಡಿದ್ದಾಳೆ.  ಸನ್ನಿವೇಶಗಳು ಏನೇ ಇರಲಿ, ಮನಸ್ಸಿನಲ್ಲಿ ಗೆಲ್ಲಲು ನಿರ್ಧರಿಸಿ, ನಿರ್ಧಿಷ್ಟ ಗುರಿಯತ್ತ ಸಾಗಿದರೆ, ಆಗ ಆ ಗುರಿಯನ್ನು ಖಂಡಿತವಾಗಿ ಸಾಧಿಸಬಹುದು. ಅಂತಹದ್ದೇ ಒಂದು ಆಲೋಚನೆ ರೇಖಾ ಮನದಲ್ಲೂ ಮೂಡಿರಬಹುದು. ಇದೇ  ಛಲದಿಂದ ಅಪಘಾತದಲ್ಲಿ ಕಾಲು ಕಳೆದುಕೊಂಡ ಮೇಲೂ ಡ್ಯಾನ್ಸ್ ಸ್ಟೇಜ್ ನಿಂದ ಹಿಂದೆ ಸರಿಯದೆ ಇಂದು ಯೂಟ್ಯೂಬ್ ನಲ್ಲಿ ‘One Leg Dancer’ ಎಂದೇ ಖ್ಯಾತಿ ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಬಿಸಿ ಮಾಡುತ್ತಲೇ ಚುಯಿಂಗ್ ಗಮ್ ಆಗಿ ಮಾರ್ಪಟ್ಟ ಹಾಲು


Trending News - 2014ರಲ್ಲಿ ರಸ್ತೆ ಅಪಘಾತದಲ್ಲಿ ರೇಖಾ ಕಾಲು ಕಳೆದುಕೊಂಡಿದ್ದರು. ಈ ಘಟನೆಯು ರೇಖಾ ಮೇಲೆ ಬಹಳ ಆಳವಾದ ಪ್ರಭಾವವನ್ನು ಬೀರಿತು, ಅವಳು ಮಾನಸಿಕವಾಗಿ ಸಂಪೂರ್ಣ ಕುಸಿದುಹೋಗಿದ್ದಳು,  ಆದರೆ ಅವಳು ತನ್ನ ಆತ್ಮಸ್ಥೈರ್ಯವನ್ನು ಮಾತ್ರ ಬಿಡಲಿಲ್ಲ. ರೇಖಾ ಅವರ ತಂದೆ ವೃತ್ತಿಯಲ್ಲಿ ದಿನಗೂಲಿ ಕಾರ್ಮಿಕರಾಗಿದ್ದಾರೆ. ಇಂದು ರೇಖಾ ತನ್ನ ಕೌಶಲ್ಯವನ್ನು ಹೆಚ್ಚಿಸಿಕೊಂಡು ಯಶಸ್ಸಿನತ್ತ ಹಾರಲು ಬಯಸಿದ್ದು, ಇದಕ್ಕಾಗಿ ಅವಳು ಸರ್ಕಾರದಿಂದ ಸಹಕಾರವನ್ನು ಕೋರುತ್ತಿದ್ದಾರೆ. 


ಇದನ್ನೂ ಓದಿ-ಒಂದಲ್ಲ, ಎರಡಲ್ಲ... ಒಂದೇ ದಿನ ಮೂರು ಮದುವೆಯಾಗಿದ್ದಾನೆ ಈ ಭೂಪ..!


Viral News - ತನ್ನ ತಂದೆ ಯಾವಾಗಲೂ ಕಾರಿನ ಕನಸು ಕಾಣುತ್ತಾರೆ ಮತ್ತು ಈ ಕನಸನ್ನು ನನಸಾಗಿಸಲು ನಾನು ಬಯಸುತ್ತೇನೆ ಎಂದು ರೇಖಾ ಸಂದರ್ಶನವೊಂದರಲ್ಲಿ ಹೇಳಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲೂ (Social Media) ರೇಖಾಗೆ ಅಪಾರ ಮೆಚ್ಚುಗೆ ದೊರೆತಿದೆ. ಯೂಟ್ಯೂಬ್‌ನಲ್ಲಿ ರೇಖಾ ಅವರ ವೀಡಿಯೊವನ್ನು ಜನರು ತುಂಬಾ ಇಷ್ಟಪಡುತ್ತಾರೆ. ರೇಖಾ ಅವರ ಈ ಡ್ಯಾನ್ಸ್ ವೀಡಿಯೊಗಳಲ್ಲಿ, ಜನರು ಅವಳ ಧೈರ್ಯ ಮತ್ತು ಪ್ರತಿಭೆಯನ್ನು ಶ್ಲಾಘಿಸುತ್ತಾರೆ ಮತ್ತು ಅವಳನ್ನು ಮುಂದುವರೆಯಲು ಪ್ರೇರೇಪಿಸುತ್ತಾರೆ.
Rishab Shetty: ನಟ ರಿಷಬ್ ಶೆಟ್ಟಿ ಮನೆಗೆ ಕಾಲಿಟ್ಟ ಮುದ್ದಾದ ಪುಟಾಣಿ 'ಲಕ್ಷ್ಮೀ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.