Viral Video: ಬಿಸಿ ಮಾಡುತ್ತಲೇ ಚುಯಿಂಗ್ ಗಮ್ ಆಗಿ ಮಾರ್ಪಟ್ಟ ಹಾಲು

Boiled Milk Turned Into Chewing Gum - ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ (Bhopal) ನಿಂದ ವಿಚಿತ್ರ ವಿಡಿಯೋವೊಂದು ವೈರಲ್ ಆಗುತ್ತಿದೆ. ಮಹಿಳೆಯೊಬ್ಬರು ಹಾಲು ಕುದಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತಿದೆ, ಆದರೆ, ವಿಚಿತ್ರ ಎಂದರೆ, ಹಾಲು ಕುದಿಸಿದ ತಕ್ಷಣ ಚೂಯಿಂಗ್ ಗಮ್ ಆಗಿ ಮಾರ್ಪಟ್ಟಿದೆ.

Written by - Nitin Tabib | Last Updated : Mar 5, 2022, 12:50 PM IST
  • ಕಲಬೆರಕೆಯ ವಿಚಿತ್ರ ಪ್ರಕರಣ
  • ಹಾಲು ಕುದಿಯುತ್ತಿದ್ದಂತೆಯೇ ಒಡೆದು ರಬ್ಬರ್ ಆಗುತ್ತದೆ
  • ಚೂಯಿಂಗ್ ಗಮ್ ಅನ್ನು ಹೋಲುವ ಬಿಸಿ ಹಾಲು
Viral Video: ಬಿಸಿ ಮಾಡುತ್ತಲೇ ಚುಯಿಂಗ್ ಗಮ್ ಆಗಿ ಮಾರ್ಪಟ್ಟ ಹಾಲು   title=
Viral Video (Video Grab)

Boiled Milk Turned Into Chewing Gum - ಕುದಿಸಿದ ಹಾಲು ಚ್ಯೂಯಿಂಗ್ ಗಮ್‌ನಂತೆ (Chewing Gum) ಕಾಣುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮಹಿಳೆಯು ಗ್ಯಾಸ್ ಮೇಲೆ ಇರಿಸಲಾದ ಪಾತ್ರೆಯನ್ನು ತೆಗೆದು ಅದರಿಂದ ಹೆಪ್ಪುಗಟ್ಟಿದ ಹಾಲನ್ನು ಹೊರತೆಗೆದಾಗ, ಅದು ರಬ್ಬರ್‌ನಂತೆ ಹಿಗ್ಗುತ್ತಿದೆ ಮತ್ತು ಚೂಯಿಂಗ್ ಗಮ್‌ನಂತೆ ಕಾಣುತ್ತದೆ.

ಪಾತ್ರೆಯಲ್ಲಿಟ್ಟ ಹಾಲು ಒಡೆದಾಗ ಬಹಿರಂಗಗೊಂಡ ಸತ್ಯ
ಈ ವೀಡಿಯೊ (Viral Video) ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಹೊರಹೊಮ್ಮಿದೆ. ಭೋಪಾಲ್‌ನ ಅಶೋಕ ಗಾರ್ಡನ್ ಪ್ರದೇಶದ ಮಹಿಳೆಯೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಲು ಕಾದ ಬಳಿಕ  ಒಡೆದಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಹಾಲು ಒಡೆದ ನಂತರವೂ, ಹೆಚ್ಚಿನ ಸಂದರ್ಭಗಳಲ್ಲಿ, ಅದನ್ನು ಮಲಾಯಿ ರೀತಿಯಲ್ಲಿ ಬಳಸಿ ತಿನ್ನಬಹುದು. ಇದನ್ನೇ ಗಮನದಲ್ಲಿಟ್ಟುಕೊಂಡು ಮಹಿಳೆ ಪಾತ್ರೆಯಲ್ಲಿ ಕೈ ಹಾಕಿ ಒಡೆದ ಹಾಲನ್ನು ತೆಗೆಯಲು ಯತ್ನಿಸಿದ್ದಾಳೆ.

ರಬ್ಬರ್ ರೀತಿ ಹಿಗ್ಗಿದ ಒಡೆದ ಹಾಲು
ಪಾತ್ರೆಯಿಂದ ಒಡೆದ ಹಾಲನ್ನು ಹೊರೆ ತೆಗೆದ ಮಹಿಳೆಗೆ ಆಶ್ಚರ್ಯ ಕಾದಿತ್ತು. ಒಡೆದ ಹಾಲು ರಬ್ಬರ್‌ನಂತೆ ಮಾರ್ಪಟ್ಟು ಚ್ಯೂಯಿಂಗ್ ಗಮ್‌ನಂತೆ ಕಾಣತೊಡಗಿತು. ಮಹಿಳೆಯು ಈ ಹಾಲನ್ನು ರಬ್ಬರ್‌ನಂತೆ ಹಿಗ್ಗಿಸುತ್ತಿರುವುದು ನೀವು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ-Viral Video : ಮದುವೆ ದಿಬ್ಬಣ ತಡವಾಗಿ ಬಂದಿದ್ದಕ್ಕೆ ಸಿಟ್ಟಾದ ವಧು, ವೇದಿಕೆಯಲ್ಲಿಯೇ ರಂಪಾಟ

ಈ ಹಾಲನ್ನು ಡೈರಿಯಿಂದ ಖರೀದಿಸಲಾಗಿದೆ
ಮಹಿಳೆ ಪ್ರದೇಶದಲ್ಲಿರುವ ಡೈರಿಯಿಂದ ಹಾಲನ್ನು ಖರೀದಿಸುತ್ತಿದ್ದರು. ಅದನ್ನು ಸಡಿಲವಾದ ಪಾಲಿಥಿನ್‌ನಲ್ಲಿ ಮಾರಾಟ ಮಾದಲಾಗುತ್ತಿವೆ. ಅವಳು ಅದೇ ಡೈರಿಯ ಹಾಲನ್ನು ಬಹಳ ದಿನಗಳಿಂದ ಬಳಸುತ್ತಿದ್ದಳು. ಹಾಲು ಒಡೆದ ನಂತರ ಈ ರೀತಿ ಪರಿಶೀಲಿಸಿದ್ದು ಅವರ ಲಕ್ ಎಂದೇ ಹೇಳಬಹುದು.

ಇದನ್ನೂ ಓದಿ-Viral video : ಮದುವೆ ಮಂಟಪದದಲ್ಲಿಯೇ ಹೊಡೆದಾಡಿಕೊಂಡ ವಧು ವರ, ನೆಂಟರಿಷ್ಟರು ಸುಸ್ತೋ ಸುಸ್ತು

ಆಹಾರ ಇಲಾಖೆ ತಂಡ ಡೈರಿಯಿಂದ ಸ್ಯಾಂಪಲ್ ವಶಪಡಿಸಿಕೊಂಡಿದೆ
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತದ ತಂಡ ಸಕ್ರಿಯವಾಗಿದೆ. ಆಹಾರ ಇಲಾಖೆಯ ತಂಡವು ಡೈರಿಯಿಂದ ಹಾಲಿನ ಮಾದರಿಗಳನ್ನು ವಶಪಡಿಸಿಕೊಂಡಿದೆ. ಈ ಹಾಲನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಆಹಾರ ಇಲಾಖೆ ಇದೀಗ ಮುಂದಾಗಿದೆ.

ಇದನ್ನೂ ಓದಿ-Viral video : ಕೊಕ್ಕಿಗೆಟಕದ ಬಾಟಲಿ ನೀರನ್ನು ಜಾಣತನದಿಂದ ಕುಡಿಯುತ್ತಿರುವ ಹಕ್ಕಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News