ನವದೆಹಲಿ: ಹಿಂದೂ ವಿವಾಹ(Hindu Wedding)ಗಳಲ್ಲಿ ಅನೇಕ ಸಂಪ್ರದಾಯ ಮತ್ತು ಆಚರಣೆಗಳಿವೆ. ಹಿಂದಿನಿಂದ ಆಚರಿಸಿಕೊಂಡು ಬಂದ ಕೆಲವು ಸಂಪ್ರದಾಯಗಳನ್ನು ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ಮದುವೆಯಾದ ಬಳಿಕ ವಧು, ವರನ ಪಾದಗಳನ್ನು ಮಿಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಾಳೆ. ತಾನು ಮದುವೆಯಾಗುವ ಗಂಡನ ಆಶೀರ್ವಾದ ತನ್ನ ಮೇಲೆ ಯಾವಾಗಲೂ ಇರಲೆಂದು ಈ ಆಚರಣೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆದಾಗ್ಯೂ ಈ ವಿಶಿಷ್ಟ ಆಚರಣೆಗೆ ಅನೇಕರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಮಹಿಳೆ ಮಾತ್ರ ಏಕೆ ತನ್ನ ಪತಿಯ ಮುಂದೆ ತಲೆಬಾಗಬೇಕೆಂದು ಪ್ರಶ್ನಿಸುತ್ತಾರೆ.


COMMERCIAL BREAK
SCROLL TO CONTINUE READING

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಹಳೆಯ ಸಂಪ್ರದಾಯಗಳು, ಆಚರಣೆಗಳು ಮೂಲೆಗುಂಪಾಗುತ್ತಿವೆ. ಸಮಯ ಬದಲಾಗುತ್ತಿದ್ದಂತೆ ಅನೇಕರು ತಮ್ಮದೇ ಶೈಲಿಯನ್ನು ಪಾಲಿಸುತ್ತಿದ್ದು, ಹಳೆಯ ಆಚರಣೆಗೆ ಗುಡ್ ಬೈ ಹೇಳುತ್ತಿದ್ದಾರೆ. ಮದುವೆ(Marriage)ಯಾಗುವ ನವದಂಪತಿ ಕೂಡ ಹಳೆಯ ಸಂಪ್ರದಾಯಗಳಿಗೆ ತೀಲಾಂಜಲಿ ಇಡುತ್ತಿದ್ದು, ತಮ್ಮದೇ ವಿನೂತನ ಸಂಪ್ರದಾಯಗಳನ್ನು ಹುಟ್ಟುಹಾಕುತ್ತಿದ್ದಾರೆ.


ಇದನ್ನೂ ಓದಿ: ಹೊಸ ಬಣ್ಣದಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ ವಿವೋ : ಜನರಿಂದ ಭಾರೀ ಮೆಚ್ಚುಗೆ    


ವಿವಾಹವಾದ ಬಳಿಕ ನವದಂಪತಿ ಇಬ್ಬರೂ ಪರಸ್ಪರರ ಪಾದಗಳನ್ನು ಮುಟ್ಟಿ ಸಮಾನ ವಿವಾಹ ಮತ್ತು ಪರಸ್ಪರ ಗೌರವ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಇತ್ತೀಚಿನ ಒಂದು ವಿಡಿಯೋದಲ್ಲಿ ವಧು-ವರರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ವಿವಾಹದ ಬಳಿಕ ವಧು ವರನ ಪಾದಗಳನ್ನು ಮುಟ್ಟಿ ಆತನಿಂದ ಆಶೀರ್ವಾದ ಪಡೆದುಕೊಂಡಿದ್ದಾಳೆ.



ನಗುನಗುತ್ತಲೇ ಪತಿಯ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದ ಪತ್ನಿಯನ್ನು ಆತ ತಡೆಯುತ್ತಾನೆ. ಕೂಡಲೇ ಆತ ಕೂಡ ಪತ್ನಿಯ ಪಾದಗಳನ್ನು ಮುಟ್ಟಲು ಪ್ರಯತ್ನಿಸುತ್ತಾನೆ. ಆದರೆ ಪತಿ ಎಲ್ಲಾದರೂ ತನ್ನ ಪಾದಗಳನ್ನು ಮುಟ್ಟುವುದುಂಟಾ? ಎಂಬಂತೆ ಪತ್ನಿ ಹಿಂದಕ್ಕೆ ಜಿಗಿದು ನಿರಾಕರಿಸುತ್ತಾಳೆ. ಗಂಡ ತನ್ನ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದ ಕೂಡಲೇ ಹೆಂಡತಿ ಆಶ್ಚರ್ಯದಿಂದ ಹಿಂದಕ್ಕೆ ಜಿಗಿದಿರುವ ಈ ವಿಡಿಯೋ(Viral Video)ವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾಗಿದೆ.


ಇದನ್ನೂ ಓದಿ: Driving License: ಮನೆಯಲ್ಲಿ ಕುಳಿತು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ    


ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ‘ಭವಿಷ್ಯದ ಜೀವನಕ್ಕೆ ನೀವಿಬ್ಬರೂ ಮುದ್ದಾಗಿ ಕಾಣುತ್ತಿದ್ದೀರಿ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಪತ್ನಿಯ ಪಾದ ಮುಟ್ಟಲು ಪ್ರಯತ್ನಿಸಿದ ಪತಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಂಪತಿಗಳು ಪರಸ್ಪರ ಗೌರವ ತೋರಿಸಿದ್ದಕ್ಕಾಗಿ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.