Viral Video: ದೈತ್ಯ ಹೆಬ್ಬಾವು ಜಿಂಕೆಯನ್ನು ಜೀವಂತವಾಗಿ ನುಂಗುತ್ತಿರುವ ಆಘಾತಕಾರಿ ವಿಡಿಯೋ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬುಧವಾರ ಬೆಳಿಗ್ಗೆ ಕಿಶಾಂಗಂಜ್ ಅರಣ್ಯ ಪ್ರದೇಶದ ಲಾಲಾಪುರ ತೋಟದಲ್ಲಿ ದೈತ್ಯ ಹೆಬ್ಬಾವು ಜಿಂಕೆಯನ್ನು ಭೇಟೆಯಾಡಿದ ಸಂದರ್ಭದಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. 34 ಸೆಕೆಂಡುಗಳ ವೀಡಿಯೋದಲ್ಲಿ 8 ಅಡಿ ಹಾವು ಇಡೀ ಜಿಂಕೆಯನ್ನು ಬಾಯಲ್ಲಿ ಹಿಡಿದುಕೊಂಡು ನಿಧಾನವಾಗಿ ನುಂಗುತ್ತಿರುವುದನ್ನು ನೀವು ನೋಡಬಹುದು.


COMMERCIAL BREAK
SCROLL TO CONTINUE READING

ಹೆಬ್ಬಾವು ಜಿಂಕೆಯನ್ನು ಸಂಪೂರ್ಣವಾಗಿ ನುಂಗಿದ ತಕ್ಷಣ (Giant Python swallows deer), ಅದು ಬೇಗನೆ ಹೋಯಿತು ಎಂದು ಘಟನೆಯನ್ನು ಪ್ರತ್ಯಕ್ಷವಾಗಿ ಕಂಡಿರುವ ಗ್ರಾಮಸ್ಥರು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ, ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಇಲ್ಲಿ ಹಾಜರಿದ್ದರು, ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.


ಜಿಂಕೆಯನ್ನು ನುಂಗುತ್ತಿರುವ ದೈತ್ಯ ಹೆಬ್ಬಾವಿನ ಈ ವಿಡಿಯೋವನ್ನು ನೀವೂ ನೋಡಿ...


Viral Video- ಹಿಡಿಯಲು ಬಂದವನ ಗುಂಡಿಗೆಯನ್ನೇ ನಡುಗಿಸಿದ ಕಿಂಗ್ ಕೋಬ್ರಾ! ಹೃದಯ ಸಂಬಂಧಿತ ಕಾಯಿಲೆಯಿರುವವರು ಇದನ್ನು ನೋಡಬೇಡಿ


ವಾಸ್ತವವಾಗಿ, ಕಿಶನ್ ಗಂಜ್ ಬಳಿ ದಟ್ಟವಾದ ಅರಣ್ಯವಿದ್ದು, ಕಾಡು ಪ್ರಾಣಿಗಳು ಇಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಜಿಂಕೆ (Deer), ಹೆಬ್ಬಾವು (Python), ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳು ಬರಾನ್ ಜಿಲ್ಲೆಯ ಈ ದಟ್ಟ ಅರಣ್ಯದಲ್ಲಿ ವಾಸಿಸುತ್ತವೆ.


ಇದನ್ನೂ ಓದಿ- Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ...


ಹಾವುಗಳು ಮೊಲ ಅಥವಾ ಇಲಿಗಳಂತಹ ಸಣ್ಣ ಪ್ರಾಣಿಗಳನ್ನು ನುಂಗುವ ವೀಡಿಯೊಗಳನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಹೆಬ್ಬಾವು ಇಡೀ ಜಿಂಕೆಯನ್ನು ನುಂಗುತ್ತಿರುವ ಈ ವಿಡಿಯೋ ಅಪರೂಪದ್ದಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್  (Viral Video) ಆಗುತ್ತಿದೆ. ಕೆಲ ನೆಟಿಜನ್ ಗಳು ಹಾವಿನ ಜೀರ್ಣ ಸಾಮರ್ಥ್ಯದ ಬಗ್ಗೆ ಆಶ್ಚರ್ಯಪಡುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.