Crocodile Attacked Leopard: ಮೊಸಳೆಯನ್ನು ನೀರಿನ 'ಕಾರ್ಯನಿರ್ವಾಹಕ' ಎಂದು ಪರಿಗಣಿಸಲಾಗಿದೆ. ಈ ಅಪಾಯಕಾರಿ ಜೀವಿ ನೀರಿನಲ್ಲಿ ಯಾರನ್ನಾದರೂ ಮುಳುಗಿಸಬಹುದು. ನೀರಿನಿಂದ ಹೊರಬಂದ ನಂತರವೂ ಮೊಸಳೆ ಬೇಟೆಯಾಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂಬುದನ್ನು ನೀವು ಅನೇಕ ಬಾರಿ ನೋಡಿರಬಹುದು. ಆದಾಗ್ಯೂ, ನೀರಿನಲ್ಲಿ ಅದರ ಸಾಮರ್ಥ್ಯವು ಬಹುಪಟ್ಟು ಹೆಚ್ಚಾಗುತ್ತದೆ. 


COMMERCIAL BREAK
SCROLL TO CONTINUE READING

ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್ ಆಗುವ ಹಲವು ವಿಡಿಯೋಗಳಲ್ಲಿ ಜಲಚರ ಪ್ರಾಣಿಗಳು ಕಾಡು ಪ್ರಾಣಿಗಳೊಂದಿಗೆ ಕಾದಾಡುವುದನ್ನು ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ. ಇಂತಹದ್ದೇ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ. 


ಇದನ್ನೂ ಓದಿ- Thirsty Snake Video: ಅಂಗೈಯಲ್ಲಿ ನೀರಿಡಿದು ಹಾವಿನ ಬಾಯಾರಿಕೆ ನೀಗಿಸಿದ ವ್ಯಕ್ತಿ! ವಿಡಿಯೋ ವೈರಲ್


ಈ ವೈರಲ್ ವಿಡಿಯೋದಲ್ಲಿ (Viral Video) ಬಾಯಾರಿದ ಚಿರತೆಯೊಂದು ನೀರು ಕುಡಿಯಲು ನದಿಯ ಬಳಿ ಬಂದಿದೆ. ನದಿಯ ಬಳಿ ಬಂದು ನೀರು ಕುಡಿಯುತ್ತಿದ್ದ ಚಿರತೆ ಬಳಿ ನಿಧಾನವಾಗಿ ಬಂದ ಮೊಸಳೆ ಹೊಂಚು ಹಾಕಿ ಕ್ಷಣಾರ್ಧದಲ್ಲಿ ಚಿರತೆಯ ಕತ್ತಿಗೆ ಬಾಯಿ ಹಾಕಿದೆ. ಚಿರತೆ ಹಿಂದೆ ಸರಿಯಲೂ ಎಡೆಮಾಡಿಕೊಡದ ಮೊಸಳೆ ವೇಗವಾಗಿ ಅದನ್ನು ನೀರಿನೊಳಗೆ ಎಳೆದುಕೊಂಡಿದೆ. 


ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿ...




ಇದನ್ನೂ ಓದಿ- Viral Video : ಎಷ್ಟು ದೂರ ಸರಿದರೂ ಮತ್ತೆ ಮತ್ತೆ ಸಿಂಹಕ್ಕೆ ಮುತ್ತಿಕ್ಕುತ್ತಿರುವ ಆಮೆ



ಈ ವೀಡಿಯೊವನ್ನು Instagram ನಲ್ಲಿ soovashpariyar_4u ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.