ದಾವಣಗೆರೆ: ಹಲವು ಬಾರಿ ನಾವು ಕಷ್ಟದಲ್ಲಿದ್ದಾಗ ದೇವರು ಯಾವುದಾದರೂ ರೂಪದಲ್ಲಿ ಬಂದು ನಮ್ಮನ್ನು ಕಾಪಾಡುತ್ತಾರೆ ಎಂದು ನಂಬುತ್ತೇವೆ. ಇನ್ನೂ ಹಲವು ಸಂದರ್ಭಗಳಲ್ಲಿ ನಡೆಯಬೇಕಿದ್ದ ದುರ್ಘಟನೆ ಅಥವಾ ಭಾರೀ ಅನಾಹುತ ತಪ್ಪಿದಾಗ, ಇಲ್ಲವೇ ಯಾರಾದರೂ ವ್ಯಕ್ತಿಯಿಂದ ನಾವು ಅನಾಹುತದಿಂದ ಪಾರಾದಾಗ ಅಯ್ಯೋ..! ಆಪತ್ಬಾಂಧವನಂತೆ ಬಂದು ಕಾಪಾಡಿದ ಎಂದು ನಿಟ್ಟುಸಿರು ಬಿಡುತ್ತೇವೆ. ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ಅಂತಹದೇ ಒಂದು ಘಟನೆ ನಡೆದಿದ್ದು, ಪೊಲೀಸಪ್ಪನಿಂದ ವ್ಯಕ್ತಿಯೊಬ್ಬನ ಜೀವ ಉಳಿದಿದೆ.
ರೈಲ್ವೆ ನಿಲ್ದಾಣದಲ್ಲಿ (Railway Station) ರೈಲು ಹೊರಡಲು ಪ್ರಾರಂಭಿಸಿದಾಗ ರೈಲು ಹತ್ತಲು ಹೋದ ಪ್ರಯಾಣಿಕ ಸ್ವಲ್ಪ ಮಿಸ್ ಆಗಿದ್ರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಸಾಕ್ಷಾತ್ ಭಗವಂತನಂತೆ ಬಂದ ಪೊಲೀಸಪ್ಪ ರೈಲು ಪ್ರಯಾಣಿಕನನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ- Indian Railway: ರೈಲಿನ ಹಾರ್ನ್‌ನ ಹಿಂದಿದೆ ಹಲವು ರಹಸ್ಯ, ಪ್ರತಿ ಸೀಟಿಗೂ ಇದೆ ವಿಭಿನ್ನ ಅರ್ಥ
ವಾಸ್ತವವಾಗಿ, ರೈಲು ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಟ್ರೈನ್ (Train) ಹೊರಡುವವರೆಗೂ ಸುಮ್ಮನಿದ್ದು, ರೈಲು ಚಲಿಸಲು ಪ್ರಾರಂಭಿಸಿದ ನಂತರ ರೈಲು ಹತ್ತಲು ಹೋಗಿ ಎಡವಿ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ತಕ್ಷಣವೇ ಬಂದು ಪ್ರಯಾಣಿಕನನ್ನು ಬಚಾವ್ ಮಾಡಿದ ಪೊಲೀಸ್ ತಾನು ಗಾಯಗೊಂಡಿರುವ ಘಟನೆ ದಾವಣಗೆರೆ ರೈಲ್ವೇ ಸ್ಟೇಷನ್ ನಲ್ಲಿ ನಡೆದಿದೆ.
ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದೇನು? ಈ ವಿಡಿಯೋ ನೋಡಿ...
ಇದನ್ನೂ ಓದಿ- Indian Railway: ಹೊಸ ಎಕಾನಮಿ ಕೋಚ್ ಆರಂಭಿಸಿದ ರೈಲ್ವೆ, ಮೊದಲಿಗಿಂತ ಹೇಗೆ ಭಿನ್ನ ತಿಳಿಯಿರಿ
ನಾಗರಾಜ್ ಎಂಬ ಪಿಸಿ ರೈಲಿನಿಂದ ಆಯತಪ್ಪಿ ಬಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ್ದಾರೆ.
ತನ್ನ ಪ್ರಾಣವನ್ನು ಲೆಕ್ಕಿಸದೇ ಮತ್ತೊಬ್ಬನ ಪ್ರಾಣ ರಕ್ಷಿಸಿದ ಪಿಸಿ ನಾಗರಾಜ್ ಅವರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.