ನವದೆಹಲಿ: ಅಕ್ಟೋಬರ್ 21 ರಂದು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಈಗ ಸೂಪರ್ ಹಿಟ್ ನರೇಂದ್ರ- ದೇವೇಂದ್ರ ಸೂತ್ರ'ಕ್ಕೆ ಮತ ಚಲಾಯಿಸಲು ಮನವಿ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮುಂಬೈ ಬಳಿಯ ಪನ್ವೇಲ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರೀಯ ಚುನಾವಣಾ ಫಲಿತಾಂಶಗಳು ನಾವು ಸರಿಯಾದ ವೇಗದಲ್ಲಿ ಸರಿಯಾದ ಹಾದಿಯಲ್ಲಿದ್ದೇವೆ ಎಂದು ತೋರಿಸಿದೆ ಎಂದರು.


'ನೀವು ದೆಹಲಿಯಲ್ಲಿ ಮತ್ತೊಮ್ಮೆ ನರೇಂದ್ರನನ್ನು ಮತ್ತೆ ಅಧಿಕಾರಕ್ಕೆ ತಂದಂತೆ, ಅದೇ ರೀತಿ ಮಹಾರಾಷ್ಟ್ರದಲ್ಲಿ ದೇವೇಂದ್ರನನ್ನು ಮತ್ತೆ ಅಧಿಕಾರಕ್ಕೆ ಕರೆ ತನ್ನಿ, ದಿಲ್ಲಿಯಲ್ಲಿ ನರೇಂದ್ರ, ಮುಂಬೈಯಲ್ಲಿ ದೇವೇಂದ್ರ. ಈ ನರೇಂದ್ರ-ದೇವೇಂದ್ರ ಸೂತ್ರವು ಕಳೆದ ಐದು ವರ್ಷಗಳಿಂದ ಸೂಪರ್ ಹಿಟ್, ಇದು ಮಹಾರಾಷ್ಟ್ರವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ 'ಎಂದು ಪ್ರಧಾನಿ ಹೇಳಿದರು.' ನರೇಂದ್ರ ಮತ್ತು ದೇವೇಂದ್ರ ಒಟ್ಟಿಗೆ ನಿಂತಾಗ,1 + 1 ಎರಡು ಆಗುವುದಿಲ್ಲ, ಆದರೆ 11 ಆಗುತ್ತದೆ ಎಂದು ಅವರು ನೆರದಿದ್ದ ಜನಸ್ತೋಮಕ್ಕೆ ಮನವಿ ಮಾಡಿದರು. ಕಳೆದ ಐದು ವರ್ಷಗಳಲ್ಲಿ ಅಭೂತಪೂರ್ವ ಮೂಲಸೌಕರ್ಯ ವಿಸ್ತರಣೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. 


ಹೊಸ ಭಾರತದ ಕನಸು ಪ್ರಮುಖವಾಗಿ ಭಾರತದ ಜನರು ಸುರಕ್ಷಿತವಾಗಿ, ಗೌರವದಿಂದ ಮತ್ತು ಸಮೃದ್ಧಿಯಿಂದ ಬದುಕಬೇಕು. ಈ ಹೊಸ ಭಾರತದ ಸೃಷ್ಟಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಪರಿವರ್ತಿಸುವಲ್ಲಿ ಮಹಾರಾಷ್ಟ್ರವು ಹೆಚ್ಚಿನ ಕೊಡುಗೆ ನೀಡಿದೆ.