Watch: ಆಜಾನ್ ಪ್ರಾರ್ಥನೆ ಸಮಯದಲ್ಲಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅಮೇಠಿಯಲ್ಲಿ ತಮ್ಮ ಭಾಷಣದ ಮಧ್ಯ ಆಜಾನ್ ಪ್ರಾರ್ಥನೆ ಪ್ರಾರಂಭವಾದ ಹಿನ್ನಲೆಯಲ್ಲಿ ಅದು ಮುಗಿಯುವವರೆಗೆ ಭಾಷಣವನ್ನು ಸ್ಥಗಿತಗೊಳಿಸಿ ನಂತರ ಪ್ರಾರಂಭಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅಮೇಠಿಯಲ್ಲಿ ತಮ್ಮ ಭಾಷಣದ ಮಧ್ಯ ಆಜಾನ್ ಪ್ರಾರ್ಥನೆ ಪ್ರಾರಂಭವಾದ ಹಿನ್ನಲೆಯಲ್ಲಿ ಅದು ಮುಗಿಯುವವರೆಗೆ ಭಾಷಣವನ್ನು ಸ್ಥಗಿತಗೊಳಿಸಿ ನಂತರ ಪ್ರಾರಂಭಿಸಿದ್ದಾರೆ.
ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾದಲ್ಲಿ ಅಜಾನ್ ಮುಗಿಯುವವರೆಗೆ ತಮ್ಮ ಭಾಷಣವನ್ನು ಸ್ಥಗಿತ ಗೊಳಿಸಿದ್ದರು.ನಂತರ ಇದಕ್ಕೆ ಪ್ರತಿಕ್ರಿಯಿಸಿ " ನನ್ನಿಂದ ಇನ್ನೊಬ್ಬರ ಪ್ರಾರ್ಥನೆಗೆ ತೊಂದರೆಯಾಗಬಾರದು,ಆದ್ದರಿಂದ ನಾನು ಕೆಲವು ನಿಮಿಷಗಳ ಕಾಲ ಭಾಷಣಕ್ಕೆ ವಿರಾಮ ಹೇಳಿದೆ" ಎಂದು ಮೋದಿ ತಿಳಿಸಿದರು.
ಅಮೇಥಿಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ ಕಳೆದ ಐದು ವರ್ಷಗಳಲ್ಲಿ ಮೋದಿ ಜನರಿಗಾಗಿ ಏನೂ ಮಾಡದೆ ಇರುವುದರ ಹಿನ್ನಲೆಯಲ್ಲಿ ಜನರಿಗೆ ಕ್ಷಮೆ ಕೇಳಬೇಕೆಂದು ಹೇಳಿದರು. ಇವುಗಳಲ್ಲಿ ಪ್ರಮುಖವಾಗಿ ಉದ್ಯೋಗ ಸೃಷ್ಟಿಯಲ್ಲಿನ ವೈಫಲ್ಯ,ಮತ್ತು 15 ಲಕ್ಷ ರೂ ಗಳ ಸುಳ್ಳು ಭರವಸೆ ನೀಡಿರುವುದು ಎಂದು ರಾಹುಲ್ ಗಾಂಧಿ ವಿವರಿಸಿದರು. ಇದೇ ವೇಳೆ ನರೇಂದ್ರ ಮೋದಿ ಐದು ವರ್ಷಗಳಲ್ಲಿ ಏಕೆ ಜನರ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ರಾಹುಲ್ ಪ್ರಶ್ನಿಸಿದರು.