Watch: ದೆಹಲಿಯ ಸಾಕೇತ್ ಕೋರ್ಟ್ ನಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ,ಆಸ್ಪತ್ರೆಗೆ ದಾಖಲು
ಶುಕ್ರವಾರದಂದು ಸಾಕೇತ್ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಅಮಾನತುಗೊಂಡ ವಕೀಲರೊಬ್ಬರು ಗುಂಡು ಹಾರಿಸಿದ್ದರಿಂದಾಗಿ ಮಹಿಳೆ ಮತ್ತು ವಕೀಲರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಶುಕ್ರವಾರದಂದು ಸಾಕೇತ್ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಅಮಾನತುಗೊಂಡ ವಕೀಲರೊಬ್ಬರು ಗುಂಡು ಹಾರಿಸಿದ್ದರಿಂದಾಗಿ ಮಹಿಳೆ ಮತ್ತು ವಕೀಲರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ (ದಕ್ಷಿಣ) ಚಂದನ್ ಚೌಧರಿ ಪ್ರಕಾರ, ಬೆಳಿಗ್ಗೆ 10:30 ಕ್ಕೆ ನ್ಯಾಯಾಲಯದ ಆವರಣದಲ್ಲಿ ನಾಲ್ಕರಿಂದ ಐದು ಸುತ್ತು ಗುಂಡು ಹಾರಿಸಲಾಯಿತು. 40 ರ ಹರೆಯದ ಎಂ ರಾಧಾ ಎಂದು ಗುರುತಿಸಲಾದ ಮಹಿಳೆಗೆ ಒಂದು ಹೊಟ್ಟೆಯಲ್ಲಿ ಮತ್ತು ಒಂದು ಕೈಯಲ್ಲಿ ಒಟ್ಟು ಎರಡು ಬುಲೆಟ್ ಗಾಯಗಳಾಗಿವೆ.ತಕ್ಷಣ ಆಕೆಯನ್ನು ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು.ಮಹಿಳೆ ಮತ್ತು ವಕೀಲರಿಬ್ಬರೂ ಈಗ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ-Amit Shah Road Show: ದೇವನಹಳ್ಳಿಯಲ್ಲಿ ಅಮಿತ್ ಶಾ ರೋಡ್ ಶೋ ಹೇಗಿತ್ತು ನೋಡಿ
ಆರೋಪಿಯನ್ನು ಕಾಮೇಶ್ವರ ಪ್ರಸಾದ್ ಸಿಂಗ್ ಅಲಿಯಾಸ್ ಬಿನೋದ್ ಸಿಂಗ್ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ವಂಚನೆ ಪ್ರಕರಣಗಳನ್ನು ದಾಖಲಿಸಿದ ನಂತರ ಬಾರ್ ಕೌನ್ಸಿಲ್ ಅವರನ್ನು ಅಮಾನತುಗೊಳಿಸಿದೆ ಎಂದು ಡಿಸಿಪಿ (ದಕ್ಷಿಣ) ತಿಳಿಸಿದ್ದಾರೆ.
ಸಾಕೇತ್ ನ್ಯಾಯಾಲಯದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ.
ಇದನ್ನೂ ಓದಿ-BSY Lucky Car: ಪುತ್ರನ ಗೆಲುವಿಗೆ BSY ಬಳಸಿದ ಕಾರಿನ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ
ಇದೆ ವೇಳೆ ಸಾಕೇತ್ ನ್ಯಾಯಾಲಯದಲ್ಲಿ ನಡೆದ ಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ಸಿಎಂ ಕೇಜ್ರಿವಾಲ್, ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ "ಸಂಪೂರ್ಣವಾಗಿ ಹದಗೆಟ್ಟಿದೆ" ಎಂದು ಹೇಳಿದ್ದಾರೆ.ಬೇರೆಯವರ ಕೆಲಸಕ್ಕೆ ಅಡ್ಡಿಪಡಿಸುವ ಮತ್ತು ಎಲ್ಲದರಲ್ಲೂ ಹೊಲಸು ರಾಜಕೀಯ ಮಾಡುವ ಬದಲು ಎಲ್ಲರೂ ತಮ್ಮ ಸ್ವಂತ ಕೆಲಸಗಳತ್ತ ಗಮನ ಹರಿಸಬೇಕು ಮತ್ತು ನಿರ್ವಹಿಸಲು ಸಾಧ್ಯವಾಗದಿದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.