Karnataka Election Photos : ಈ ಅಂಬಾಸಿಡರ್ ಕಾರು ತಮಗೆ ಅದೃಷ್ಟವೆಂದು ಬಿಎಸ್‍ವೈ ನಂಬಿದ್ದಾರಂತೆ. ಹೀಗಾಗಿ ತಮ್ಮ ಪುತ್ರನ ಗೆಲುವಿಗಾಗಿ ಅದೃಷ್ಟದ ಕಾರಿನಲ್ಲಿ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರ ಅದೃಷ್ಟದ ಕಾರು: ಮಾಜಿ ಸಿಎಂ ಮತ್ತು ಹಿರಿಯ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರರ ನಾಮಪತ್ರ ಸಲ್ಲಿಕೆಗೆ ಅದೃಷ್ಟದ ಕಾರಿನಲ್ಲಿ ಆಗಮಿಸಿದ್ದರು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ. ಯಡಿಯೂರಪ್ಪ ಮತ್ತು ಅವರ ಹಳೆಯ ಅಂಬಾಸಿಡರ್ ಕಾರಿನ ಬಗ್ಗೆ ಜನರು ಇದೀಗ ಸಾಕಷ್ಟು ಮಾತನಾಡುತ್ತಿದ್ದಾರೆ. ಯಡಿಯೂರಪ್ಪಗೆ ಈ ಕಾರು ತುಂಬಾ ಇಷ್ಟ ಎಂದು ಹೇಳಲಾಗುತ್ತಿದೆ. ಈ ಅಂಬಾಸಿಡರ್ ಕಾರು ತಮಗೆ ಅದೃಷ್ಟವೆಂದು ಬಿಎಸ್‍ವೈ ನಂಬಿದ್ದಾರಂತೆ. ಹೀಗಾಗಿ ತಮ್ಮ ಪುತ್ರನ ಗೆಲುವಿಗಾಗಿ ಅದೃಷ್ಟದ ಕಾರಿನಲ್ಲಿ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಕಾರಿನ ಕಥೆ ಮತ್ತು ಅದರ ಅದೃಷ್ಟದ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಗುರುವಾರ ಬಿ.ವೈ.ವಿಜಯೇಂದ್ರ ಅವರು ತಮ್ಮ ಬಿ.ಎಸ್.ಯಡಿಯೂರಪ್ಪರ 'ಲಕ್ಕಿ' ಅಂಬಾಸಿಡರ್ ಕಾರಿನಲ್ಲಿ ಆಗಮಿಸಿ ಅಚ್ಚರಿ ಮೂಡಿಸಿದರು.
ಚುನಾವಣಾ ರಾಜಕೀಯದಿಂದ ಬಿ.ಎಸ್.ಯಡಿಯೂರಪ್ಪ ನಿವೃತ್ತಿ ಘೋಷಿಸಿದ್ದಾರೆ. ಅವರ ಆಪ್ತ ಮೂಲಗಳ ಪ್ರಕಾರ, ಬಿಎಸ್‍ವೈಗೂ ಮತ್ತು ಅವರ ಹಳೆಯ ಅಂಬಾಸಿಡರ್ ಕಾರಿಗೂ ಬಿಡಿಸಲಾರದ ನಂಟು ಇದೆಯಂತೆ. ದಶಕಗಳ ಹಿಂದೆ ಬಿಎಸ್‍ವೈ ತಮ್ಮ ಮೊದಲ ಚುನಾವಣೆಗೆ ನಾಮಪತ್ರ ಸಲ್ಲಿಸಲು ಹೋಗಿ, ನಂತರ ಗೆದ್ದು ಬಂದದ್ದು ಇದೇ ಬಿಳಿಯ ವಿಂಟೇಜ್ ಕಾರಿನಲ್ಲಿ.
ಈ ಅದ್ಭುತ ಗೆಲುವಿನ ನಂತರ ಬಿ.ಎಸ್.ಯಡಿಯೂರಪ್ಪ ಹಿಂತಿರುಗಿ ನೋಡಲಿಲ್ಲ. ಬಿಎಸ್‍ವೈ ತಮ್ಮ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಅವರು 4 ಬಾರಿ ಕರ್ನಾಟಕದ ಸಿಎಂ ಆಗಿದ್ದರು.
ವಿಶೇಷವೆಂದರೆ 1983ರಲ್ಲಿ ಯಡಿಯೂರಪ್ಪ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಂದಿನಿಂದ ಅವರು 1999ರವರೆಗೆ ನಿರಂತರವಾಗಿ ಈ ಕ್ಷೇತ್ರದಿಂದ ಶಾಸಕರಾಗಿದ್ದರು. ನಂತರ 1999ರ ಸೋಲಿನ ನಂತರ ಯಡಿಯೂರಪ್ಪ 2004ರವರೆಗೂ ಎಂಎಲ್‌ಸಿ ಆಗಿದ್ದರು. 2004ರಿಂದ 2014ರವರೆಗೆ ಮತ್ತೆ ಶಾಸಕರಾಗಿದ್ದರು.
ಯಡಿಯೂರಪ್ಪನವರು ಬಿಜೆಪಿಯಿಂದ ಬೇರ್ಪಟ್ಟು ತಮ್ಮದೇ ಪಕ್ಷ ಕಟ್ಟಿಕೊಂಡಿದ್ದ ಕಾಲವೊಂದಿತ್ತು. ಆದರೆ ನಂತರ ಅವರು ಮತ್ತೆ ಬಿಜೆಪಿಗೆ ಮರಳಿದರು. ಬಳಿಕ 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದಾದ ನಂತರ ಅವರು 2018ರಲ್ಲಿ ಕರ್ನಾಟಕ ರಾಜಕೀಯಕ್ಕೆ ಮತ್ತೆ ಮರಳಿದರು.