"ಹಿಂದುತ್ವ, ಧರ್ಮಾಂಧತೆ, ಜಾತಿಗಳ ನಡುವೆ ಕಲಹ ಸೃಷ್ಟಿಸಿ, ಸಾಮಾಜಿಕ ಸಾಮರಸ್ಯ ನಾಶ ಮಾಡುತ್ತಿದ್ದಾರೆ"

 ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರೂ ರಾಷ್ಟ್ರೀಯ ಒಗ್ಗಟ್ಟನ್ನು, ಸಂವಿಧಾನದ ಆಧಾರದ ಮೇಲೆ ಒಟ್ಟಾಗಿ ತೆಗೆದುಕೊಂಡು ಹೋಗುವ ಮನಸ್ಥಿತಿ ಇಲ್ಲ. ಹಿಂದುತ್ವ, ಧರ್ಮಾಂಧತೆ, ಜಾತಿಗಳ ನಡುವೆ ಕಲಹ ಸೃಷ್ಟಿಸಿ, ಸಾಮಾಜಿಕ ಸಾಮರಸ್ಯ ನಾಶ ಮಾಡುತ್ತಾ ಬಂದಿದ್ದಾರೆ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಕಿಡಿ ಕಾರಿದ್ದಾರೆ.

Written by - Zee Kannada News Desk | Last Updated : Apr 21, 2023, 03:59 PM IST
  • ಶೋಭಾ ಅವರು ಕೇಂದ್ರ ಕೃಷಿ ಸಚಿವರಾಗಿ ರಾಜ್ಯದ ಪರವಾಗಿ ಒಂದು ದಿನ ಧ್ವನಿ ಎತ್ತಿಲ್ಲ
  • ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ 90 ಲಕ್ಷ ರೈತರಿಗೆ0 5 ಕೋಟಿಗೂ ಹೆಚ್ಚು ಸಹಾಯಧನ ಬಿಡುಗಡೆಯಾಗಿಲ್ಲ
  • ಕೇಂದ್ರದ ಸಿಎಜಿ ವರದಿಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದೆ.

Trending Photos

"ಹಿಂದುತ್ವ, ಧರ್ಮಾಂಧತೆ, ಜಾತಿಗಳ ನಡುವೆ ಕಲಹ ಸೃಷ್ಟಿಸಿ, ಸಾಮಾಜಿಕ ಸಾಮರಸ್ಯ ನಾಶ ಮಾಡುತ್ತಿದ್ದಾರೆ" title=

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರೂ ರಾಷ್ಟ್ರೀಯ ಒಗ್ಗಟ್ಟನ್ನು, ಸಂವಿಧಾನದ ಆಧಾರದ ಮೇಲೆ ಒಟ್ಟಾಗಿ ತೆಗೆದುಕೊಂಡು ಹೋಗುವ ಮನಸ್ಥಿತಿ ಇಲ್ಲ. ಹಿಂದುತ್ವ, ಧರ್ಮಾಂಧತೆ, ಜಾತಿಗಳ ನಡುವೆ ಕಲಹ ಸೃಷ್ಟಿಸಿ, ಸಾಮಾಜಿಕ ಸಾಮರಸ್ಯ ನಾಶ ಮಾಡುತ್ತಾ ಬಂದಿದ್ದಾರೆ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಕಿಡಿ ಕಾರಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿ.ಸೋಮಶೇಖರ್ ಹೇಳಿದ್ದಿಷ್ಟು...

ನಾನು ರಾಜಕೀಯ ಪ್ರವೇಶ ಮಾಡಿ 40 ವರ್ಷಗಳಾಗಿವೆ. ನಾನು ಹಾಗೂ ಸಿದ್ದರಾಮಯ್ಯ ಅವರು ಒಟ್ಟಿಗೆ ರಾಜಕೀಯ ಪ್ರವೇಶಿಸಿ 1983ರಲ್ಲಿ ಮೊದಲ ಬಾರಿಗೆ ಜನತಾ ದಳ ಸರ್ಕಾರದಲ್ಲಿ ಶಾಸನ ಸಭೆಗೆ ಆಯ್ಕೆಯಾಗಿ, ನಂತರ ಸಚಿವರುಗಳಾಗಿ ಕೆಲಸ ಮಾಡಿದ್ದೇವೆ. ದೇಶದಲ್ಲೇ ಅತ್ಯುತ್ತಮ ಕೆಲಸಕ್ಕೆ ಪ್ರಶಸ್ತಿ ಪಡೆಯಲಾಗಿತ್ತು. 2014ರಲ್ಲಿ ಬಿಜೆಪಿ ಸೇರಿ, ಇತ್ತೀಚಿನವರೆಗೆ ಸುಮಾರು 10 ವರ್ಷಗಳ ಕಾಲ ಕೆಲಸ ಮಾಡಿದೆ. ಈ ಅವಧಿಯಲ್ಲಿ ಅವರ ನಡೆ, ಕಾರ್ಯಕ್ರಮ ಹತ್ತಿರದಿಂದ ನೋಡಿ ಭ್ರಮನಿರಸನಾಗಿ ಪಕ್ಷದಿಂದ ಹೊರಬಂದು ನಿನ್ನೆ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ನಂಬಿ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪಕ್ಷ ಸೇರಿದ್ದೇನೆ.

ಇದನ್ನೂ ಓದಿ-Amit Shah Road Show: ದೇವನಹಳ್ಳಿಯಲ್ಲಿ ಅಮಿತ್ ಶಾ ರೋಡ್ ಶೋ ಹೇಗಿತ್ತು ನೋಡಿ

ಅಂಬೇಡ್ಕರ್ ಅವರು ಸಂವಿಧಾನ ಬರೆದು ಉತ್ತರಿಸುವಾಗ, ಸಂವಿಧಾನವನ್ನು ಹೊರಗಿನಿಂದ ಬದಲಿಸಲು ಸಾಧ್ಯವಿಲ್ಲ. ಆದರೆ ಸಂವಿಧಾನವನ್ನು ಆಡಳಿತ ಮಾಡುವ ಸರ್ಕಾರ ದುರ್ಬಲ ಮಾಡಬಹುದು ಎಂದು ಹೇಳಿದ್ದರು. ಸಂವಿಧಾನಿಕ ಸಂಸ್ಥೆಗಳ ದುರ್ಬಲ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ. ಮೀಸಲಾತಿ ಅಂತ್ಯಗೊಳಿಸುವ ಕೆಲಸ ಮಾಡಲಾಗುತ್ತಿದೆ. ಇದೆಲ್ಲದರಿಂದ ಬೇಸತ್ತು ಹೊರಬಂದಿದ್ದೇನೆ. ಸರ್ಕಾರದಲ್ಲಿ ಹಿಂದೆದೂ ಕಾಣದಂತಹ ಭ್ರಷ್ಟಾಚಾರ ನಡೆದಿದೆ. ರಾಷ್ಟ್ಪಮಟ್ಟದಲ್ಲಿ ಸಂವಿಧಾನಕ್ಕೆ ಕಂಟಕ ಬರುವ ಸೂಚನೆ ಇದೆ. ಇಂತಹ ಸರ್ಕಾರಕ್ಕೆ ನೈತಿಕ ಬೆಂಬಲ ನೀಡಬಾರದು ಎಂದು, ಸಂವಿಧಾನ ರಕ್ಷಿಸಿ, ಅದಕ್ಕೆ ಪೂರಕವಾಗಿ ಕೆಲಸ ಮಾಡುವಂತಹ ಪಕ್ಷಕ್ಕೆ ಸೇರಿದ್ದೇನೆ. ಸಂವಿಧಾನ, ಅಶ್ಪೃಶ್ಯತೆ ಬಗ್ಗೆ ಗೊತ್ತಿಲ್ಲದವರ ಅಧಿಕಾರದಲ್ಲಿ ಕೂರಿಸಿ ಪ್ರಬುದ್ಧರನ್ನು ಮೂಲೆಗುಂಪು ಮಾಡಿದ್ದಾರೆ. ಪರಿಶಿಷ್ಟರು ಈ ಷಡ್ಯಂತ್ರಕ್ಕೆ ಬಲಿಯಾಗಬಾರದು. ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಪಕ್ಷ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ದೇಶದಲ್ಲಿ ಉತ್ತಮ ಅಲೆ ಎಬ್ಬಿಸಿದೆ. ನಮ್ಮ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದು ಅವರ ಕೈ ಬಲಪಡಿಸಲು ಪಕ್ಷ ಸೇರಿದ್ದೇವೆ.

ರಮೇಶ್ ಬಾಬು:

ರಾಜ್ಯದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದಲ್ಲಿ ಚುನಾವಣಾ ಆಯೋಗ ಯಾವುದೇ ಪ್ರಭಾವಕ್ಕೆ ಒಳಗಾಗದೇ ಪಾರದರ್ಶಕವಾಗಿ ಚುನಾವಣೆ ನಡೆಸುವ ವಿಶ್ವಾಸವಿದೆ. ಮಾದರಿ ನೀತಿ ಸಂಹಿತೆ ಜಾರಿ ನಂತರ ದೂರು ದಾಖಲಿಸುವುದು ಒಂದು ಹಂತವಾದರೆ, ಮತ್ತೊಂದು ಕೇಂದ್ರ ಚುನಾವಣಾ ಆಯೋಗ ನಿತಿ ಸಂಹಿತೆ ಉಲ್ಲಂಘನೆ ಸಮಯದಲ್ಲಿ ಸ್ವಯಂಕೃತವಾಗಿ ದೂರು ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಆದರೆ ಆಶ್ಚರ್ಯಕರ ವಿಚಾರ ಎಂದರೆ ಬಿಜೆಪಿ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ರವಿ ಕುಮಾರ್ ವರನ್ನು ಪ್ರಚೋದನೆಗಾಗಿ ಟೂಲ್ ಕಿಟ್ ರೀತಿಯಲ್ಲಿ ಬಳಕೆ ಮಾಡಲಾಗುತ್ತಿದೆ. ಇವರು ಜಾತಿ, ಧರ್ಮದ ವಿಚಾರವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದರೂ ಕೇಂದ್ರ ಚುನಾವಣಾ ಆಯೋಗ ತಟಸ್ಥವಾಗಿರುವುದೇಕೆ? 

ನಿನ್ನೆ ಕೆಪಿಸಿಸಿ ವತಿಯಿಂದ ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಶೋಭಾ ಕರಂದ್ಲಾಜೆ ಅವರು ಮಾಡಿರುವ ಗಂಭೀರವಾದ ಪ್ರಚೋದನಾಕಾರಿ ಹೇಳಿಕೆ ಬಗ್ಗೆ ದೂರು ದಾಖಲಿಸುತ್ತೇವೆ. ಇದೇ ಸಮಯದಲ್ಲಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಧರ್ಮ, ಜಾತಿ ಹೆಸರಲ್ಲಿ ಕಾಂಗ್ರೆಸ್ ನಾಯಕರನ್ನು ಕ್ರಿಮಿನಲ್ ಗಳು ಎಂಬ ದ್ವೇಷಪೂರಿತ ಸುಳ್ಳು ಆರೋಪ ಮಾಡಿದರೂ ಕೇಂದ್ರ ಚುನಾವಣಾ ಆಯೋಗ ಯಾಕೆ ಯಾವುದೇ ಪ್ರಕರಣ ದಾಖಲಿಸಿಲ್ಲ? ಬಿಜೆಪಿ ಟೂಲ್ ಕಿಟ್ ಭಾಗವಾಗಿ ಈ ಮೂವರು ನಾಯಕರು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಮಾತನಾಡುತ್ತಾರೆ.

ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಈನ್ ಕುಮಾರ್ ಕಟೀಲ್ ಅವರು ಅಭಿವೃದ್ಧಿ ಬಗ್ಗೆ ಚುನಾವಣೆ ಮಾಡುವುದು ಬೇಡ, ಲವ್ ಜಿಹಾದ್ ನಂತಹ ಭಾವನಾತ್ಮಕ ವಿಚಾರವಾಗಿ ಚುನಾವಣೆ ಮಾಡೋಣ ಎಂದು ಹೇಳಿದ್ದರು. ನಿನ್ನೆ ಸೋಭಾ ಕರಂದ್ಲಾಜೆ ಅವರ ಹೇಳಿಕೆ ಗಂಭೀರವಾಗಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ತಟಸ್ಥವಾಗಿದೆ. ಅವರಿಗೆ ಕೇಂದ್ರದ ಒತ್ತಡವಿದ್ದರೆ ಅದನ್ನು ಒಪ್ಪಿಕೊಳ್ಳಲಿ.

ಇದನ್ನೂ ಓದಿ-BSY Lucky Car: ಪುತ್ರನ ಗೆಲುವಿಗೆ BSY ಬಳಸಿದ ಕಾರಿನ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ

ಈ ರೀತಿಯ ಪ್ರಚೋದನಾಕಾರಿ ಭಾಷ್ಣ ಕಾನೂನಿನ ಪ್ರಕಾರ ಅಫರಾಧವಾಗಿದ್ದು, ಇದಕ್ಕೆ ತಕ್ಕ ಶಿಕ್ಷೆ ಆಗಬೇಕು. ಶೋಭಾ ಕರಂದ್ಲಾಜೆ ಅವರು ಕೆಜೆಪಿ ಕಟ್ಟಿಸಿ ಈಗ ಮತ್ತೆ ಬಿಜೆಪಿಯಲ್ಲಿ ಆಶ್ರಯ ಪಡೆದಿದ್ದಾರೆ. ಅವರು ಯಾರ ಪ್ರಭಾವದಿಂದ ಮಂತ್ರಿಯಾಗಿದ್ದಾರೆ, ಗುಂಪುಗಾರಿಕೆಯಲ್ಲಿ ಯಾರ ಪರವಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಶೋಭಾ ಅವರು ಕೇಂದ್ರ ಕೃಷಿ ಸಚಿವರಾಗಿ ರಾಜ್ಯದ ಪರವಾಗಿ ಒಂದು ದಿನ ಧ್ವನಿ ಎತ್ತಿಲ್ಲ.ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ 90 ಲಕ್ಷ ರೈತರಿಗೆ0 5 ಕೋಟಿಗೂ ಹೆಚ್ಚು ಸಹಾಯಧನ ಬಿಡುಗಡೆಯಾಗಿಲ್ಲ. ಕೇಂದ್ರದ ಸಿಎಜಿ ವರದಿಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದೆ.

ಈ ಬಗ್ಗೆ ಒಂದು ದಿನ ಧ್ವನಿ ಎತ್ತದವರು, ಸಚಿವ ಸ್ಥಾನ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿರುವ ಶೋಭಾ ಅವರು ನಮ್ಮ ನಾಯಕರ ಬಗ್ಗೆ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಬಿಜೆಪಿಗೆ ಅಭಿವೃದ್ಧಿ ಮೇಲೆ ಮಾತನಾಡಲು ಧಮ್ಮು, ತಾಕತ್ತು ಏನು ಇಲ್ಲ. ಇಂದು ಇಡೀ ದೇಶ 40% ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಆಧಾರ್ ಹಾಗೂ ಪ್ಯಾನ್ ಲಿಂಕ್ ವಿಚಾರವಾಗಿ ಜನ ಸಾಮಾನ್ಯರು ಬೇಸತ್ತಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಪ್ರಚೋದನಾಕಾರಿ ಭಾಷಣದ ಕುರಿತು ಎಫ್ಐಆರ್ ದಾಖಲಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News