ನವದೆಹಲಿ: ಎರಡು ವರ್ಷಗಳ ಹಿಂದೆ ಟರ್ಕಿಯಲ್ಲಿ ಉದ್ಯಮಿ ನಿಖಿಲ್ ಜೈನ್ ಅವರೊಂದಿಗಿನ ತಮ್ಮ ವಿವಾಹವು ಅಮಾನ್ಯವಾಗಿದೆ ಎಂದು ತೃಣಮೂಲ ಸಂಸದೆ ಮತ್ತು ನಟಿ ನುಸ್ರತ್ ಜಹಾನ್ ಬುಧವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: BJP: 'ಮುಂದಿನ ತಿಂಗಳು 50 TMC ಶಾಸಕರು ಬಿಜೆಪಿ ಸೇರ್ಪಡೆ'


ಅವರ ಸಂಬಂಧದ ಇತ್ತೀಚಿನ ವರದಿಗಳ ಮಧ್ಯೆ, ಅವರ ಪ್ರತ್ಯೇಕತೆಯು ಬಹಳ ಹಿಂದೆಯೇ ಸಂಭವಿಸಿದೆ ಮತ್ತು ತನ್ನ ಖಾಸಗಿ ಜೀವನವನ್ನು ತನ್ನಷ್ಟಕ್ಕೆ ತಾನೇ ಉಳಿಸಿಕೊಳ್ಳಲು ಬಯಸಿದ್ದರಿಂದ ಅವಳು ಅದರ ಬಗ್ಗೆ ಮಾತನಾಡಲಿಲ್ಲ ಎಂದು ಹೇಳಿದರು.


ವಿದೇಶದಲ್ಲಿರುವುದು, ಟರ್ಕಿಶ್ ಮದುವೆ ನಿಯಮಗಳ, ಸಮಾರಂಭವು ಅಮಾನ್ಯವಾಗಿದೆ. ಇದು ಅಂತರ್ ಧರ್ಮದ ವಿವಾಹವಾಗಿತ್ತು, ಇದು ಭಾರತದಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ನೊಂದಾಯಿಸಬೇಕಾಗಿತ್ತು,ಆದರೆ ಅದಾಗಲಿಲ್ಲ, ನ್ಯಾಯಾಲಯದ ಪ್ರಕಾರ, ಇದು ಮದುವೆ ಅಲ್ಲ ಸಹ ಜೀವನ, ಹೀಗಾಗಿ, ವಿಚ್ಚೇದನದ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಹನಿಮೂನ್ ಮೂಡ್ ನಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ...!


ಜೂನ್ 2019 ರಲ್ಲಿ, ನುಸ್ರತ್ ಜಹಾನ್ (Nusrat Jahan) ಮತ್ತು ನಿಖಿಲ್ ಜೈನ್ ಅವರು ಸುಂದರವಾದ ಟರ್ಕಿಶ್ ಪಟ್ಟಣವಾದ ಬೊಡ್ರಮ್ನಲ್ಲಿ ವಿವಾಹವಾಗಿದ್ದರು. ಇದಾದ ನಂತರ ಟ್ವೀಟ್ ಮಾಡಿ 'ನಿಖಿಲ್ ಜೈನ್ ಅವರೊಂದಿಗೆ ಸಂತೋಷದಿಂದ ಎಂದೆಂದಿಗೂ' ಎಂದು ಬರೆದುಕೊಂಡಿದ್ದರು.ತನ್ನ ಮದುವೆಯು 'ಕಾನೂನುಬದ್ಧವಲ್ಲ, ಮಾನ್ಯ ಮತ್ತು ಸಮರ್ಥನೀಯವಲ್ಲ' ಎಂದು ಒತ್ತಿಹೇಳಿದ ಅವರು ತಮ್ಮ ಸಹೋದರಿಯ ಶಿಕ್ಷಣ ಮತ್ತು ಅವರ ಕುಟುಂಬದ ಖರ್ಚುಗಳನ್ನು ಮೊದಲ ದಿನದಿಂದ ಭರಿಸಿರುವುದಾಗಿ ಹೇಳಿದರು.


ಇದನ್ನೂ ಓದಿ: 'ನೀವು ನಮ್ಮನ್ನು ತಳ್ಳಬೇಡಿ, ಅರ್ಥ ಮಾಡಿಕೊಳ್ಳಿ ಸರ್'-ಮಾಧ್ಯಮದವರಲ್ಲಿ ಟಿಎಂಸಿ ಸಂಸದೆ ವಿನಂತಿ


'ನನ್ನ ಸಂಪೂರ್ಣ ಪರಿಶ್ರಮದಿಂದ ನಾನು ನನ್ನ ಸ್ವಂತ ಗುರುತನ್ನು ಮಾಡಿಕೊಂಡಿದ್ದೇನೆ; ಆದ್ದರಿಂದ ನನ್ನ ಗುರುತಿನ ಆಧಾರದ ಮೇಲೆ ನನಗೆ ಸಂಬಂಧವಿಲ್ಲದ ಯಾರನ್ನೂ ಪ್ರಚಾರ ಅಥವಾ ಟೈಟಲ್ ಅಥವಾ ಅನುಯಾಯಿಗಳನ್ನು ಹಂಚಿಕೊಳ್ಳಲು ನಾನು ಅನುಮತಿಸುವುದಿಲ್ಲ" ಎಂದು ನುಸ್ರತ್ ಜಹಾನ್ ತನ್ನ ಏಳು ಅಂಶಗಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ನುಸ್ರತ್ ಜಹಾನ್ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಬಸಿರ್ಹತ್ ನಿಂದ 3.5 ಲಕ್ಷ ಮತಗಳಿಂದ ಜಯಗಳಿಸಿದ್ದರು.ಆ ವರ್ಷ ಮಮತಾ ಬ್ಯಾನರ್ಜಿ ಅವರ ಪಕ್ಷದಿಂದ ಕಣಕ್ಕಿಳಿದ 17 ಮಹಿಳೆಯರಲ್ಲಿ ಅವರು ಒಬ್ಬರಾಗಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.