ಹನಿಮೂನ್ ಮೂಡ್ ನಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ...!

ಸದ್ಯ ಹನಿಮೂನ್ ಮೂಡ್ ನಲ್ಲಿರುವ ನೂತನ ಟಿಎಂಸಿ ಸಂಸದೆ ಈಗ ತಮ್ಮ ರಜಾ ದಿನಗಳ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Last Updated : Aug 3, 2019, 01:11 PM IST
ಹನಿಮೂನ್ ಮೂಡ್ ನಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ...! title=
Photo courtesy: Instagram

ಮುಂಬೈ: ಸದ್ಯ ಹನಿಮೂನ್ ಮೂಡ್ ನಲ್ಲಿರುವ ನೂತನ ಟಿಎಂಸಿ ಸಂಸದೆ ಈಗ ತಮ್ಮ ರಜಾ ದಿನಗಳ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಬಿಳಿ ಮತ್ತು ಕಪ್ಪು ಪಟ್ಟೆ ಕ್ರಾಪ್ ಟಾಪ್, ವೈಟ್ ಲೋವರ್ಸ್, ರೆಡ್ ಚೂಡಾ (ಹೊಸದಾಗಿ ಮದುವೆಯಾದ ಮಹಿಳೆಯರು ಧರಿಸುತ್ತಾರೆ) ಮತ್ತು ಕಪ್ಪು ಕನ್ನಡಕ ಧರಿಸಿ ತಮ್ಮ ಸಂತಸದ ಗಳಿಗೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 

Its better to have ur head in the clouds and know where u are.. paradise has nvr been abt places,it exists in moments,in connection, in flashes across time.. pic courtesy hubbilicious @nikhiljain09

A post shared by Nusrat (@nusratchirps) on

'ಮೋಡಗಳಲ್ಲಿ ನಿಮ್ಮ ತಲೆಯನ್ನು ಇಟ್ಟು ಎಲ್ಲಿದ್ದೇವೆ ಎಂದು ತಿಳಿಯುವುದು ಉತ್ತಮ. ಸ್ವರ್ಗವೆಂದರೆ ಕೇವಲ ಸ್ಥಳವೊಂದೇ ಅಲ್ಲ , ಅದು ಕ್ಷಣಗಳಲ್ಲಿ ಹಾಗೂ ಸಂಪರ್ಕದಲ್ಲಿರುತ್ತದೆ. ಸಮಯದುದ್ದಕ್ಕೂ ಅದು ಹೊಳೆಯುತ್ತಲಿರುತ್ತದೆ 'ಎಂದು ತಮ್ಮ ಇನ್ಸ್ಟಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಅವರು 3.5 ಲಕ್ಷ ಮತಗಳೊಂದಿಗೆ ನುಸ್ರತ್ ಅವರು ಬಸಿರ್ಹತ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಇದಾದ ನಂತರ ಅವರು ಸಾಲು ಸಾಲಾಗಿ ವಿವಾದಕ್ಕೆ ಒಳಗಾಗಿದ್ದರು. ಅದರಲ್ಲಿ ಪ್ರಮುಖವಾಗಿ ಅವರು ಧರಿಸುವ ಬಟ್ಟೆ, ಸಂಸತ್ತಿನಲ್ಲಿ ಸಿಂಧೂರ ಧರಿಸಿರುವುದು , ಮತ್ತು ಜೈನ ಕುಟುಂಬದ ವ್ಯಕ್ತಿಯನ್ನು ಮದುವೆಯಾಗಿರುವುದು ಹಾಗೂ ಹಿಂದೂ ಆಚರಣೆಗಳಲ್ಲಿ ಪಾಲ್ಗೊಂಡಿರುವುದು ವಿವಾದದ ಕೇಂದ್ರವಾಗಿದ್ದವು.

 
 

Trending News