ಬೆಂಗಳೂರು  : Bride Groom Video : ಮದುವೆ ಸಮಾರಂಭಗಳಲ್ಲಿ ಸಂಬಂಧಿಕರು ಕೋಪಗೊಳ್ಳುವ ಸುದ್ದಿ ಸಾಮಾನ್ಯ. ವಧುವಿನ ಕಡೆಯವರು ಮಾಡಿರುವ ಕೆಲಸ ವರನ ಕಡೆಯವರಿಗೆ ಸರಿ ಎನಿಸುವುದಿಲ್ಲ (Wedding Viral Video). ವರನ ಕಡೆಯವರು ಮಾಡಿರುವ ಕೆಲಸ ವಧುವಿನ ಕಡೆಯವರಿಗೆ ಸರಿ ಹೊಂದುವುದಿಲ್ಲ. ಈ ಸಂದರ್ಭಗಳಲ್ಲಿ ಸಣ್ಣ ಪುಟ್ಟ ಕಿರಿಕ್ ಗಳಾಗುತ್ತವೆ. ಇದು ಸಾಮಾನ್ಯವಾಗಿ ಎಲ್ಲಾ ಮದುವೆಗಳಲ್ಲಿಯೂ ನಡೆಯುತ್ತದೆ (Viral Video). ಆದರೆ, ವಧು ಮತ್ತು ವರನೇ ಮದುವೆ ವೇದಿಕೆಯಲ್ಲಿ ಸಿಟ್ಟಾದರೆ?  ಇಲ್ಲೊಂದು ಮದುವೆಯಲ್ಲಿ ಇಂಥದ್ದೇ ಸನ್ನಿವೇಶ ಎದುರಾಗಿದೆ. 


COMMERCIAL BREAK
SCROLL TO CONTINUE READING

ಮದುವೆ ದಿಬ್ಬಣ ತಡವಾಗಿ ಬಂತು ಎನ್ನುವ ಕಾರಣಕ್ಕೆ ಮುನಿಸಿಕೊಂಡಿದ್ದಾಳೆ ವಧು. ಬರೀ ಮುನಿಸಿಕೊಂಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ (Funny Wedding Video). ತನ್ನ ಸಿಟ್ಟನ್ನು ವೇದಿಕೆಯಲ್ಲಿಯೇ ವರನ ಮೇಲೆ ತೋರಿಸಿಬಿಟ್ಟಿದ್ದಾಳೆ. ಇಷ್ಟಾದ ಮೇಲೆ ವರ ತಾನೇನು ಕಮ್ಮಿ ಎನ್ನುವಂತೆ ಕ್ರಿಯೆಗೆ ಪ್ರತಿಕ್ರಿಯೆ ತೋರಿಸಿದ್ದಾನೆ.  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿದೆ. 


 ಇದನ್ನೂ ಓದಿ : Viral video : ಕೊಕ್ಕಿಗೆಟಕದ ಬಾಟಲಿ ನೀರನ್ನು ಜಾಣತನದಿಂದ ಕುಡಿಯುತ್ತಿರುವ ಹಕ್ಕಿ


 ವರನ ಮೇಲೆ ಸಿಟ್ಟಾದ ವಧು : 
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು-ವರರು ಮದುವೆ ಸಮಾರಂಭದ ವೇದಿಕೆಯಲ್ಲಿಯೇ ಇರುವುದನ್ನು ಕಾಣಬಹುದು (Viral Video). ಶಾಸ್ತ್ರದ ಪ್ರಕಾರ ವಧುವಿಗೆ ಸಿಹಿ ತಿಂಡಿ ತಿನ್ನಿಸಬೇಕು ವರ. ಆದರೆ ವಧು ಅದನ್ನು ನಿರಾಕರಿಸಿ ಬಿಡುತ್ತಾಳೆ. ಹಾಗೆಯೇ ಸುಮ್ಮನೆ ಬೇಡ ಎಂದಿದ್ದರೂ ಸಮಸ್ಯೆ ಇರಲಿಲ್ಲ. ಬದಲಾಗಿ ವಧು ಸಿಹಿ ತಿಂಡಿಯನ್ನು ತೆಗೆದುಕೊಂಡು ದೂರಕ್ಕೆ ಎಸೆದು ಬಿಡುತ್ತಾಳೆ. ವಧುವಿನ ಈ ರೀತಿಯ ವರ್ತನೆಯನ್ನು ವರ ಅರಗಿಸಿಕೊಳ್ಳುವುದಾದರೂ ಹೇಗೆ? ( Bridegroom video) ತಾನು ಕೂಡಾ ಯಾರಿಗೂ ಕಡಿಮೆಯಿಲ್ಲ ಎನ್ನುವುದುನ್ನು ತೋರಿಸಿಕೊಡುತ್ತಾನೆ .


ಶಾಸ್ತ್ರದ ಮುಂದಿನ ಹಂತವಾಗಿ ವಧು ಕೊಡುವ ನೀರನ್ನು ವರ ನಿರಾಕರಿಸಿ ಬಿಡುತ್ತಾನೆ. ಅಲ್ಲಿಗೆ ಮತ್ತಷ್ಟು ಕೋಪಗೊಂಡ ವಧು ಆ ನೀರಿನ ಲೋಟವನ್ನು ಕೂಡಾ ಎಸೆದು ಬಿಡುತ್ತಾಳೆ. 



 


 ಇದನ್ನೂ ಓದಿ : Viral Video: ಆಕಾಶವನ್ನು ಚುಂಬಿಸುತ್ತಿರುವ ಅಲೆಗಳು, ವಿಡಿಯೋ ವೈರಲ್


 ಭಾರೀ ಸುದ್ದಿ ಮಾಡುತ್ತಿದೆ ವಿಡಿಯೋ : 
ಈ ವಿಡಿಯೋ ಪೋಸ್ಟ್ ಮಾಡಿದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. weddingcouplepageandindianweddingpage ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ