Viral video : ಕೊಕ್ಕಿಗೆಟಕದ ಬಾಟಲಿ ನೀರನ್ನು ಜಾಣತನದಿಂದ ಕುಡಿಯುತ್ತಿರುವ ಹಕ್ಕಿ

 ಬಾಯಾರಿದ ಕಾಗೆ ಅನ್ನುವ ಕತೆಯನ್ನು ನಾವು ಸಣ್ಣವರಿದ್ದಾಗ ಓದಿ ತಿಳಿದಿದ್ದೇವೆ. ಅಥವಾ ಕೇಳಿ ತಿಳಿದಿದ್ದೇವೆ.  ಅದೊಂದು ಕೇವಲ ನೀತಿ ಕತೆ ಅಷ್ಟೇ . 

Written by - Ranjitha R K | Last Updated : Feb 28, 2022, 02:29 PM IST
  • ನಾವು ಮಾಡುವ ಪ್ರತಿಯೊಂದು ಕ್ರಿಯೆಯ ಹಿಂದೆಯೂ ವಿಜ್ಞಾನವಿದೆ.
  • ನಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ.
  • ಹಕ್ಕಿಗಳು ಕೂಡಾ ವಿಜ್ಞಾನವನ್ನು ಅಳವಡಿಸಿಕೊಂಡು ಬದುಕುತ್ತದೆ
 Viral video : ಕೊಕ್ಕಿಗೆಟಕದ ಬಾಟಲಿ ನೀರನ್ನು  ಜಾಣತನದಿಂದ ಕುಡಿಯುತ್ತಿರುವ  ಹಕ್ಕಿ   title=
ನಾವು ಮಾಡುವ ಪ್ರತಿಯೊಂದು ಕ್ರಿಯೆಯ ಹಿಂದೆಯೂ ವಿಜ್ಞಾನವಿದೆ. (photo twitter)

ನವದೆಹಲಿ : ನಾವು ಮಾಡುವ ಪ್ರತಿಯೊಂದು ಕ್ರಿಯೆಯ ಹಿಂದೆಯೂ  ವಿಜ್ಞಾನವಿದೆ. ವಸ್ತುಗಳು ಚಲಿಸಬೇಕಾದರೆ, ಮೇಲಕ್ಕೇಳಬೇಕಾದರೆ ಏನು ಕಾರಣ ಎನ್ನುವುದನ್ನು ವಿಜ್ಞಾನ ತಿಳಿಸುತ್ತದೆ. ನಾವು ಶಾಲೆಗೆ ಹೋಗಿ ಪಾಠ ಕಲಿತಿರುವ ಕಾರಣ ಪ್ರತೀ ಕ್ರಿಯೆಯ  ಹಿಂದಿರುವ ವಿಜ್ಞಾನದ ಬಗ್ಗೆಯೂ ತಿಳಿದಿರುತ್ತೇವೆ. ಹಾಗೆಯೇ ಅದನ್ನು ನಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ. ಇದರಲ್ಲಿ ವಿಶೇಷವೇನಿಲ್ಲ .. ಆದರೆ ಹಕ್ಕಿಗಳು ಕೂಡಾ ವಿಜ್ಞಾನವನ್ನು ಅಳವಡಿಸಿಕೊಂಡು ಬದುಕುತ್ತದೆ ಎಂದರೆ ಆಶ್ಚರ್ಯವಾಗುತ್ತದೆ.  

ಬಾಯಾರಿದ ಕಾಗೆ (Thirsty Crow) ಆನ್ನುವ ಕತೆಯನ್ನು ನಾವು ಸಣ್ಣವರಿದ್ದಾಗ ಓದಿ ತಿಳಿದಿದ್ದೇವೆ. ಅಥವಾ ಕೇಳಿ ತಿಳಿದಿದ್ದೇವೆ.  ಅದೊಂದು ಕೇವಲ ನೀತಿ ಕತೆ ಅಷ್ಟೇ (Moral story).  ಆದರೆ ಇಲ್ಲೊಂದು ಹಕ್ಕಿ ಆ ಕತೆಯಲ್ಲಿ ಬರುವ ಕಾಗೆಯಂತೆಯೇ ನೀರು ಕುಡಿಯಲು ತನ್ನ ಜಾಣತನವನ್ನು ಪ್ರದರ್ಶಿಸಿದೆ (Bird drinking water). 
 
 ಇದನ್ನೂ ಓದಿ : 
 https://zeenews.india.com/kannada/karnataka/man-stands-bravely-infront-o...

ಬಾಯಾರಿಕೊಂಡು ನೀರಿಗಾಗಿ ಹುಡುಕಿಕೊಂಡು ಬಂದ ಹಕ್ಕಿಗೆ ಬಾಟಲಿಯಲ್ಲಿ ನೀರು ಕಾಣಿಸಿದೆ. ಆದರೆ ಅದರಲ್ಲಿರುವ ನೀರು ಮಾತ್ರ ಈ ಹಕ್ಕಿಯ ಕೊಕ್ಕಿಗೆ ಎಟಕುತ್ತಿರಲಿಲ್ಲ.  ಹಾಗಂತ ಈ ಹಕ್ಕಿ ಏನು ಸುಮ್ಮನೆ ಕುಳಿತಿಲ್ಲ (Birds viral video).  ಅಲ್ಲೇ ಪಕ್ಕದಲ್ಲಿದ್ದ ಕಲ್ಲುಗಳನ್ನು ಹೆಕ್ಕಿ ಬಾಟಲಿಯೊಳಗೆ ಹಾಕಿ ನೀರು ಕುಡಿದಿದೆ. ಒಂದೊಂದು ಗುಟುಕು ನೀರು ಕುಡಿಯುವ ಮುನ್ನ ಒಂದೊಂದೇ ಕಲ್ಲುಗಳನ್ನು ತಂದು ಬಾಟಲಿಯೊಳಗೆ ಹಾಕಿದೆ. 

 

ಈ ಹಕ್ಕಿ ನೀರು ಕುಡಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ (Viral video). ಈ ವಿಡಿಯೋ ನೋಡಿದವರು ಬಹಳವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿಸಿಕ್ಸ್ ಗೊತ್ತಿರುವ ಹಕ್ಕಿ ಎಂದು ಕಮೆಂಟ್ ಮಾಡಿದ್ದಾರೆ. 

 ಇದನ್ನೂ ಓದಿ :  ಕಣ್ಮುಂದೆ ಮಾಯವಾದ ಮುಚ್ಚಳ! 9 ರಲ್ಲಿ 1 ಹೇಗೆ ಕಣ್ಮರೆಯಾಯಿತು? ಇಲ್ಲಿದೆ ಉತ್ತರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News